Mudhol Dog catch Sandalwood Thieves ಶಿಕಾರಿಪುರ, malenadu today news : ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀಗಂಧ ಕಳ್ಳತನದ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗಿನ ಮೊಲದ ಶ್ರೀಗಂಧ ಕಳ್ಲತನದ ಪ್ರಕರಣ ಇದಾಗಿದೆ.
ಶಿಕಾರಿಪುರ ಅರಣ್ಯ ಇಲಾಖೆ
ಪ್ರಕರಣದ ವಿವರ ಗಮನಿಸುವುದಾದರೆ, ಶಿಕಾರಿಪುರ ತಾಲ್ಲೂಕು ವಲಯದ ಕೆಂಗಟ್ಟೆ ಶ್ರೀಗಂಧ ಮೀಸಲಿನಲ್ಲಿ ಶ್ರೀಗಂಧ ಮರ ಕಳ್ಳತನಕ್ಕೆ ಪ್ರಯತ್ನಿಸಿದ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ವಿಷಯ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅನುಮಾನದ ಮೇರೆಗೆ ಅಧಿಕಾರಿ ವರ್ಗ ಕಾರ್ಯಾಚರಣೆ ನಡೆಸಿದೆ.

ಅಲ್ಲದೆ ಈ ಕಾರ್ಯಾಚರಣೆಗೆ ಮುದೋಳ್ ನಾಯಿಯನ್ನು ಬಳಸಿಕೊಂಡು ಕಳ್ಳರನ್ನು ಪತ್ತೆ ಹಚ್ಚಿ ಒಬ್ಬರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರೇವಣಸಿದ್ಧಯ್ಯ ಬಿ ಹಿರೇಮಠ್ ಮತ್ತು ತಂಡ ಯಶಸ್ವಿಯಾಗಿದ್ದಾರೆ.
ಇದನ್ನೂ ಸಹ ಓದಿ : ಬುಧವಾರ ಶುಭ ವಾರ ಇವತ್ತಿನ ಜಾತಕ ಫಲ ಇಲ್ಲಿದೆ https://malenadutoday.com/today-jataka-agust-13/
ಆರೋಪಿಗಳು ಶಿವಮೊಗ್ಗ ಮೂಲದವರು
ಶಿವಮೊಗ್ಗದ ಇಂದಿರಾನಗರ ಮೂಲದ ಆರು ಜನ ರಾತ್ರಿ ಸಮಯದಲ್ಲಿ ಕಾಡಿಗೆ ಬಂದು, ಮಳೆ ಬರುವ ಸಮಯದಲ್ಲಿ ಬೇಲಿ ಕತ್ತರಿಸಿ ಒಳಗೆ ಬಂದು ಶ್ರೀಗಂಧ ಮರ ಕಡಿಯಲು ಪ್ರಯತ್ನಿಸುತ್ತಿದನ್ನು ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಆ ಬಳಿಕ ಅವರನ್ನು ಮುಧೋಳ್ ನಾಯಿಯನ್ನು ಬಳಸಿ ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ಓರ್ವ ಸೆರೆಯಾಗಿದ್ದಾನೆ ಎಂದು ತಿಳಿದುಬಂದಿದೆ.
Mudhol Dog catch Sandalwood Thieves

