mcgann hospital : ಮೆಗ್ಗಾನ್ ಆಸ್ಪತ್ರೆಯ ಶರಾವತಿ ಗೇಟ್ ಬಳಿ ಅಪರಿಚಿತ ಮೃತ ದೇಹ ಪತ್ತೆ | ಬಲಗೈಯಲ್ಲಿದೆ ಅರ್ಚನಾ ಹೆಸರಿನ ಟ್ಯಾಟೊ
ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಆವರಣದ ಶರಾವತಿ ಗೇಟ್ ಕ್ಯಾಂಟೀನ್ ಹಿಂಭಾಗದ ಶೌಚಾಯಲದ ಸಮೀಪ ಜೂ 04 ರಂದು ಸುಮಾರು 30-35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪ್ರಜ್ಞೆಯಿಲ್ಲದೆ ಬಿದ್ದಿದ್ದು, ಸಾರ್ವಜನಿಕರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
mcgann hospital : ಮೃತ ವ್ಯಕ್ತಿಯ ಚಹರೆ 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಗೈ ತೋಳಿನ ಮೇಲೆ ರಾಜಶೇಖರ ಹಾಗೂ ಗೂಳಿ ಮುಖದ ಚಿತ್ರ ಮತ್ತು ಬಲಗೈ ಒಳಭಾಗದಲ್ಲಿ MRS, ಅರ್ಚನಾ, A ಮಂಜು, ಬಲಗೈ ಮಣಿಕಟ್ಟಿನ ಮುಂಗೈ ಹೊರಭಾಗದಲ್ಲಿ ಕವನ, ಮಂಜು ಎಂಬ ಹಚ್ಚೆ ಗುರುತು ಇರುತ್ತದೆ. ಎರಡು ಮೊಣಕೈಗಳಿಗೆ ತರಚು ಗಾಯಗಳಿರುತ್ತದೆ. ಮೈಮೇಲೆ ಕೆಂಪು ಬಣ್ಣದ ಕಪ್ಪು ಗೆರೆಗಳಿರುವ ಅರ್ಧ ತೋಳಿನ ಟೀಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ.

ಈ ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9916882544 ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
