ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿರುವ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​!ಕುತೂಹಲ ಮೂಡಿಸಿದ ನಡೆ

Mla BK Sangamesh, who is not coming to Bhadravathi but is trying for the post of corporation board chairman in Bengaluru itself

ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿರುವ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​!ಕುತೂಹಲ ಮೂಡಿಸಿದ ನಡೆ

KARNATAKA NEWS/ ONLINE / Malenadu today/ Jun 11, 2023 SHIVAMOGGA NEWS

ಭದ್ರಾವತಿ/ ಸಚಿವಸ್ಥಾನಕ್ಕಾಗಿ ರಾಜ್ಯರಾಜಧಾನಿ ಬೆಂಗಳೂರಲ್ಲಿಯೇ ಇದ್ದು ಶತ ಪ್ರಯತ್ನ ನಡೆಸಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್​  ಸಚಿವಸ್ಥಾನ ಸಿಗದಿದ್ದರೂ ಸಹ ಬೆಂಗಳೂರಿನಲ್ಲಿಯೇ ಕಳೆ 26 ದಿನಗಳಿಂದ ಠಿಕಾಣಿ ಹೂಡಿದ್ದಾರೆ. ಇದಕ್ಕೆ ಕಾರಣವೇ ಕುತೂಹಲವಾಗಿದೆ. ಭದ್ರಾವತಿಯ ಜನರು ಸಂಘಟನೆಗಳು ಶಾಸಕರ ದಾರಿ ಕಾಯುತ್ತಿದ್ದಾರೆ. ಆದರೆ ಸಂಗಮೇಶ್ವರ್​ ಬೆಂಗಳೂರಿನಲ್ಲಿಯೇ ತಮ್ಮ ಕ್ಷೇತ್ರದ ಜನರನ್ನ ಭೇಟಿಯಾಗುತ್ತಿದ್ದಾರೆ. 

ಮೇ.13ರಂದು ಫಲಿತಾಂಶ ಹೊರಬಿದ್ದ ನಂತರ ಬೆಂಗಳೂರಿಗೆ ತೆರಳಿದ್ದ ಸಂಗಮೇಶ್ವರ್​ ಮತ್ತೆ, ಪುನಃ ಕ್ಷೇತ್ರಕ್ಕೆ ಹಿಂದಿರುಗಿಲ್ಲ. ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನಕ್ಕಾಗಿ ಸಂಗಮೇಶ್ವರ್ ತೀವ್ರ ಪೈಪೋಟಿ ನಡೆಸಿದ್ದರು. ಆನಂತರ  ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಸಹ ತೀವ್ರ ಪೈಪೋಟಿಗೆ ಮುಂದಾಗಿದ್ದರು. ಆದರೆ ಸಚಿವ ಸ್ಥಾನ ಅವರಿಗೆ ಸಿಗಲಿಲ್ಲ.  ಇದೀಗ ಯಾವುದಾದರೂ ಪ್ರತಿಷ್ಠಿತ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನ ಸಂಗಮೇಶ್​ ಒತ್ತಾಯಿಸುತ್ತಿದ್ದಾರಂತೆ. ಈ ಬಗ್ಗೆ ಖಾತರಿ ಮಾಡಿಕೊಂಡೇ ಕ್ಷೇತ್ರಕ್ಕೆ ವಾಪಸ್ ಆಗಲಿದ್ದಾರೆ ಎನ್ನುತ್ತಿದೆ ಸ್ಥಳೀಯ ಮಾಧ್ಯಮಗಳು..


ಜೂನ್ ತಿಂಗಳ​ ವಿದ್ಯುತ್​ ಬಿಲ್​ ವಿಳಂಬ! ಕಾರಣವೇನು? ಮೆಸ್ಕಾಂ ಪ್ರಕಟಣೆಯಲ್ಲಿ ಏನಿದೆ



ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್‌ ಗ್ರಾಹಕರಿಗೆ ಜೂನ್ ತಿಂಗಳ ವಿದ್ಯುತ್ ಬಿಲ್ ವಿಳಂಬವಾಗಲಿದೆ ಎಂದು ನಗರ ಉಪ ವಿಭಾಗದ ಅಧಿಕಾರಿಗಳು ಪ್ರಕಟಣೆಯನ್ನ ಹೊರಡಿಸಿದ್ದಾರೆ. 

ಈ ಸಂಬಂಧ  ಸಹಾಯಕ ಕಾರ್ಯ ನಿರ್ವಾಹಕ  ಇಂಜಿನಿಯರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಚೇರಿ ಯಲ್ಲಿ ವಿದ್ಯುತ್‌ ದರ ಪರಿಷ್ಕರಣೆಯ ಹಿನ್ನೆಲೆಯಲ್ಲಿ,  ಆರ್ ಎಪಿಡಿಆರ್‌ಪಿ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆಯಂತೆ. ಹೀಗಾಗಿ  ಜೂನ್​ ತಿಂಗಳ ಬಿಲ್​ ವಿತರಿಸುವುದು ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.


ಶಿವಮೊಗ್ಗ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗ: ನಗರ ಉಪ ವಿಭಾಗ-2ರ ಘಟಕ-2,5,6 ರ ವ್ಯಾಪ್ತಿಯಲ್ಲಿನ ಮಂಡಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಾಗೂ ಸ್ಮಾರ್ಟ್‌ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಳಕಂಡ ಪ್ರದೇಶಗಳಲ್ಲಿ ಜೂ.11ರ ಬೆಳಗ್ಗೆ 9ರಿಂದ ಸ೦ಜೆ 6ರ ವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ?

ಪಿಯ‌ರ್​ ಲೈಟ್, ಪೇಪ‌ರ್​ ಪ್ಯಾಕ್ಟರಿ, ಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್ ವಾಟರ್ ಸಪ್ಪೆ, ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ತುಂಗಾನಗರ ಆಸ್ಪತ್ರೆ, ಚಾಲುಕ್ಯನಗರ, ಕೆಎಚ್‌ ಬಿ ಕಾಲೊನಿ, ಮೇಲಿನ ಮತ್ತು ಕೆಳಗಿನ ತುಂಗಾನಗರ, ಹಳೇ ಗೋಪಿಶೆಟ್ಟಿಕೊಪ್ಪ, ಎನ್.ಟಿ.ರಸ್ತೆ ಮತ್ತು ಬಿ.ಎಚ್. ರಸ್ತೆ ಸುತ್ತಮುತ್ತ, ಬಸ್ ನಿಲ್ದಾಣ, ಊರುಗಡೂರು, ಸುತ್ತ ಮುತ್ತಲಿನ ಪ್ರದೇಶ, ಆರ್‌ ಎಂಎಲ್ ನಗರ, ದುರ್ಗಿಗುಡಿ, ಸವಾರ್‌ ಲೈನ್ ರಸ್ತೆ, ಹರಕೆರೆ, ಗಾಂಧಿ ಬಜಾರ್, ಇಲಿಯಾಸ್ ನಗರ, ಗಾಜನೂರು, ರಾಮೇನಕೊಪ್ಪ, ಕಲ್ಲೂರು ಮಂಡಿ ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ, ಗೋವಿಂದಾ ಪುರ, ಪುರದಾಳು, ಶರಾವತಿ ನಗರದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.