ಡಿಸೆಂಬರ್,03, 2025 : ಮಲೆನಾಡು ಟುಡೆ ಸುದ್ದಿ : ಸಾವಿಗೆ ಸಾವಿರ ದಾರಿ, ಸಾವು ಸಂಭವಿಸುವ ಹೊತ್ತು ಸಾವಿಗೂ ತಿಳಿಯದು. ಕೆಲವೊಮ್ಮೆ ಈ ಸಾವು ಬರುವ ಹೊತ್ತು! ಛೇ ಹೀಗಾಗಬಾರದಿತ್ತು! ಇದು ನಡಿಬಾರದಿತ್ತು! ಎಲ್ಲಾ ವಿಧಿ! ದೇವರೇ ನೀನಿದ್ದೀಯಾ ಎಂದು ಪ್ರಶ್ನೆ ಮಾಡುವಂಥೆ ಮಾಡುತ್ತದೆ. ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರ ಸಾವು, ಮತ್ತದೆ ಪ್ರಶ್ನೆಯನ್ನು ಕೇಳುವಂತೆ ಮಾಡಿದೆ. ಏಕೆಂದರೆ ಈ ಘಟನೆಯಲ್ಲಿ ಬದುಕಿ ಬಾಳುವ ಕನಸುಗಳೊಂದಿಗೆ ಹಸಮಣೆ ಏರಿ ಸಾಂಸಾರಿಕ ಜೀವನಕ್ಕೆ ಕಾಲಿಡಲು ದೇವರಿಗೆ ಕೈ ಮುಗಿದ ಹೊತ್ತಿನಲ್ಲಿಯೇ ಯುವಕನೊಬ್ಬ ಇಹಲೋಕವನ್ನ ಬಿಟ್ಟು ತೆರಳಿದ್ದಾನೆ.

ಇವತ್ತಿನದ ದಿನ ವಿಶೇಷದಲ್ಲಿ ಹಲವು ವಿಚಾರಗಳು! ದಿನಭವಿಷ್ಯ ಓದಿ
ಮಧಮಗನಿಗೆ ಹೃದಾಯಾಘಾತ
ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದ ನಿವಾಸಿ 30 ವರ್ಷದ ರಮೇಶ್ ಎಂಬಾತ, ಹಾರ್ಟ್ ಅಟ್ಯಾಕ್ ಆಗಿ ಮೊನ್ನೆ ಸೋಮವಾರ ಸಾವನ್ನಪ್ಪಿದ್ದಾರೆ.ಸಣ್ಣ ವಯಸ್ಸಿನಲ್ಲಿಯೇ ಜೀವ ಬಿಟ್ಟ ರಮೇಶ್ರ ಸಾವಿನ ಸುದ್ದಿ ಕೇಳಿದವರೆಲ್ಲಾ ದೇವರ ಮೇಲೆಯೇ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿಯು ಆತ ಮದುವೆಯಾಗಿ ಒಂದು ಕಳೆಯುವಷ್ಟರಲ್ಲಿಯೇ ಸಾವನ್ನಪ್ಪಿರುವುದು ಎರಡೂ ಕುಟುಂಬಗಳಲ್ಲಿ ದಃಖದ ಜೊತೆಗೆ ಆಘಾತವನ್ನು ಸಹ ನೀಡಿದೆ.

ಮಲೆನಾಡು ಸೇರಿ ವಿವಿಧೆಡೆ ಅಡಿಕೆ ದರ ಹೇಗಿದೆ? ಪ್ರಮುಖ ಮಾರುಕಟ್ಟೆಗಳ ಲೇಟೆಸ್ಟ್ ರೇಟ್ ಇಲ್ಲಿದೆ
ಹರಪನಹಳ್ಳಿಯಲ್ಲಿ ಘಟನೆ
ಹನುಮಂತಾಪುರ ಗ್ರಾಮದ ನಿವಾಸಿ ರಮೇಶ್ ಕಳೆದ ಭಾನುವಾರ ಹರಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ನವ ದಂಪತಿಗಳು ಸಂಪ್ರದಾಯದಂತೆ ವಧುವಿನ ಮನೆಗೆ ತೆರಳಿದ್ದರು. ಸೋಮವಾರ ವಧುವಿನ ಮನೆಯಲ್ಲಿ ದೇವರ ಮನೆಯಲ್ಲಿ ಪೂಜೆ ಸಲ್ಲಿಸಿ, ಕೈ ಮುಗಿದು ಹೊರಗೆ ಬರುತ್ತಿದ್ದಂತೆಯೇ ರಮೇಶ್ ದಿಢೀರನೆ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ, ರಮೇಶ್ ಕುಸಿದಲ್ಲಿಯೇ ಸಾವನ್ನಪ್ಪಿದ್ದರು. ಮೃತರ ಅಂತ್ಯಕ್ರಿಯೆಯು ಮಂಗಳವಾರ ಹೊಸಕೊಪ್ಪದಲ್ಲಿ ನೆರವೇರಿತು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
