Phone update : ಕಳೆದ ಎರಡು ಮೂರುದಿನಗಳಿಂದ ನಿಮ್ಮ ಫೋನ್‌ನಲ್ಲಿ ಹೀಗೆ ತೋರಿಸ್ತಿದಿಯಾ? ಫೋನ್ ರಿಸೀವ್ ಮಾಡುವ ಸ್ಟೈಲ್ ಕೂಡ ಚೆಂಜಾ ಆಗಿದ್ಯಾ? ಇದು ಕೇವಲ ನಮ್ ಮೊಬೈಲ್ನಲ್ಲಿ ಮಾತ್ರ ಆಗಿರೋದಾ ಅಥವಾ ಎಲ್ಲರ ಮೊಬೈಲ್ನಲ್ಲಿಯು ಹೀಗೆ ಆಗ್ತಿದ್ಯಾ? ಹೀಗೆ ಹಲವು ಪ್ರಶ್ನೆಗಳು ಸದ್ಯ ಉದ್ಭವ ಆಗಿದೆ. ಇದೆಲ್ಲಕ್ಕೂ ಉತ್ತರ ಈ ಸುದ್ದಿ
ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಕೆದಾರರು ಇತ್ತೀಚೆಗೆ ಆ್ಯಂಡ್ರಾಯ್ಟ್ನ ಯೂನಿವರ್ಸಲ್ ಅಪ್‌ಡೇಟ್‌ನಿಂದಾಗಿ ಹೊಸದೊಂದು ಇಶ್ಯು ಎದುರಿಸುತ್ತಿದ್ದಾರೆ. ಈ ಹೊಸ ಅಪ್‌ಡೇಟ್‌ನಿಂದಾಗಿ ಕರೆ ಇಂಟರ್‌ಫೇಸ್, ಕರೆ ಸ್ವೀಕರಿಸುವ ಮತ್ತು ಸಂಪರ್ಕಗಳ ಪಟ್ಟಿಯ ಐಕಾನ್‌ಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಮೇಲೆ ಕೆಳಗೆ ಸ್ವೈಪ್ ಮಾಡುತ್ತಿದ್ದ ಜಾಗದಲ್ಲಿ ರೈಟು ಲೆಫ್ಟ್ ಸ್ವೈಪಿಂಗ್ ಆಪ್ಶನ್ ಬಂದಿದೆ. ಈ ಬದಲಾವಣೆಗಳು ಕೆಲವರಿಗೆ ಇಷ್ಟವಾಗಿದ್ದರೆ, ಇನ್ನೂ ಅನೇಕರಿಗೆ ಗೊಂದಲ ಮತ್ತು ಕಿರಿಕಿರಿಯನ್ನು ಉಂಟುಮಾಡಿವೆ. ಅದರಲ್ಲೂ, ಕರೆ ಸ್ವೀಕರಿಸಲು ಹಿಂದಿನಂತೆ ಸ್ಲೈಡ್ ಮಾಡುವ ಬದಲು ಹೊಸ ಬಟನ್‌ಗಳನ್ನು ಬಳಸಬೇಕಾದ್ದರಿಂದ ಕೆಲವರು ತೊಂದರೆ ಅನುಭವಿಸುತ್ತಿದ್ದಾರೆ.
Phone update ಹಲವಾರು ಬಳಕೆದಾರರು ಇದು ಕೇವಲ ತಮ್ಮ ಫೋನ್‌ನಲ್ಲಿ ಮಾತ್ರ ಆಗಿರಬಹುದೆಂದು ಭಾವಿಸಿದ್ದಾರೆ, ಆದರೆ ವಾಸ್ತವವಾಗಿ ಇದು ಆಂಡ್ರಾಯ್ಡ್ನ ಯೂನಿವರ್ಸಲ್ ಅಪ್‌ಡೇಟ್ ಪಡೆದ ಎಲ್ಲ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದಾಗಿ ತಮ್ಮ ಹಳೆಯ, ಪರಿಚಿತ ಇಂಟರ್‌ಫೇಸ್ ಅನ್ನು ಮರಳಿ ಪಡೆಯಲು ಬಯಸುವವರಿಗಾಗಿ ಇಲ್ಲಿದೆ ಒಂದು ಸರಳ ಪರಿಹಾರ.
Phone update : ಹಳೆಯ ಕರೆ ಇಂಟರ್‌ಫೇಸ್ ಮರಳಿ ಪಡೆಯುವುದು ಹೇಗೆ?
ನಿಮ್ಮ ಮೊಬೈಲ್‌ನ ಕರೆ ಇಂಟರ್‌ಫೇಸ್ ಅನ್ನು ಮೊದಲಿನಂತೆಯೇ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಮೊದಲಿಗೆ, ನಿಮ್ಮ ಮೊಬೈಲ್‌ನ ಹೋಮ್ ಸ್ಕ್ರೀನ್‌ನಲ್ಲಿರುವ ‘ಕಾಂಟ್ಯಾಕ್ಟ್ಸ್’ (Contacts) ಅಥವಾ ‘ಫೋನ್’ (Phone) ಆ್ಯಪ್ ಐಕಾನ್ ಮೇಲೆ ಸ್ವಲ್ಪ ಸಮಯ ಒತ್ತಿ ಹಿಡಿದುಕೊಳ್ಳಿ.
ಹೀಗೆ ಮಾಡಿದಾಗ, ಒಂದು ಹೊಸ ಮೆನು ತೆರೆಯುತ್ತದೆ. ಅದರಲ್ಲಿ ‘ಆ್ಯಪ್ ಇನ್‌ಫೋ’ (App info) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
‘ಆ್ಯಪ್ ಇನ್‌ಫೋ’ ಪುಟದಲ್ಲಿ, ಕೆಳಗೆ ಹಲವು ಆಯ್ಕೆಗಳು ಕಾಣಿಸುತ್ತವೆ. ಅವುಗಳಲ್ಲಿ ‘ಅನ್‌ಇನ್‌ಸ್ಟಾಲ್ ಅಪ್‌ಡೇಟ್ಸ್’ (Uninstall updates) ಎಂಬ ಆಯ್ಕೆಯನ್ನು ಹುಡುಕಿ.
‘ಅನ್‌ಇನ್‌ಸ್ಟಾಲ್ ಅಪ್‌ಡೇಟ್ಸ್’ ಮೇಲೆ ಕ್ಲಿಕ್ ಮಾಡಿದರೆ, ಗೂಗಲ್ ಅಪ್‌ಡೇಟ್‌ಗಳು ಕ್ಲಿಯರ್ ಆಗುತ್ತವೆ.
