Max Hospital Shivamogga : ಶಿವಮೊಗ್ಗ: ಅಪರೂಪದ ಹಾಗೂ ಅಪಾಯಕಾರಿ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದ 35 ವರ್ಷದ ಮಹಿಳೆಯೊಬ್ಬರನ್ನು ನಗರದ ದುರ್ಗಿಗುಡಿಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಸಾವಿನ ದವಡೆಯಿಂದ ಪಾರು ಮಾಡಿದೆ. ಈ ಕುರಿತು ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಭಟ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆತರಲಾಗಿತ್ತು. ಪರೀಕ್ಷೆ ನಡೆಸಿದಾಗ, ಮಹಿಳೆಯ ದೇಹದ ಪ್ರಮುಖ ರಕ್ತನಾಳ (Aorta) ಊದಿಕೊಂಡು ಒಡೆದು ರಕ್ತಸ್ರಾವವಾಗುತ್ತಿರುವುದು ಕಂಡುಬಂದಿತ್ತು. ಇದು ರೋಗಿಯ ಜೀವಕ್ಕೆ ಅಪಾಯ ತಂದೊಡ್ಡಿತ್ತು ಮತ್ತು ರಕ್ತದೊತ್ತಡ ತೀವ್ರವಾಗಿ ಕುಸಿಯುತ್ತಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರ ತಂಡವು ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು.
ವೈದ್ಯರ ತಂಡವು. ಅರಿವಳಿಕೆ ತಜ್ಞರಾದ ಡಾ. ಶ್ರೀನಿವಾಸ್ ಮತ್ತು ಡಾ. ಶಿವಕುಮಾರ್ ರಕ್ತ ವರ್ಗಾವಣೆ ನಡೆಸಿ ರೋಗಿಯ ರಕ್ತದೊತ್ತಡವನ್ನು ಸ್ಥಿರಗೊಳಿಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡರು. ಇದಾದ ನಂತರ, ಡಾ. ಸುಧೀರ್ ಭಟ್ ಮತ್ತು ತಂಡ, ಉದರ ಶಸ್ತ್ರಚಿಕಿತ್ಸಕರಾದ ಡಾ. ಪ್ರಸನ್ನ ಬಸವರಾಜ್ ಮತ್ತು ಯುರಾಲಜಿಸ್ಟ್ ಡಾ. ರಾಕೇಶ್ ಬಿಸಿಲೆಹಳ್ಳಿ ಅವರ ಸಹಕಾರದೊಂದಿಗೆ ಸುಮಾರು 5 ಗಂಟೆಗಳ ಕಾಲ ಸುದೀರ್ಘ ಮತ್ತು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ಸು ಸಾಧಿಸಿದರು.
ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡ ಮಹಿಳೆ, ಶ್ರೀ ಲಕ್ಷ್ಮೀ ಮಾತನಾಡಿ, ಶ್ರೀ ಲಕ್ಷ್ಮೀ ಮಾತನಾಡಿ ಡಾ!! ಸುಧೀರ್ ಭಟ್ ಸೇರಿದಂತೆ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಆಸ್ಪತ್ರೆಯನ್ನು ನನ್ನನ್ನು ಚೆನ್ನಾಗಿ ಕೇರ್ ಮಾಡಿದ್ದಾರೆ. ಅವರೆಲ್ಲರ ಶ್ರಮ ಹಾಗೂ ಸೂಕ್ತ ಚಿಕಿತ್ಸೆಯಿಂದಾಗಿ ಇಂದು ನನಗೆ ಮರುಜನ್ಮ ಸಿಕ್ಕಂತಾಗಿದೆ. ನಾನು ಎಂದಿಗೂ ಅವರಿಗೆ ಚಿರಋಣಿ ಎಂದರು.

