ಮಲೆನಾಡು ಟುಡೆ ಸುದ್ದಿ, ಶಿಮೊಗ್ಗ ಸೆಪ್ಟೆಂಬರ್ 4 2025 : ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಹೊಸ ಸೇವೆಗಳನ್ನು ಆರಂಭಿಸಲಾಗಿದೆ. ಇದರಿಂದಾಗಿ ಕೈಗೆಟುಕುವ ದರದಲ್ಲಿ ಜನರು ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ. ಈ ಬಗ್ಗೆ ಪ್ರಕಟಣೆಯನ್ನು ಸಹ ನೀಡಲಾಗಿದೆ.
ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ನಂತರ ಈ ರೀತಿಯ ಹೆಚ್ಚುವರಿ ಸೇವೆಗಳನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ನೀಡುತ್ತಿದೆ. (shivamogga institute of medical sciences)
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದಲ್ಲಿ ಈಗಾಗಲೇ ಹೃದಯರೋಗ ಮತ್ತು ನರರೋಗ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದವು. ಈಗ ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ನ್ಯೂರೋಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸೆ (Pediatric Surgery), ಮೂತ್ರರೋಗ ಶಸ್ತ್ರಚಿಕಿತ್ಸೆ ಮತ್ತು ಕಿಡ್ನಿ (Nephrology) ರೋಗಗಳ ಚಿಕಿತ್ಸೆಗಳು ಲಭ್ಯವಾಗಲಿವೆ ಎಂದು ಮೆಗ್ಗಾನ್ನ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.
ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
- ಇವತ್ತಿನಿಂದಲೇ ಅಂದರೆ 2025 ರ ಸೆಪ್ಟೆಂಬರ್ 4 ರಿಂದಲೇ ಈ ಸೇವೆಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯವಾಗಲಿದೆ. ಕಾರ್ಯಾರಂಭಗೊಳ್ಳುತ್ತಿವೆ.
- ಇದೇ ವೇಳೆ, ಹೊಸದಾಗಿ ಸೇರ್ಪಡೆಗೊಂಡ ಮೂತ್ರರೋಗ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ಮೂತ್ರಪಿಂಡ ಸರ್ಜರಿ ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರ ಸೇವೆ ಸೋಮವಾರ ಮತ್ತು ಗುರುವಾರ ಲಭ್ಯವಿರುತ್ತವೆ.
- ನರರೋಗ ವಿಭಾಗದ ಹೊರರೋಗಿಗಳ ಸೇವೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಿಗಲಿದೆ.
- ನರರೋಗ ಶಸ್ತ್ರಚಿಕಿತ್ಸೆಯ ಸೇವೆ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಲಭ್ಯವಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ /New Super Speciality Services
ಚಿಕಿತ್ಸೆಯ ನಂತರ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ, ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುವುದು. ವಿಶೇಷವಾಗಿ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಎ.ಬಿ.ಎ.ಆರ್.ಕೆ (Ayushman Bharat Arogya Karnataka) ಯೋಜನೆಯಡಿ ಸಂಪೂರ್ಣ ಉಚಿತ ಚಿಕಿತ್ಸೆಯ ಸೌಲಭ್ಯ ದೊರೆಯಲಿದೆ. ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಹೊಸ ವಾರ್ಡ್‌ಗಳನ್ನು ಕೂಡ ತೆರೆಯಲಾಗಿದ್ದು, ರೋಗಿಗಳು ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಲಾಗಿದೆ.
New Super Speciality Services at McGann Hospital, including Plastic, Cancer, Neuro, and Pediatric surgery, offering free treatment for BPL cardholders under the AB-ARK scheme
New super speciality services Shivamogga, McGann hospital new facilities, free treatment for BPL cardholders, Shivamogga Institute of Medical Sciences new services, kidney treatment Shivamogga McGann hospital super speciality, SIMS Shivamogga new services, Shivamogga hospital facilities, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ ವೈದ್ಯಕೀಯ ಸಂಸ್ಥೆ, ಸೂಪರ್ ಸ್ಪೆಷಾಲಿಟಿ ಸೇವೆಗಳು, ಶಿವಮೊಗ್ಗ, ಉಚಿತ ಚಿಕಿತ್ಸೆ, ಕ್ಯಾನ್ಸರ್ ಸರ್ಜರಿ, ನ್ಯೂರೋಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸೆ, ಮೂತ್ರರೋಗ ಚಿಕಿತ್ಸೆ, ಎ.ಬಿ.ಎ.ಆರ್.ಕೆ ಯೋಜನೆ, ಬಿಪಿಎಲ್ ಕಾರ್ಡ್.