SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 24, 2025
ಶಿವಮೊಗ್ಗ | ಕರ್ನಾಟಕ ರಾಷ್ಟ್ರೀಯ ಆರೋಗ್ಯ ಅಭಿಯಾನ ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳಿಗೆ ಆಕ್ಸಿಸ್ ಬ್ಯಾಂಕ್ 60 ಲಕ್ಷ ವೈಯಕ್ತಿಕ ವಿಮಾ ರಕ್ಷಣಾ ಮೊತ್ತ ಸೇರಿದಂತೆ ಇನ್ನಿತರೆ ಸಾಮಾಜಿಕ ಭದ್ರತಾ ಪ್ರಯೋಜನವನ್ನು ಒದಗಿಸುತ್ತದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರ ಸಂಘದ ಗೌರವಧ್ಯಕ್ಷ ಆಯನೂರು ಮಂಜುನಾಥ್ ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಾಷ್ಟ್ರೀಯ ಆರೋಗ್ಯ ಅಭಿಯಾನ ವ್ಯಾಪ್ತಿಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಸರ್ಕಾರ ಅತಿ ಕಡಿಮೆ ಸಂಬಳವನ್ನು ನಿಗದಿಪಡಿಸಿದ್ದು, ಇವರಿಗೆ ಯಾವುದೇ ಜೀವ ಭದ್ರತೆಯನ್ನು ಒದಗಿಸುವ ವಿಮೆಯನ್ನು ಇದುವರೆಗೆ ಸರ್ಕಾರ ಜಾರಿ ಮಾಡಲಿಲ್ಲ.
ಈ ಹಿನ್ನಲೆ ನಮ್ಮ ಸಂಘ ಕಮಿಷನರ್ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿ ಹೊರಾಟವನ್ನು ಕೈಗೊಂಡಿದ್ದೆವು. ನಮ್ಮ ಹೋರಾಟದ ಫಲವಾಗಿ ಇನ್ಮುಂದೆ ರಾಷ್ಟ್ರೀಯ ಆರೋಗ್ಯ ಅಭಿಯಾನ ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳಿಗೆ ಜೀವ ವಿಮೆ ಸೇರಿದಂತೆ ಇನ್ನಿತರೆ ಸಾಮಾಜಿಕ ಭದ್ರತಾ ಪ್ರಯೋಜಗಳು ಸಿಗುತ್ತದೆ.ಈ ಸಂಬಂಧ ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್‌ರವರು ಆಕ್ಸಿಸ್ ಬ್ಯಾಂಕ್ ನೊಂದಿಗೆ ಇದರ ಕುರಿತು ಒಪ್ಪಂದವೊಂದನ್ನು ಮಾಡಿಕೊಂಡಿದ್ದಾರೆ. ಈ ವಿಮಾ ಯೋಜನೆಗೆ ಉದ್ಯೋಗಿಗಳು ಯಾವುದೇ ಪ್ರೀಮಿಯಂ ಭರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಕರ್ನಾಟಕ ರಾಷ್ಟ್ರೀಯ ಆರೋಗ್ಯ ಅಭಿಯಾನ ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳಿಗೆ ಆಕ್ಸಿಸ್ ಬ್ಯಾಂಕ್ ನೀಡುವ ಸೌಲಭ್ಯಗಳೇನು
ಕರ್ತವ್ಯದ ಸಂದರ್ಭದಲ್ಲಿ ಅಥವಾ ಕರ್ತವ್ಯ ಮುಗಿದ ನಂತರ ಯಾವುದೇ ಅಪಘಾತದಿಂದ ಸಂಭವಿಸುವ ಮರಣದ ಸಂದರ್ಭದಲ್ಲಿ ಅವರ ಕುಟುಂಬಸ್ಥರಿಗೆ 60 ಲಕ್ಷ ರೂಪಾಯಿ ಸಂಪೂರ್ಣ ವಿಮಾ ರಕ್ಷಣೆ ನೀಡಲಾಗುತ್ತದೆ
ಉದ್ಯೋಗಿಗಳು ಯಾವುದೇ ಅಪಘಾತದಿಂದಾಗಿ ಸಂಪೂರ್ಣ ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿದ್ದರೆ 60 ಲಕ್ಷ ರೂಪಾಯಿಗಳನ್ನು ನೀಡಲಾಗುವುದು
ಯಾವುದೇ ಅಪಘಾತದಿಂದಾಗಿ ಭಾಗಶ: ಅಂಗವೈಕಲ್ಯವಾದರೆ ವಿಮಾ ಮೊತ್ತದ ಶೇಕಡಾ 75% ವರೆಗೆ ಪರಿಹಾರ ನೀಡಲಾಗುತ್ತದೆ
60 ವರ್ಷ ವಯಸ್ಸಿನ ಒಳಗಿನ ಉದ್ಯೋಗಿಗಳು ಸಹಜ ಮರಣ ಹೊಂದಿದರೆ ಕುಟುಂಬಕ್ಕೆ 10 ಲಕ್ಷ ಪರಿಹಾರ
ಉದ್ಯೋಗಿಯ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ನೋಡುವುದಾದರೆ
ಉದ್ಯೋಗಿ ಮರಣ ಹೊಂದಿದ ಸಂದರ್ಭದಲ್ಲಿ ಉದ್ಯೋಗಿಗೆ ಒಬ್ಬ ಅಥವಾ ಹೆಚ್ಚಿನ ಗಂಡು ಮಕ್ಕಳಿದ್ದರೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು
ಒಂದು ಅಥವಾ ಹೆಚ್ಚಿನ ಹೆಣ್ಣು ಮಕ್ಕಳಿಗೆ 8 ಲಕ್ಷ ಪರಿಹಾರ ನೀಡಲಾಗುವುದು (ಉದ್ಯೋಗಿಯ ಮರಣದ ಸಂದರ್ಭದಲ್ಲಿ ಹೆಣ್ಣು ಮಗು ವಿದ್ಯಾಭ್ಯಾಸ ಮಾಡುತ್ತಿರುವ ಷರತ್ತಿನಡಿ)
ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದರೆ 8 ಲಕ್ಷ ಪರಿಹಾರ ನೀಡಲಾಗುವುದು
SUMMARY | Axis Bank provides a personal insurance cover of Rs 60 lakh and other social security benefits to the employees covered under the Karnataka National Health Mission
KEYWORDS | Axis Bank, personal insurance, nhm, employees,