ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಖರೀದಿ ಹೆಚ್ಚಾಗುತ್ತಿದ್ದರೂ, ಇದರ ಜೊತೆಗೆ ಸೈಬರ್ ವಂಚನೆ ಪ್ರಕರಣಗಳು ಕೂಡ ವಿಪರೀತವಾಗಿ ಏರುತ್ತಿವೆ. ಆನ್‌ಲೈನ್‌ನಲ್ಲಿ ವಸ್ತುಗಳನ್ನು ತಲುಪಿಸುವ ನೆಪದಲ್ಲಿ ಹಣ ಪಡೆದು ಮೋಸ ಮಾಡುವ ಜಾಲಗಳು ಸಕ್ರಿಯವಾಗಿದ್ದು ಇಂತಹ ವಂಚನೆಗೆ ಸಾಗರ ಪಟ್ಟಣದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಸಿಮೆಂಟ್ ಖರೀದಿಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
Online Cement Fraud ಕಾಮಗಾರಿ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ 1000 ಬ್ಯಾಗ್ ಸಿಮೆಂಟ್ ಅಗತ್ಯವಿತ್ತು. ಆದರೆ, ಅವರು ಯಾವಾಗಲೂ ಖರೀದಿ ಮಾಡುತ್ತಿದ್ದ ಸಿಮೆಂಟ್ ಅಂಗಡಿಯಲ್ಲಿ ಸ್ಟಾಕ್ ಲಭ್ಯವಿರದ ಕಾರಣ, ಆನ್‌ಲೈನ್‌ನಲ್ಲಿ ಖರೀದಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅಪರಿಚಿತ ಆನ್‌ಲೈನ್ ಕಂಪನಿಯೊಂದರ ಮೊಬೈಲ್ ನಂಬರ್‌ಗಳು ಲಭ್ಯವಾಗಿವೆ.ಈ ನಂಬರ್‌ಗಳನ್ನು ಸಂಪರ್ಕಿಸಿದಾಗ, ವಂಚಕರು ಕೋರಮಂಡಲ್ (Coromandel) ಕಂಪನಿಯ ಹೆಸರನ್ನು ಬಳಸಿಕೊಂಡು, 1000 ಬ್ಯಾಗ್ ಸಿಮೆಂಟ್ ಕಳುಹಿಸಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಬಳಿಕ ದೂರುದಾರರ ವಾಟ್ಸಾಪ್‌ಗೆ ಕೊಟೇಶನ್ ಮಾಹಿತಿ ಕಳುಹಿಸಿ, ಒಟ್ಟು ಜಿ.ಎಸ್.ಟಿ. ಸೇರಿ 4,15,000 ಹಣವನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಶಾಖೆಯ ಖಾತೆಗೆ ಪೇ ಮಾಡುವಂತೆ ಹೇಳಿದ್ದಾರೆ.
ವಂಚಕರ ಮಾತನ್ನು ನಂಬಿದ ದೂರುದಾರರು ಹಂತ ಹಂತವಾಗಿ 4,15,000 ಪೇ ಮಾಡಿದ್ದಾರೆ. ಆದರೆ ಕೆಲ ದಿನಗಳು ಕಳೆದರೂ ಸಹ ಸಿಮೆಂಟ್ ತಲುಪಲೇ ಇಲ್ಲ. ಇದರಿಮದ ಗಾಬರಿಗೊಂಡ ದೂರುದಾರ ಅವರು ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿದ್ದಾರೆ. ಆಗ ಅವರ ಫೋನ್ಗಳು ಸ್ವಿಚ್ ಆಫ್ ಆಗಿರುವುದು ತಿಳಿದಿದೆ. ಆಗಲೇ ತಾವು ಮೋಸ ಹೋಗಿರುವುದು ಅರಿತುಕೊಂಡ ದೂರುದಾರರು ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Online Cement Fraud 4.15 Lakh Lost in Sagara


