ಹಲವು ವರ್ಷಗಳಲ್ಲಿ ಮತ್ತೆ ಸುದ್ದಿಯಾದ ಶಿವಮೊಗ್ಗದ ಆಯಿಲ್ ಕುಮಾರ್​ ಈಗ ವೈರಲ್​ ಮ್ಯಾನ್​

ajjimane ganesh

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 : ಶಿವಮೊಗ್ಗ ವ್ಯಕ್ತಿಯೊಬ್ಬ ಇದೀಗ ಮತ್ತೊಮ್ಮೆ ಟಿವಿ ಮಾದ್ಯಮಗಳು ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿದೆ. ಈ ಹಿಂದೆ ಸುಟ್ಟ ಆಯಿಲ್ ಅಥವಾ ಇಂಜಿನ್ ಆಯಿಲ್​ ಕುಡಿಯುವ ಮೂಲಕ ಸುದ್ದಿಯಾಗಿದ್ದ ಶಿವಮೊಗ್ಗ ಜಿಲ್ಲೆಯ ‘ಆಯಿಲ್ ಕುಮಾರ್’ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದು, ಸೋಶಿಯಲ;್​ ಮೀಡಿಯಾದಲ್ಲಿ ಈತನ ಬಗ್ಗೆಯೇ ಜನರು ಮಾತನಾಡುತ್ತಿದ್ದಾರೆ. 

ಶಬರಿಮಲೆ ಮಾಲೆ ಧರಿಸಿದ್ದ ಆಯಿಲ್ ಕುಮಾರ್​ ಇತ್ತೀಚೆಗೆ ಚಾಮರಾಜನಗರದಲ್ಲಿ ಕಾಣಿಸಿಕೊಂಡಿದ್ದ. ಅಲ್ಲಿನ ಮಾಧ್ಯಮಗಳು ಈತನ ಬಗ್ಗೆ ಸುದ್ದಿ ಕವರ್ ಮಾಡಿ ವರದಿ ಪ್ರಕಟಿಸಿದ್ದವು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 

ಅಂದಹಾಗೆ ಪ್ರತಿದಿನ 7-8 ಲೀಟರ್ ಇಂಜಿನ್ ಆಯಿಲ್ ಕುಡಿಯುತ್ತಾರೆ ಎನ್ನಲಾಗಿದೆ. ಒಂದು ಬಾಟಲಿಯಲ್ಲಿ ಇಂಜಿನ್ ಆಯಿಲ್​ ತುಂಬಿಕೊಳ್ಳುವ ಕುಮಾರ್, ಬಳಿಕ ಆಗಾಗ ಅದನ್ನೆ ಕುಡಿಯುತ್ತಿದ್ದಾನೆ. ಈತನಿಗೆ ಇದು ಆಹಾರವೆ ಆಗಿದ್ದು ಇದರಿಂದ ಕುಮಾರ್​ನ ಆರೋಗ್ಯಕ್ಕೂ ಏನೂ ಆಗಿಲ್ಲ. ಈ ಕಾರಣಕ್ಕೆ ಕುಮಾರನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.  

Oil Kumar from Shivamogga Drinks 8 Litres of Engine Oil Daily
Oil Kumar from Shivamogga Drinks 8 Litres of Engine Oil Daily

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Oil Kumar from Shivamogga Drinks 8 Litres of Engine Oil Daily

Dandavati River  Kannada  Horoscope car decor new

Share This Article