murder case : ಸತೀಶ್ ಶೆಟ್ಟಿ ಕೊಲೆ ಪ್ರಕರಣದ ಇಬ್ಬರಿಗೆ ಜೀವಾವಧಿ ಶಿಕ್ಷೆ | 10 ಸಾವಿರ ದಂಡ

prathapa thirthahalli
Prathapa thirthahalli - content producer

murder case : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ್ತಿಕೆರೆ ಗ್ರಾಮದ ನಿವಾಸಿ ಸತೀಶ್ ಶೆಟ್ಟಿ  ಎಂಬವರರ ಕೊಲೆ ಕೇಸ್​ನಲ್ಲಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ನಿನ್ನೆ ದಿನ ಮಂಗಳವಾರ ಈ ತೀರ್ಪು ಪ್ರಕಟಿಸಿದ್ದು, ಅಪರಾಧಿಗಳಿಗೆ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

murder case : ಹೊಸನಗರದಲ್ಲಿ ನಡೆದಿದ್ದ ಘಟನೆ 

ಹೊಸನಗರ ತಾಲ್ಲೂಕು ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ್ತಿಕೆರೆ ಗ್ರಾಮದ ಸತೀಶ್ ಶೆಟ್ಟಿ, ಇಲ್ಲಿನ ಫಯಾಜ್ ಹಾಗೂ ಕೃಷ್ಣ ಅವರೊಂದಿಗೆ ಗಾರೆ ಕೆಲಸ ಮಾಡುತ್ತಿದ್ದರು. 2021 ಡಿಸೆಂಬರ್​ 22 ರಂದು ಇವರ ನಡುವೆ ಕೂಲಿ ಹಣದ ವಿಚಾರಕ್ಕಾಗಿ ಗಲಾಟೆ ನಡೆದಿತ್ತು. ಇದೇ ಕಾರಣಕ್ಕೆ ಆರೋಪಿಗಳು ಸತೀಶ್​ ಶೆಟ್ಟಿಯನ್ನು ಕೊಲೆ ಮಾಡಿದ್ದರು.  

ಇಲ್ಲಿನ ಅಮೃತ ಗ್ರಾಮದ ಕೆಳಗಿನ ಕೆರೆಯ ದಂಡೆಗೆ ಸತೀಶ್​ ಶೆಟ್ಟಿಯನ್ನು ಕರೆದುಕೊಂಡು ಹೋಗಿದ್ದ ಆರೋಪಿಗಳು, ಅಲ್ಲಿ ಕತ್ತಿ ಮತ್ತು ಚಾಕುವಿನಿಂದ ಆತನ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದರು.ಕೃತ್ಯವೆಸಗಿದ ಬಳಿಕ, ಯಾರಿಗೂ ಅನುಮಾನ ಬರಬಾರದೆಂದು, ಸತೀಶ್​ ಶೆಟ್ಟಿಯ ಶವವನ್ನು ಕೆರೆಗೆ ಎಸೆದು ಸಾಕ್ಷ್ಯ ನಾಶ ಮಾಡಿದ್ದರು. ಇನ್ನು ಘಟನೆ ನಡೆದು ಕೆಲ ದಿನಗಳಲ್ಲಿ ಸತೀಶ್​ ಶೆಟ್ಟಿಯವರ ಶವ ನೀರಿನಲ್ಲಿ ತೇಲುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ಬಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಸತೀಶ್ ಶೆಟ್ಟಿಯವರ ಭಾವ ರಾಜುಶೆಟ್ಟಿ, ಇದು ಆಕಸ್ಮಿಕ ಸಾವಲ್ಲ, ಕೊಲೆ ಎಂದು ದೂರು ಕೊಟ್ಟಿದ್ದರು. ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸಿ, ಪ್ರಕರಣದ ಕುರಿತಾಗಿ ಚಾರ್ಜ್​ಶೀಟ್​ ಸಲ್ಲಿಸಿದ್ದರು. 

murder case : ಚಾರ್ಜ್​ಶೀಟ್​ನಲ್ಲಿ ಫಯಾಜ್ ಹಾಗೂ ಕೃಷ್ಣರವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇನ್ನೂ ಪ್ರಕರಣವೂ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದು, ಅಂತಿಮ ತೀರ್ಪು ಇದೀಗ ಮಂಗಳವಾರ ಹೊರಬಿದ್ದಿದೆ.

ನ್ಯಾಯಾಧೀಶರಾದ ಪ್ರಭಾವತಿ ಜಿ,ಯವರು, ಕೊಲೆ ಹಾಗೂ ಸಾಕ್ಷ್ಯ ನಾಶದ ಆರೋಪ ಸಂಬಂಧ  ಫಯಾಜ್ ಮತ್ತು ಕೃಷ್ಣ ರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹10 ಸಾವಿರ ದಂಡ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಕೀಲ ಅಣ್ಣಪ್ಪ ನಾಯ್ಕ ವಾದ ಮಂಡಿಸಿದ್ದರು.

 

TAGGED:
Share This Article