Nikhil Kumaraswamy on JDS Membership Drive ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ: ಜೆಡಿಎಸ್ ಕುರಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿದ್ದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಇವತ್ತು ಅವರು ಜಿಲ್ಲೆಯ ಮಲ್ಲಾಪುರದ ಗುಡ್ಡದ ಮಲ್ಲಾಪುರ ದೇವಸ್ಥಾನದ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ‘ಜನರೊಂದಿಗೆ ಜನತಾದಳ’ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸುವುದಾಗಿ ಹೇಳಿದರು.
Nikhil Kumaraswamy on JDS Membership Drive
2004ರಲ್ಲಿ ಜೆಡಿಎಸ್ 58 ಶಾಸಕರನ್ನು ಗೆದ್ದ ನಂತರ ಪಕ್ಷ ಕುಸಿಯಲಾರಂಭಿಸಿತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅವರ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸುವೆ ಎಂದ ನಿಖಿಲ್, ರಾಜ್ಯಾದ್ಯಂತ ಕನಿಷ್ಠ 50 ಲಕ್ಷ ಹೊಸ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದ್ದೇವೆ . ಜಿಲ್ಲೆಯಲ್ಲಿ ಒಂದು ತಿಂಗಳೊಳಗೆ 25-30 ಸಾವಿರ ಸದಸ್ಯರನ್ನು ಸೇರಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಇದೇ ವೇಳೆ ಸೋಲಿನ ಭಯದಿಂದಲೇ ಕಾಂಗ್ರೆಸ್ ಸರ್ಕಾರ (Congress Government) ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುತ್ತಿಲ್ಲ ಎಂದು ಅವರು ದೂರಿದರು.

ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕೆಂಬ ಜೆಡಿಎಸ್ ವರಿಷ್ಠ ದೇವೇಗೌಡರ ಕನಸನ್ನು ಪ್ರಧಾನಿ ಮೋದಿ ನನಸು ಮಾಡಿದ್ದಾರೆ. ಇದು ಮಹಿಳೆಯರಿಗೆ ಭವಿಷ್ಯದಲ್ಲಿ ಸಹಕಾರಿಯಾಗಲಿದೆ. ಇನ್ನೂ, ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ (VISL factory) ಪುನಶ್ಚೇತನಕ್ಕೆ ಹೆಚ್ಡಿಕೆ ಮುನ್ನುಡಿ ಬರೆದಿದ್ದು, ವೈಜಾಗ್ ಸ್ಟೀಲ್ ಪ್ಲಾಂಟ್‌ಗೆ ಮರುಜೀವ ಪಡೆದಂತೆ, ವಿಐಎಸ್‌ಎಲ್ ಮರುಜೀವ ಪಡೆಯಲಿದೆ ಎಂದರು.
Nikhil Kumaraswamy, Siddaramaiah, JDS, VISL, Membership Drive, Sharada Pooryanayk, Bhadravati, Janarondige Janatadala, Elections, #NikhilKumaraswamy #JDS #Siddaramaiah #VISL #KarnatakaPolitics #Shivamogga #MembershipDrive #SharadaPooryanayk,
