ಶಿವಮೊಗ್ಗ ಜೈಲ್​ನಲ್ಲಿದ್ದ ಮಾಸ್ಕ್​ ಮ್ಯಾನ್​ಗೆ ಜಾಮೀನು! ಆದರೆ? ವಿಷಯ ಇನ್ನಷ್ಟಿದೆ!

ajjimane ganesh

Mask Man Chinnayya get bail  ನವೆಂಬರ್ 25,  2025 : ಮಲೆನಾಡು ಟುಡೆ :ಶಿವಮೊಗ್ಗದ ಸೋಗಾನೆಯ ಸಮೀಪ ಇರುವ  ಕೇಂದ್ರ ಕಾರಾಗೃಹದಲ್ಲಿರುವ ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಸ್ವಲ್ಪ ರಿಲೀಫ್​ ಸಿಕ್ಕಿದೆ.  ಧರ್ಮಸ್ಥಳ ಗ್ರಾಮದಲ್ಲಿ ನಡೆದ ಬುರುಡೆ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪದಲ್ಲಿ ಖುದ್ದು ತಪ್ಪೊಪ್ಪಿಕೊಂಡಿರುವ ಆತನಿಗೆ ಇದೀಗ ಜಾಮೀನು ಸಿಕ್ಕಿದೆ. ಸಂಚಿಗೆ ಸಂಬಂಧಿಸಿದ ಪ್ರಮುಖ ಆರೋಪಿಯಾದ ಮಾಸ್ಕ್‌ಮ್ಯಾನ್‌ ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು  ನಿನ್ನೆದಿನ  ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶರು 1 ಲಕ್ಷ ರೂಪಾಯಿಗಳ ಬಾಂಡ್ ಅನ್ನು ಕಡ್ಡಾಯಗೊಳಿಸಿ, ಒಟ್ಟು 12 ಕಠಿಣ ನಿಯಮಗಳನ್ನು ಪಾಲಿಸುವಂತೆ ಆರೋಪಿಗೆ ನಿರ್ದೇಶನ ನೀಡಿದ್ದಾರೆ.

Mask man chinnayya Mask man interview
Mask man chinnayya Mask man interview
Mask Man Chinnayya get bail  : Mask Man Chinnayya, the main accused in the Dharmasthala 'Burude' (Skull) conspiracy case, has been granted bail by the Mangaluru District Court with a ₹1 lakh bond and 12 strict conditions. Read the full court report.
Mask Man Chinnayya get bail  : 

ವಿಶೇಷ ತನಿಖಾ ದಳ ಎಸ್ಐಟಿ ಇಡೀ ಪ್ರಕರಣದಲ್ಲಿ ಆಲ್ಮೋಸ್ಟ್ ವಿಚಾರಣೆ ನಡೆಸಿದೆಯಷ್ಟೆ ಅಲ್ಲದೆ ಪ್ರಕರಣದ ಸಂಬಂಧ  ಮಧ್ಯಂತರ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಚಿನ್ನಯ್ಯನ ಪರ ವಕೀಲರು ಜಾಮೀನು ಕೋರಿ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸದ್ಯ ಈ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಬೇಲ್ ನೀಡಿದೆ. (Mask Man Chinnayya get bail )

Mask Man Chinnayya get bail  : Mask Man Chinnayya, the main accused in the Dharmasthala 'Burude' (Skull) conspiracy case, has been granted bail by the Mangaluru District Court with a ₹1 lakh bond and 12 strict conditions. Read the full court report.
Mask Man Chinnayya get bail  : Mask Man Chinnayya, the main accused in the Dharmasthala ‘Burude’ (Skull) conspiracy case, has been granted bail by the Mangaluru District Court with a ₹1 lakh bond and 12 strict conditions. Read the full court report.

ಕಳೆದ ಆಗಸ್ಟ್​ 23 ರಂದು ಸುದೀರ್ಘ ವಿಚಾರಣೆ ಬಳಿಕ ಚಿನ್ನಯ್ಯನನ್ನು ಎಸ್​ಐಟಿ ಬಂಧಿಸಿತ್ತು. ಬಳಿಕ ಕೋರ್ಟ್​ಗೆ ಹಾಜರು ಪಡಿಸಿದ್ದ ಎಸ್​ಐಟಿ ಚಿನ್ನಯ್ಯನನ್ನ ತಮ್ಮ ವಶಕ್ಕೆ ಪಡೆದಿತ್ತು. ಇವೆಲ್ಲ ಬೆಳವಣಿಗೆಗಳ ಬಳಿಕ ಸೆಪ್ಟೆಂಬರ್ 6 ರಂದು ನ್ಯಾಯಾಂಗದ ಆದೇಶದ ಮೇರೆಗೆ ಚಿನ್ನಯ್ಯನನ್ನು ಶಿವಮೊಗ್ಗ  ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.

