ಹೊಸ ವಜ್ರಮುನಿ ಪ್ರಕಾಶ್‌ ಹೆಗ್ಗೋಡು, ರಂಗಭೂಮಿಯ ಯೇಸು ಪ್ರಕಾಶ್‌ ಇನ್ನಿಲ್ಲ

New Vajramuni Prakash heggodu, Yesu Prakash of theater is no more

ಹೊಸ ವಜ್ರಮುನಿ ಪ್ರಕಾಶ್‌ ಹೆಗ್ಗೋಡು, ರಂಗಭೂಮಿಯ ಯೇಸು ಪ್ರಕಾಶ್‌ ಇನ್ನಿಲ್ಲ
Prakash heggodu, Yesu Prakash

Shivamogga Mar 31, 2024  Prakash heggodu, Yesu Prakash  ಮಲೆನಾಡ ಹೆಮ್ಮೆ ಎನಿಸಿದ್ದ ಹಾಗೂ ಚಿತ್ರರಂದಲ್ಲಿ ಹೊಸ ವಜ್ರಮುನಿ ಎಂದು ಕರೆಸಿಕೊಳ್ತಿದ್ದ ಮತ್ತು ಯಕ್ಷಗಾನಕ್ಕಾಗಿ ತಮ್ಮಿಡಿ ಕಟುಂಬವನ್ನು ಮುಡಿಪಾಗಿಸಿದ್ದ ನಟ, ರಂಗಕಲಾವಿದ, ಪರಿಸರ ಪ್ರೇಮಿ ಯೇಸು ಪ್ರಕಾಶ್‌ ನಿನ್ನೆ ನಿಧನರಾಗಿದ್ದಾರೆ. 

ಹೆಗ್ಗೋಡು ನೀನಾಸಂನ ಪ್ರತಿಭಾವಂತ ಕಲಾವಿದರಾಗಿದ್ದ ಇವರು ಕೆ.ವಿ.ಸುಬ್ಬಣ್ಣ ಹಾಗೂ ಅಕ್ಷರರವರ ಆಪ್ತರಾಗಿದ್ದರು. ಕಲೆಯನ್ನ ಜೀವನವಾಗಿ ರೂಡಿಸಿಕೊಂಡಿದ್ದ ಯೇಸು ಪ್ರಕಾಶ್‌, ಎಸ್.ನಾರಾಯಣ್ ನಿರ್ದೇಶನದ ‘ವೀರು’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.. 

ಅಲ್ಲಿಂದ ಸ್ಟಾರ್‌ ಹೀರೋಗಳಿಗೆ ಆಫೋಸಿಟ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಜಾಹುಲಿ, ಯಾರೇ ಕೂಗಾಡಲಿ, ಸಾರಥಿ, ಯೋಧ, ಕಲ್ಪನಾ-2 ಹೀಗೆ ಸುಮಾರು 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಸಿನಿಪಯಣದ ಜೊತೆಯಲ್ಲಿಯೇ  100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು. 

ವಿಶೇಷ ಅಂದರೆ ಕ್ರಿಶ್ಚಿಯನ್‌ ಕುಟುಂಬವಾದರೂ ಯಕ್ಷಗಾನದ ಬಗ್ಗೆ ಯೇಸು ಪ್ರಕಾಶ್‌ ವಿಶೇಷ ಕುತೂಹಲ ಹೊಂದಿದ್ದರು. ಅಲ್ಲದೆ ತಮ್ಮಿಡಿ ಕುಟುಂಬವನ್ನು ಯಕ್ಷಗಾನಕ್ಕಾಗಿ ಸಮರ್ಪಿಸಿಕೊಂಡಿದ್ದರು. ಆಟ, ಪ್ರಸಂಗದ ಆಯೋಜನೆ ಜೊತೆಗೆ ಕೆಲವು ಯಕ್ಷಗಾನಗಳಲ್ಲಿ ಬಣ್ಣ ಹಚ್ಚಿ ಪಾತ್ರ ಮಾಡಿದ್ದರು.. 

ಸಿನಿಮಾ, ರಂಗಭೂಮಿ, ಯಕ್ಷಗಾನವಷ್ಟೆ ಅಲ್ಲದೆ ಪರಿಸರ ಕಾಳಜಿಗಾಗಿ ತಮ್ಮದೇ ಸ್ನೇಹಿತರ ಬಳಗಕಟ್ಟಿಕೊಂಡು ಓಡಾಡುತ್ತಿದ್ದ ಯೇಸು ಪ್ರಕಾಶ್‌, ನೀರಿನ ಸೆಲೆಗಳನ್ನು ಉಳಿಸುವ ಕಾರ್ಯಗಳನ್ನ ಮಾಡಿದ್ದರು. 

ಇವರಿಗೆ ಸುಮಾರು 50 ವರ್ಷ ವಯಸ್ಸಾಗಿತ್ತು. ಕೆಲವು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಅವರು ಸಾವನ್ನಪ್ಪಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರರಿದ್ದಾರೆ. ಸಿನಿ ಪಯಣದಲ್ಲಿ ಪ್ರಕಾಶ್‌ ಹೆಗ್ಗೋಡು ಎಂದು ಗುರುತಿಸಿಕೊಂಡಿದ್ದ ಇವರು ಸ್ಥಳೀಯವಾಗಿ ಯೇಸುಪ್ರಕಾಶ್‌ ಕಲ್ಲುಕೊಪ್ಪ ಎಂದು ಎಲ್ಲರಿಗೂ ಪರಿಚಯಸ್ಥರಾಗಿದ್ದರು.