ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 20 2025 : ಇತ್ತೀಚೆಗೆ ಶಿವಮೊಗ್ಗದ ವಿದ್ಯಾನಗರ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಅಪರಿಚಿತರ ತಂಡ, ಈಗ ಭದ್ರಾವತಿ ನಗರದ ಹಳೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾರೂಢ ನಗರದ ಸುತ್ತಮುತ್ತಲೂ ಕಾಣಿಸಿಕೊಂಡಿದೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ದುಷ್ಕರ್ಮಿಗಳ ತಂಡ ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸೆಪ್ಟೆಂಬರ್ 19 ರ ಮುಂಜಾನೆ 2 ರಿಂದ 3 ಗಂಟೆಯ ನಡುವೆ, ಸುಮಾರು 6 ರಿಂದ 7 ಜನರ ತಂಡ ಸಿದ್ದಾರೂಢ ನಗರದ ವಿವಿಧ ರಸ್ತೆಗಳಲ್ಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೃಶ್ಯದಲ್ಲಿ ಕಾಣುತ್ತಿರುವಂತೆ ಮನೆ ಕಾಂಪೌಂಡ್ನೊಳಗೆ ನುಸುಳುವ ದುಷ್ಕರ್ಮಿಗಳ ತಂಡ ಮುಖಕ್ಕೆ ಮುಸುಕನ್ನ ಹಾಕಿಕೊಂಡಿದ್ದರು. ಮನೆಯ ಸುತ್ತಲು ಪರಿಶೀಲನೆ ನಡೆಸಿದ ದುಷ್ಕರ್ಮಿಗಳು ಆನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಹೀಗೆ ಕೆಲವು ಮನೆಗಳಲ್ಲಿ ಓಡಾಟ ನಡೆಸಿದ ದುಷ್ಕರ್ಮಿಗಳ ಚಲನವಲನ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಇನ್ನೂ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಡಾ. ಅಶ್ವತ್ಥ ನಾರಾಯಣ ಎಂಬುವರ ಮನೆಯ ದೃಶ್ಯ ಇದಾಗಿದೆ. ದುಷ್ಕರ್ಮಿಗಳ ಓಡಾಟದ ಸದ್ದು ಕೇಳಿ ಮನೆಯವರು ಎಚ್ಚರಗೊಂಡಿದ್ದಾರೆ. ಇನ್ನೂ ಔಲ್ಡ್ ಟೌನ್ ಠಾಣೆಯ ಪೊಲೀಸ್ ಸಿಬ್ಬಂದಿ ಜೈನುಲ್ಲಾ ಮತ್ತು ಮಂಜುನಾಥ್ ಗಸ್ತು ತಿರುಗುತ್ತಿರುವುದನ್ನ ಗಮನಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಮಧ್ಯೆ ಔಲ್ಡ್ ಠಾಣೆಯ ಪೊಲೀಸರು ದುಷ್ಕರ್ಮಿಗಳಿಗಾಗಿ ಹುಡುಕಾಟ ಸಹ ನಡೆಸಿದ್ದಾರೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
