ಶಿವಮೊಗ್ಗದಲ್ಲಿ ಭಾರೀ ಮಳೆ, ಶಾಲೆಗೆ ರಜೆ! ಮಳೆಯಿಂದಾಗಿ ಎಲ್ಲೆಲ್ಲಿ ಏನೆಲ್ಲಾ ಆಯ್ತು !ನೋಡಿ

Monsoon Fury Unleashed july 25 2025 ಹೊಸನಗರದಲ್ಲಿ ಕಾಂಪೌಂಡ್ ಕುಸಿತ

Monsoon Fury Unleashed july 25 2025 ಹೊಸನಗರ: ಕಳೆದ ಎರಡು ದಿನಗಳಿಂದ ಮುಂಗಾರು ಮಳೆ (Monsoon rains) ಚುರುಕುಗೊಂಡಿದ್ದು, ಎಡೆಬಿಡದೆ ಸುರಿಯುತ್ತಿದೆ. ಇದರಿಂದಾಗಿ ವ್ಯಾಪಕ ಹಾನಿಯು ಸಹ ಉಂಟಾಗಿದೆ. ನಗರ ಹೋಬಳಿ, ನಿಟ್ಟೂರು, ನಾಗೋಡಿ ಮೊದಲಾದ ಘಟ್ಟ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ.  ನಿರಂತರ ಮಳೆಯ ಪರಿಣಾಮವಾಗಿ ಪಟ್ಟಣದ ಹಳೆ ಸಾಗರ ರಸ್ತೆಯಲ್ಲಿರುವ ದುರ್ಗಾಂಬ ದೇವಸ್ಥಾನದ ಹೊರಾವರಣದ ಕಾಂಪೌಂಡ್ ಭಾಗಶಃ ಕುಸಿದು ಬಿದ್ದಿದೆ. 

Shivamogga Rains , Hosanagara Floods , Thirthahalli Trees Fall , Agumbe Road Blocked , Monsoon Update Karnataka , Haneya Bus Incident ,Power Line Falls, Thirthahalli Tree Fall,Agumbe Road Block
Shivamogga Rains , Hosanagara Floods , Thirthahalli Trees Fall , Agumbe Road Blocked , Monsoon Update Karnataka , Haneya Bus Incident ,Power Line Falls, Thirthahalli Tree Fall,Agumbe Road Block

ದಾಸಕೊಪ್ಪದಲ್ಲಿ ಮನೆ ಚಾವಣಿ ಕುಸಿತ, ಕೊಟ್ಟಿಗೆ ನಾಶ

ಆನಂದಪುರಂ: ಸತತ ಮಳೆಯಿಂದಾಗಿ ಆನಂದಪುರಂ ಸಮೀಪದ ದಾಸಕೊಪ್ಪ ಗ್ರಾಮದಲ್ಲಿ ಶುಕ್ರವಾರ (ಜುಲೈ 25, 2025) ವಾಸದ ಮನೆಯೊಂದರ ಚಾವಣಿ ಕುಸಿದು ಹಾನಿ ಉಂಟಾಗಿದೆ. ಗ್ರಾಮದ ರಂಗಮ್ಮ ಅವರ ಮನೆ ಚಾವಣಿ ಪೂರ್ಣವಾಗಿ ಮುರಿದು, ಹಂಚುಗಳು ನೆಲಕ್ಕೆ ಬಿದ್ದಿವೆ. ಘಟನೆ ಸಂಭವಿಸಿದಾಗ ರಂಗಮ್ಮ ಮನೆಯಿಂದ ಹೊರಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಗ್ರಾ.ಪಂ. ಉಪಾಧ್ಯಕ್ಷೆ ರೂಪಾ ನಾಗರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಅಂದಾಜು ಪರಿಶೀಲಿಸಿದ್ದಾರೆ.

ಕೊಟ್ಟಿಗೆ ಕುಸಿದು ದನಗಳಿಗೆ ಗಾಯ

ಇತ್ತ ಆಚಾಪುರ ಗ್ರಾ.ಪಂ. ವ್ಯಾಪ್ತಿಯ ಮುರುಘಾಮಠ ಗ್ರಾಮದಲ್ಲಿ ಶೇಖರ ಪೂಜಾರಿ ಎಂಬುವವರಿಗೆ ಸೇರಿದ ಕೊಟ್ಟಿಗೆ ಗುರುವಾರ (ಜುಲೈ 24, 2025) ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಘಟನೆ ನಡೆದಾಗ ಕೊಟ್ಟಿಗೆಯಲ್ಲಿ ಒಟ್ಟು 12 ದನಕರುಗಳಿದ್ದು, ಅವುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗ್ರಾ.ಪಂ. ಅಧ್ಯಕ್ಷ ಖಲಿಮುಲ್ಲಾ, ಸದಸ್ಯರು ಮತ್ತು ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

Red Alert Urgent Weather Alert july 16Thirthahalli Schools rain fall report
rain fall report

ಶಿವಮೊಗ್ಗ: ವಿದ್ಯುತ್‌ ಸ್ಪರ್ಶಿಸಿ ಹಸು ಸಾವು

ಶಿವಮೊಗ್ಗ: ಆಲ್ಗೋಳ ಸಮೀಪ ವಿದ್ಯುತ್ ಕಂಬದ ಲೈನ್ ತುಂಡಾಗಿ ಬಿದ್ದ ಪರಿಣಾಮ ಮೇಯುತ್ತಿದ್ದ ಹಸುವೊಂದು ಶುಕ್ರವಾರಮೃತಪಟ್ಟಿದೆ. ಗಾಡಿಕೊಪ್ಪ ನಿವಾಸಿ ನಾಗೇಶ್ ಎಂಬುವವರಿಗೆ ಸೇರಿದ ಈ ಹಸು ವಿದ್ಯುತ್‌ ಸ್ಪರ್ಶಕ್ಕೆ ಬಲಿಯಾಗಿದೆ. ಅದೃಷ್ಟವಶಾತ್ ಘಟನೆ ನಡೆದ ಸಮಯದಲ್ಲಿ ಅಲ್ಲಿ ಯಾವುದೇ ಜನಸಂಚಾರ (Public movement) ಇರದಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

Heavy Rains  

ಹೊಸನಗರ ಮಳೆ, ಶಿವಮೊಗ್ಗ ಮಳೆ, ಆನಂದಪುರಂ ಮಳೆ, ದಾಸಕೊಪ್ಪ, ದುರ್ಗಾಂಬ ದೇವಸ್ಥಾನ, ಕಾಂಪೌಂಡ್ ಕುಸಿತ, Monsoon, Flood, Rain damage. #ShivamoggaRains #RainDamage #Monsoon2025 

Leave a Comment