ಇನ್ನೂ ಚಿನ್ನಯ್ಯ ನ್ಯಾಯಾಲಯವು ವಿಧಿಸಿರುವ ಪ್ರಮುಖ 12 ಷರತ್ತುಗಳನ್ನು ಆರೋಪಿಯು ಕಡ್ಡಾಯವಾಗಿ ಪಾಲಿಸಬೇಕಿದೆ. ಇವುಗಳ ಪೈಕಿ, ನ್ಯಾಯಾಲಯದ ಅನುಮತಿಯಿಲ್ಲದೆ ಜಿಲ್ಲೆಯ ಗಡಿ ದಾಟಿ ಅಥವಾ ನ್ಯಾಯಾಲಯದ ವ್ಯಾಪ್ತಿ ಪ್ರದೇಶವನ್ನು ಬಿಟ್ಟು ತೆರಳಬಾರದು ಎಂಬುದು ಮುಖ್ಯ ಕಂಡೀಷನ್​ ಆಗಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಧ್ಯಮ, ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮಾಧ್ಯಮಗಳಿಗೆ ಹೇಳಿಕೆ ಅಥವಾ ಸಂದರ್ಶನಗಳನ್ನು ನೀಡದಂತೆ ಸೂಚನೆಯನ್ನು ನೀಡಲಾಗಿದೆ.

Mask Man Chinnayya get bail  : Mask Man Chinnayya, the main accused in the Dharmasthala 'Burude' (Skull) conspiracy case, has been granted bail by the Mangaluru District Court with a ₹1 lakh bond and 12 strict conditions. Read the full court report.
Mask Man Chinnayya get bail  : Mask Man Chinnayya, the main accused in the Dharmasthala ‘Burude’ (Skull) conspiracy case, has been granted bail by the Mangaluru District Court with a ₹1 lakh bond and 12 strict conditions. Read the full court report.

Mask Man Chinnayya get bail

ಉಳಿದಂತೆ ಆರೋಪಿಯು ಮುಂದೆ ಇದೇ ರೀತಿಯ ಯಾವುದೇ ಅಪರಾಧಗಳಿಗೆ ಕೈ ಹಾಕಬಾರದು ಮತ್ತು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸ್ಥಳ ಬಿಟ್ಟು ಹೋಗಬಾರದು. 

ಸಾಕ್ಷಿದಾರರಿಗೆ ಬೆದರಿಕೆ ಒಡ್ಡುವುದು, ಲಂಚ ಅಥವಾ ಇತರ ಆಮಿಷಗಳನ್ನು ತೋರಿಸುವುದು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಅಥವಾ ಪುರಾವೆಗಳನ್ನು ನಾಶ ಮಾಡುವಂತಿಲ್ಲ. 

ತನಿಖಾ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಅವರು ಕರೆ ಮಾಡಿದಾಗ ತನಿಖೆಗೆ ಹಾಜರಾಗಿ ತನಿಖೆಗೆ ತೊಂದರೆ ಕೊಡಬಾರದು ಎಂದು ನಿರ್ದೇಶಿಸಲಾಗಿದೆ.

ಇದಲ್ಲದೆ, ನ್ಯಾಯಾಲಯ ನೀಡುವ ದಿನಾಂಕಗಳಂದು ಕಡ್ಡಾಯವಾಗಿ ಹಾಜರಾಗಬೇಕು. ಆರೋಪಿ ಮತ್ತು ಜಾಮೀನುದಾರರು ಇಬ್ಬರೂ ತಮ್ಮ ವಿಳಾಸದ ಪುರಾವೆಗಳಾದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮೊದಲಾದ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ. 

ವಿಳಾಸದಲ್ಲಿ ಬದಲಾವಣೆ ಉಂಟಾದರೆ ಕೋರ್ಟ್‌ಗೆ ತಕ್ಷಣ ತಿಳಿಸಬೇಕು. ಹಾಗೆಯೇ, ಮೊಬೈಲ್ ನಂಬರ್, ವಾಟ್ಸ್‌ಆ್ಯಪ್, ಇಮೇಲ್ ಸೇರಿದಂತೆ ಲಭ್ಯವಿರುವ ಎಲ್ಲ ಸಂಪರ್ಕ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. 

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ದೋಷಾರೋಪಣಾ ಪಟ್ಟಿ ಅಥವಾ ಅಂತಿಮ ವರದಿ ಸಲ್ಲಿಕೆಯಾಗುವವರೆಗೆ ಪೊಲೀಸ್ ಠಾಣೆಗೆ ದಿನ ಬಿಟ್ಟು ದಿನ ಹಾಜರಾಗಿ ಸಂಬಂಧಪಟ್ಟ ದಾಖಲೆಗಳಿಗೆ ಸಹಿ ಹಾಕಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Mask Man Chinnayya get bail  : Mask Man Chinnayya, the main accused in the Dharmasthala ‘Burude’ (Skull) conspiracy case, has been granted bail by the Mangaluru District Court with a ₹1 lakh bond and 12 strict conditions. Read the full court report.
Share This Article