MALENADUTODAY.COM | SHIVAMOGGA NEWS
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡುವಂತೆ ವಿಧಾನಸಭೆಯಲ್ಲಿ ಮಂಡಿಸುವುದಾಗಿ ಮಾಜಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಕಳೆದ ಭಾನುವಾರ ಘೋಷಣೆ ಮಾಡಿದ್ದಾರೆ. ಆದರೆ ಇದರ ಬೆನ್ನಲ್ಲೇ ಈಡಿಗ ಸಮುದಾಯದ ಮುಖಂಡರು ಈ ಸಂಬಂಧ ಅಸಮಾದಾನ ಹೊರಹಾಕಿದ್ಧಾರೆ. ಅಲ್ಲದೆ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರ ಹೆಸರನ್ನಿಡಬೇಕೆಂದು ಆಗಹಿಸಿದೆ.
ನಿನ್ನೆ ಈ ಸಂಬಂಧ ಮಾತನಾಡಿದ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಬಂಗಾರಪ್ಪ ಹೆಸರು ಇಡದೇ ಇರುವುದಕ್ಕೆ ಜಿಲ್ಲಾ ಆರ್ಯ ಈಡಿಗ ಸಂಘ ಬೇಸರ ವ್ಯಕ್ತಪಡಿಸುತ್ತದೆ. ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ನಾಂದಿಹಾಡಿದವರು. ಶಿವಮೊಗ್ಗ ಸ್ಟಾರ್ಟ್ ಸಿಟಿ ಬಗ್ಗೆ ಕನಸು ಕಂಡವರು, ತುಂಗಾ ಏತಾ ನೀರಾವರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಜಾರಿಗೆ ತಂದವರು. ಅಂತವರ ಹೆಸರನು ವಿಮಾನ ನಿಲ್ದಾಣಕ್ಕೆ ಇಡಬೇಕಿತ್ತು ಎಂದಿದ್ದಾರೆ.

ಹೆರಿಗೆ ವಾರ್ಡ್ನಲ್ಲಿ ಮಗು ಕೊಟ್ಟು ಹೋದವಳು ನಾಪತ್ತೆ! ಕಾಣೆಯಾಗಿದ್ದ ಮಗುವಿನ ಶವ ಕೆರೆಯಲ್ಲಿ ಪತ್ತೆ
ಧೀಮಂತ ನಾಯಕ ಎನಿಸಿಕೊಂಡಿದ್ದ ಅವರ ಹೆಸರನ್ನು ಸೋಗಾನೆ ವಿಮಾನ ನಿಲ್ದಾಣಕ್ಕೆ ಇಡಬೇಕು. ಶಿವಮೊಗ್ಗದಲ್ಲಿ ಅತಿ ಹೆಚ್ಚು ಜನರು ಇರುವ ಸಮುದಾಯ ಆರ್ಯ ಈಡಿಗರದ್ದು. ಕುವೆಂಪುರವರ ಹೆಸರನ್ನು ಹಲವಾರು ಕಡೆಗಳಲ್ಲಿ ಇಡಲಾಗಿದೆ. ಆದರೆ ಬಂಗಾರಪ್ಪನವರ ಹೆಸರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ದೂರಿದ್ದಾರೆ.
ಇನ್ನೊಂದೆಡೆ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷರು ಹಾಗೂ ನಾಲ್ವರು ಪದಾಧಿಕಾರಿಗಳು ನಡೆಸಿರುವ ಪತ್ರಿಕಾಗೊಷ್ಠಿ ಸರ್ವಸಮತ ನಿರ್ಣಯ ಅಲ್ಲ ಎಂದು ಉದ್ಯಮಿ ಸುರೇಶ್ ಕೆ.ಬಾಳೆಗುಂಡಿ ಆರೋಪಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಮೇಲೆ ಅಪಾರವಾದ ಗೌರವ ಇದೆ. ಈಡಿಗರ ಸಂಘ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ನಿರ್ದೇಶಕ ಮಂಡಳಿ ಸಭೆ ಕರೆದು ಚರ್ಚಿಸಬೇಕು. ಸಮಾಜದ ಹಿರಿಯರಾದ ಕಾಗೋಡು ತಿಮ್ಮಪ್ಪ, ಬಿ.ಸ್ವಾಮಿರಾವ್, ಡಾ. ಜಿ.ಡಿ. ನಾರಾಯಣಪ್ಪ, ಶಾಸಕ ಹರತಾಳು ಸಮಾಜದ ನಾಯಕರೊಂದಿಗೆ ಚರ್ಚಿಸಿ, ತಾಲೂಕು ಸಂಘಟನೆಗಳ ಅಭಿ ಪ್ರಾಯವನ್ನೂ ಪಡೆಯ ಬೇಕಾ ಗುತ್ತದೆ. ಆದರೆ ಸೋಮವಾರ ನಡೆದ ಪತ್ರಿಕಾಗೋಷ್ಟಿ ಕೇವಲ ನಾಲೈದು ಜನರ ಅಭಿಪ್ರಾಯವಾಗಿದೆ ಎಂದಿದ್ಧಾರೆ.

Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
