ಭದ್ರಾವತಿ: ಆಲೆಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ನಾಪತ್ತೆ

ಭದ್ರಾವತಿಯ ಹಳೆಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಲೆಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮೀರುನ್ನೀಸಾ ಎಂಬ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಪ್ರಕಟಣೆಯನ್ನು ಹೊರಡಿಸಿದ್ದಾರೆ. 

ಶಿವಮೊಗ್ಗದಲ್ಲಿ ಚುರುಕಾದ ಅಡಿಕೆ ವ್ಯಾಪಾರ! ಯಾವ ತಳಿಗೆ ಎಷ್ಟಿದೆ ರೇಟು! ದಾವಣಗೆರೆ, ಚಿತ್ರದುರ್ಗ, ಶಿರಸಿ?

ಭದ್ರಾವತಿಯ ಅಮೀರ್‌ಜಾನ್ ಕಾಲೋನಿ ಹೊಳೆಹೊನ್ನೂರು ರಸ್ತೆಯಲ್ಲಿರುವ ಹೈದರ್ ಆಲಿ ಅವರ ಮನೆಯ ಆಲೆಮನೆಯಲ್ಲಿ ಕೆಲಸಕ್ಕಿದ್ದ ಇವರು, ಕಳೆದ ಡಿಸೆಂಬರ್ 16 ರಂದು ಮನೆಯಿಂದ ಹೊರಗೆ ಹೋದವರು ಇಂದಿನವರೆಗೂ ವಾಪಸ್ಸಾಗಿಲ್ಲ. ಅಹದ್ ಆಲಿ ಅವರ ಪತ್ನಿಯಾದ ಸಮೀರುನ್ನೀಸಾ ಅವರ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಕುಟುಂಬಸ್ಥರು ಪೊಲೀಸರಿಗೆ ದೂರನ್ನು ನೀಡಡಿದ್ದಾರೆ

ನಾಪತ್ತೆಯಾಗಿರುವ ಮಹಿಳೆಯು ಸುಮಾರು 4.5 ಅಡಿ ಎತ್ತರವಿದ್ದು, ಕೋಲುಮುಖ ಮತ್ತು ಸಾಧಾರಣ ಮೈಕಟ್ಟು ಹೊಂದಿದ್ದಾರೆ. ವಿಶೇಷ ಗುರುತಾಗಿ ಅವರ ಎಡ ಮೊಣಕೈ ಹತ್ತಿರ ಗೋಲಿ ಗಾತ್ರದ ಒಂದು ಗಂಟು ಇದೆ. ಉರ್ದು, ಹಿಂದಿ ಮತ್ತು ಅಸ್ಸಾಂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಇವರು, ಮನೆಯಿಂದ ಕಾಣೆಯಾಗುವ ಸಮಯದಲ್ಲಿ ಗುಲಾಬಿ ಬಣ್ಣದ ಚೂಡಿದಾರ ಧರಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. 

Missing Woman Worker from Bhadravathi 
Missing Woman Worker from Bhadravathi

ಈ ಮಹಿಳೆಯ ಬಗ್ಗೆ ಯಾರಿಗಾದರೂ ಯಾವುದೇ ರೀತಿಯ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಕೂಡಲೇ ಭದ್ರಾವತಿ ಹಳೆಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08182-261414 ಅಥವಾ ಮೊಬೈಲ್ ಸಂಖ್ಯೆ 9620348689 ಅನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Missing Woman Worker from Bhadravathi