ಶಿವಮೊಗ್ಗ ನಿವಾಸಿ ಶ್ವೇತ ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.
PhD course / ಸಹ ಪ್ರಾದ್ಯಾಪಕಿ ಡಾ. ಹಾಲಮ್ಮ ಎಂ ರವರ ಮಾರ್ಗದರ್ಶನ
ಇವರು ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾದ್ಯಾಪಕಿ ಡಾ. ಹಾಲಮ್ಮ ಎಂ. ಅವರ ಮಾರ್ಗದರ್ಶನದಲ್ಲಿ “ಎಸ್.ವಿ. ಪರಮೇಶ್ವರ ಭಟ್ಟರ ಸೃಜನಶೀಲ ಸಾಹಿತ್ಯ: ವಿಭಿನ್ನ ನೆಲೆಗಳು” ವಿಷಯದ ಕುರಿತು ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ. ಇವರು ಶಿವಮೊಗ್ಗ ನಿವಾಸಿ, ಭದ್ರ ಮೇಲ್ದಂಡೆ ಯೋಜನೆ, ಬಿ.ಆರ್. ಪ್ರಾಜೆಕ್ಟ್ನಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಹೆಚ್.ಎನ್. ಅವರ ಪತ್ನಿಯಾಗಿದ್ದಾರೆ.