ಮುಸ್ಲಿಂ ಮತ ಹೇಳಿಕೆ | ಕೆ.ಎಸ್​.ಈಶ್ವರಪ್ಪರಿಗೆ ಮದ್ಯಂತರ ರಿಲೀಫ್​ ಹೈಕೋರ್ಟ್​

No Muslim votes | Hc stays FIR against KS Eshwarappa

ಮುಸ್ಲಿಂ ಮತ ಹೇಳಿಕೆ |  ಕೆ.ಎಸ್​.ಈಶ್ವರಪ್ಪರಿಗೆ  ಮದ್ಯಂತರ ರಿಲೀಫ್​ ಹೈಕೋರ್ಟ್​

BENGALURU  | KSESHWRAPPA  Dec 2, 2023 |  ಕಳೆದ ವಿಧಾನಸಭೆ ಚುನಾವಣೆ ವೇಳೆ 'ನಮಗೆ ಮುಸ್ಲಿಮರ ಮತ

ಬೇಡ' ಎಂಬ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಇದೀಗ ಈ ಎಫ್​ಐಆರ್​ಗೆ ಹೈಕೋರ್ಟ್ ತಡೆ ನೀಡಿದೆ. 



READ : ಶಿವಮೊಗ್ಗ-ಬೆಂಗಳೂರು ನಡುವೆ ರೆಸ್ಟೊರೆಂಟ್​ನಲ್ಲಿ ಪಿಸ್ತೂಲ್ ಕಳೆದುಕೊಂಡ ಪಿಎಸ್​ಐ

ಎಫ್ಐಆರ್​ಗೆ ತಡೆ ನೀಡಿದ ಹೈಕೋರ್ಟ್

ಈ ಸಂಬಂಧ ದಾಖಲಾಗಿರುವ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ. ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಕೆಎಸ್​ ಈಶ್ವರಪ್ಪ ಅರ್ಜಿ ಸಲ್ಲಿಸಿದ್ದರು 

ಅರ್ಜಿ ವಿಚಾರಣೆ ನಡೆಸಿದ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶಮಾಡಿ, ವಿಚಾರಣೆಯನ್ನುಡಿ.15ಕ್ಕೆ  ಮುಂದೂಡಿದೆ  



READ : ಎಸ್.ಎಸ್.ಎಲ್.ಸಿ.ಮತ್ತು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಲಿಸ್ಟ್!

ಮುಸ್ಲಿಂ ಮತ ಬೇಡ

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಶಿವಮೊಗ್ಗದ ಮನೆ ಆವರಣದಲ್ಲಿ 2023 ರ ಏ.25ರಂದು ವೀರಶೈವ ಲಿಂಗಾಯತ ಸಮುದಾಯದ ಸಭೆ ನಡೆದಿತ್ತು. ಈ ವೇಳೆ ಮಾತನಾಡಿದ್ದ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ 50 ರಿಂದ 55 ಸಾವಿರ ಮುಸ್ಲಿಂಮತದಾರರಿದ್ದಾರೆ. ಆದರೆ, ನಮಗೆ ಒಂದೇ ಒಂದು ಮುಸ್ಲಿಂ ಮತ ಬೇಡ ಎಂದು ಹೇಳಿದ್ದರು ಎಂದು ವರದಿಯಾಗಿತ್ತು.