ಚಿತ್ರಮಂದಿರಗಳಲ್ಲಿ 2 ನೇ ವಾರಕ್ಕೆ ಕಾಲಿಟ್ಟ ಪಾಠಶಾಲಾ ಚಿತ್ರ : ನಿರ್ದೇಶಕ ಹೆದ್ದೂರು ಮಂಜುನಾಥ್​ ಶೆಟ್ಟಿ ಏನಂದ್ರು.. ?

prathapa thirthahalli
Prathapa thirthahalli - content producer

ಶಿವಮೊಗ್ಗ: ನವೆಂಬರ್ 28 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದ ಪಾಠಶಾಲಾ  ಚಿತ್ರವು ಎಲ್ಲ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾದ ಹೆದ್ದೂರು  ಮಂಜುನಾಥ್ ಶೆಟ್ಟಿ ಹೇಳಿದರು.

ಪೆಟ್ರೋಲ್ ಬಿಲ್ ಇಳಿಕೆ! ಲೀಟರ್​ಗೆ 20 ರೂಪಾಯಿ ಆಗುತ್ತಾ? ನೀರಿಗಿಂತ ಅಗ್ಗವಾಗುತ್ತಾ ಇಂದನ ದರ! ಏನಿದು ವರದಿ!?

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಲೆನಾಡಿನ ಸೊಗಡನ್ನು ಇಟ್ಟುಕೊಂಡು ಪಾಠಶಾಲಾ ಚಿತ್ರವನ್ನು ಮಾಡಲಾಗಿದೆ. ಬಹುತೇಕ ಮಲೆನಾಡಿನ ಕಲಾವಿದರೇ ಈ ಚಿತ್ರದಲ್ಲಿ ನಟಿಸಿದ್ದು, ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರವು ಇದೀಗ 2ನೇ ವಾರಕ್ಕೆ ಕಾಲಿಡುತ್ತಿದೆ. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರ ಮತ್ತು ಎಲ್ಲಾ ಮಲ್ಟಿಪ್ಲೆಕ್ಸ್ ಸೇರಿದಂತೆ ಶಿವಮೊಗ್ಗದ ಭಾರತ್ ಸಿನಿಮಾಸ್, ಶ್ರೀ ಮಲ್ಲಿಕಾರ್ಜುನ ಚಿತ್ರಮಂದಿರ ಹಾಗೂ ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರ, ಕೊಪ್ಪ ಮತ್ತು ಸಾಗರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ಅವರು ವಿವರಿಸಿದರು.

SUNCONTROL_FINAL-scaled
Paathashale Success Malenadu Film Enters Second Week
Paathashale Success Malenadu Film Enters Second Week

Paathashale Success ಚಿತ್ರದ ಕಥೆ ಹಾಗೂ ಶೂಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಕಥೆಯು 80-90ರ ದಶಕದಲ್ಲಿ ಮಲೆನಾಡಿನ ಭಾಗದಲ್ಲಿ ನಡೆದ ನೈಜ ಕಥೆಯ ಒಂದು ಎಳೆಯನ್ನು ಹಿಡಿದುಕೊಂಡು ಮಾಡಲಾಗಿದೆ. ಹಣದ ಕೊರತೆಯಿಂದಾಗಿ ಮೊದಲು ಚಿತ್ರವನ್ನು ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣ ಮಾಡಲು ಯೋಚಿಸಲಾಗಿತ್ತು. ಆದರೆ ನಂತರ ತಾವು ಸೇರಿದಂತೆ ತಮ್ಮ 8 ಜನ ಸ್ನೇಹಿತರು ಕೂಡಿ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದೇವೆ ಎಂದರು. ಈ ಚಿತ್ರಕ್ಕೆ ಒಟ್ಟು 1.75 ಕೋಟಿ ಬಂಡವಾಳವನ್ನು ಹೂಡಲಾಗಿದೆ ಎಂದು ತಿಳಿಸಿದರು. 28 ದಿನ ನಡೆದ ಶೂಟಿಂಗ್‌ನಲ್ಲಿ ಯಾವುದೇ ವಿಎಫ್ಎಕ್ಸ್ ಬಳಸಲಿಲ್ಲ. ಮಳೆ, ಬಿಸಿಲು ಸೇರಿದಂತೆ ಎಲ್ಲವನ್ನೂ ಸ್ವಾಭಾವಿಕವಾಗಿಯೇ ಚಿತ್ರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಂತರ ಮಾತನಾಡಿದ ನಟ ಕೇಶವ್ ಅವರು, ತಾವು ಈ ಚಿತ್ರದಲ್ಲಿ ವಾಚರ್ ಶಿವಣ್ಣ ಎಂಬ ಕಾಮಿಡಿಯನ್ ಪಾತ್ರವನ್ನು ಮಾಡುತ್ತಿರುವುದಾಗಿ ಹೇಳಿದರು. ಇತ್ತೀಚೆಗೆ ಮಲೆನಾಡಿನ ಸೊಗಡು ಮರೆಯಾಗುತ್ತಿರುವ ಸಂದರ್ಭದಲ್ಲಿ, ಇಂತಹ ಚಿತ್ರದ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ನಮ್ಮ ನಿರ್ದೇಶಕರು ಮಾಡಿದ್ದಾರೆ. ಅಂಟಿಕೆ-ಪಿಂಟಿಗೆ ಸೇರಿದಂತೆ ಅನೇಕ ವಿಚಾರಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಕ್ಲೈಮ್ಯಾಕ್ಸ್ ಉತ್ತಮವಾಗಿ ಮೂಡಿಬಂದಿದೆ. ಎಲ್ಲರೂ ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಬೇಕು ಎಂದು ಮನವಿ ಮಾಡಿದರು.

SUNCONTROL_FINAL-scaled

Paathashale Success Malenadu Film Enters Second Week

Paathashale Success Malenadu Film Enters Second Week
Paathashale Success Malenadu Film Enters Second Week
Share This Article