ಸಾಗರದಲ್ಲಿ ನಮಾಜಿಗೆ ಹೋಗುವಾಗ ಮುಸ್ಲಿಮ್ ಮುಖಂಡನ ಮೇಲೆ ಹಲ್ಲೆ

Malenadu Today

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಇವತ್ತು (20-01-23) ಹಲ್ಲೆ ಪ್ರಕರಣವೊಂದು ನಡೆದಿದೆ. ಇಲ್ಲಿನ ಸ್ಥಳೀಯ ಮುಸ್ಲಿಮ್​ ಸಮುದಾಯದ ಮುಖಂಡನ ಮೇಲೆ ಅದೇ ಸಮುದಾಯದ ಇಬ್ಬರು ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ. 

ಎಫ್​ಐಆರ್​ನಲ್ಲಿ ದಾಖಲಾಗಿರುವ ಪ್ರಕಾರ,  ದಿನಾಂಕ:-20/01/2023 ರಂದು 11-55 ಎಂ ಗಂಟೆ ಸಮಯದಲ್ಲಿ ಸ್ಥಳೀಯರ ಮುಸ್ಲಿಂ ಮುಖಂಡ ಫಯಾಜ್ ಅಹಮದ್ ಎಂಬವರು  ನಮಾಜ್ ಮಾಡಲು ಆಜಾದ್ ಮಸೀದಿಗೆ ಹೋಗಲು ಸಾಗರ ಟೌನ್‌ ಬಿ.ಹೆಚ್‌ ರಸ್ತೆ ಎಲ್ ಐಸಿ ಕಚೇರಿ ಹತ್ತಿರ ಹೋಗುತ್ತಿರುವಾಗ ಜಮೀಲ್‌ ಮತ್ತು ಸೈಯದ್‌ ರಿಜ್ಞಾನ್‌ ರವರು ಎಂಬವರು ಹಲ್ಲೆ ನಡೆಸಿದ್ಧಾರೆ.

ಜಮೀಲ್​ ಎಂಬಾತ  ಕೈಯಿಂದ ಎದೆಗೆ ಹೊಟ್ಟೆಗೆ, ಬೆನ್ನಿಗೆ ಹೊಡೆದು ಕಾಲಿನಿಂದ ಒದ್ದು ನೆಲಕ್ಕೆ ಬೀಳಿಸಿದ್ದು, ಸೈಯದ್‌ ರಿಜ್ವಾನ್​​  ಎದೆಗೆ ಕಬ್ಬಿಣದ ರಾಡಿನಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಎಂದು ಕೊಲೆ ಬೆದರಿಕೆ ಹಾಕಿದ್ಧಾರಂತೆ.ಇನ್ನೂ ಈ ವೇಳೆ ಸ್ಥಳಿಯರು ಜಗಳ ಬಿಡಿಸಿ ಫಯಾಜ್​ರನ್ನು  ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ಧಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article