mp renukacharya : ಓವೈಸಿ ಅಸಾದುದ್ದೀನ್ ಧರ್ಮದ ಆಧಾರದ ಮೇಲಿನ ದಾಳಿಯನ್ನ ಖಂಡಿಸಿದ್ದಾರೆ. ಆದರೆ ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ಇದನ್ನು ಖಂಡಿಸುವ ಕೆಲಸವನ್ನು ಮಾಡಲಿಲ್ಲ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.
ಕಾಶ್ಮೀರದಲ್ಲಿ ಉಗ್ರರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ರವರ ಕುಟುಂಬಕ್ಕೆ ಇಂದು ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ದಾಳಿ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ಸರಿಯಿಲ್ಲ. ಇವರೊಂದಿಗೆ ಗೃಹ ಸಚಿವ ಪರಮೇಶ್ವರ್ ಕೂಡ ಸಾಥ್ ನೀಡಿದ್ದಾರೆ. ಸಿದ್ದರಾಮ, ಶಿವಕುಮಾರ್, ಪರಮೇಶ್ವರ್ ಅಂತ ಎಲ್ಲರೂ ಸಹ ದೇವರ ಹೆಸರನ್ನು ಇಟ್ಟುಕೊಂಡಿದ್ದಾರೆ. ಆದರೆ ಅವರು ಹಾಗೆ ಇಲ್ಲ. ಭಯೋದ್ಪಾದಕರ ಪರವಾಗಿ ಮಾತನಾಡುತ್ತಾರೆ. ಸಿಎಂ ಸಿದ್ದರಾಮಯ್ಯರವರ ಹೇಳಿಕೆಯನ್ನು ಪಾಕಿಸ್ತಾನ ಮಾಧ್ಯಮಗಳು ವೈಭೀಕರಿಸಿವೆ. ಅವರ ಪರ ಮಾತಾಡದವರಿಗೆ ಪಾಕಿಸ್ತಾನದ ಪ್ರಶಸ್ತಿ ಬರುತ್ತದೆಯೇ ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ ಈ ಘಟನೆ ಸಂಭವಿಸಿದ್ದು, ಭದ್ರತಾ ವೈಪಲ್ಯ ಎಂದು ಹೇಳಿ ಯೋಧರ ಆತ್ಮಸ್ಥೈರ್ಯ ಕುಗ್ಗಿಸುತ್ತಾರೆ. ನೀವು ಸಿಎಂ ಸ್ಥಾನದಲ್ಲಿ ಇರೋದಕ್ಕೆ ಲಾಯಕ್ಕಿಲ್ಲ. ಕೂಡಲೇ ರಾಜಿನಾಮೆ ಕೊಡಿ ಎಂದರು.
mp Renukacharya : ಮೃತರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಕೊಡಿ
ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಿಸಿದೆ. ಆದರೆ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಸಾಕಾಗುವುದಿಲ್ಲ. ಮೂವರ ಕುಟುಂಬಕಕ್ಕೆ 1 ಕೋಟಿ ರೂಪಾಯಿ ಕೊಡಬೇಕು.ಅವರೇನು ಪರಿಹಾರಕ್ಕೆ ಕಾಯುತ್ತಿಲ್ಲ. ಅದರೇ ಅವರ ಮಕ್ಕಳ ಶಿಕ್ಷಣಕ್ಕೆ ಆ ಹಣ ಅನುಕೂಲ ಅಗುತ್ತೆ. ಹೋದ ಜೀವ ವಾಪಸ್ ಬರಲ್ಲ ತಕ್ಷಣ ಪರಿಹಾರ ಕೊಡಿ ಎಂದರು