ಚಿಕ್ಕಮಗಳೂರು: ಗೋಡೌನ್‌ವೊಂದರಲ್ಲಿ ಶೇಖರಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿಬೀಜ ಕಳ್ಳತನ ಪ್ರಕರಣದಲ್ಲಿ 7 ಜನ ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಎಸ್ಟೇಟ್‌ನಲ್ಲಿ ಕೆಲಸಕ್ಕಿದ್ದವರೇ ಕಳ್ಳತನ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ, ಮೂಡಿಗೆರೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಒಟ್ಟು ಎರಡು ಕಡೆ ಕಾಪಿಬೀಜ ಕಳ್ಳತನದ ಘಟನೆ ನಡೆದಿತ್ತು. ಈ ಸಂಬಂಧ ಒಟ್ಟು ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ 3 ಲಕ್ಷ 50 ಸಾವಿರ ರೂ. ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ರೂ. ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
Mudigere Coffee Case

ರಾಶಿ ,ಬೆಟ್ಟೆ ದರದಲ್ಲಿ ಏರೀಳಿತ! ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಅಡಿಕೆ ರೇಟು!ಮುಖ್ಯವಾಗಿ ಶಿವಮೊಗ್ಗ ಅಡಿಕೆ ದರ?
ಗೋಣಿಬೀಡು ಸಮೀಪದ ಕಬೈಲ್ ಗ್ರಾಮದ ರಂಗನಾಥ್ ಅವರ ಕಾಫಿ ಎಸ್ಟೇಟ್‌ನಲ್ಲಿ ಗೋಡೌನ್‌ನಲ್ಲಿ ಶೇಖರಿಸಿದ್ದ ಕಾಫಿಬೀಜ ಕಳ್ಳತನ ಮಾಡಲಾಗಿತ್ತು. ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸಕಲೇಶಪುರ ಮೂಲದ ನಾಗರಾಜು, ಶಿಶಿರ, ಕೌಶಿಕ್, ಭರತ್, ಗೌತಮ್, ಪ್ರಶಾಂತ್, ಮನು ಎಂಬ ಆರು ಜನ ಆರೋಪಿಗಳನ್ನು ಬಂಧಿಸಿದ್ದು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಕೌಶಿಕ್ ಎಂಬಾತ ರಂಗನಾಥ್ ಅವರ ಕೆಲಸ ಆರೋಪಿಗಳ ಎಸ್ಟೇಟ್ ನಲ್ಲಿ ಮಾಡಿಕೊಂಡಿದ್ದುಂತರೆ ಜತೆ ಸೇರಿ ಕೃತ್ಯಕ್ಕೆ ಸಂಚು ರೂಪಿಸಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದೇ ಆರೋಪಿಗಳು ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಸಣ್ಣ ಮುನ್ನೆಚ್ಚರಿಕೆಯಿಂದ ಸುಗಮವಾಗಿ ಸಾಗಿದ ಚಿಕ್ಕಮಗಳೂರು-ಶಿವಮೊಗ ಟ್ರೈನ್! ಕಣಿವೆ ಗ್ರಾಮದಲ್ಲಿ ಏನಾಯ್ತು ಓದಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
