ಶಿವಮೊಗ್ಗ ಉದ್ಯಮಿ ಮೃತ ಮಂಜುನಾಥ್​ ಪಾರ್ಥಿವ ಶರೀರ ಇಂದು ತಡರಾತ್ರಿ ಶಿವಮೊಗ್ಗಕ್ಕೆ | ವಿಧಿ ವಿಧಾನ ಹೇಗೆ?

ಶಿವಮೊಗ್ಗ ಉದ್ಯಮಿ ಕಾಶ್ಮೀರದ ಪಹಲ್ಗಾಮ್​ಗೆ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್ ಭಯೋದ್ಪಾದಕರ ದಾಳಿಗೆ​ ಬಲಿಯಾಗಿದ್ದು ಅವರ  ಅವರ ಪಾರ್ಥೀವ ಶರೀರ ಗುರುವಾರ ಬೆಳಗ್ಗೆ 2:30 ಕ್ಕೆ  ಶಿವಮೊಗ್ಗಕ್ಕೆ ಆಗಮಿಸಲಿದೆ ಎಂದು ಶಾಸಕ ಎಸ್​ ಎನ್​ ಚೆನ್ನಬಸಪ್ಪ ತಿಳಿಸಿದರು.

ಶಿವಮೊಗ್ಗ ಉದ್ಯಮಿ ಮಂಜುನಾಥ್​ ರಾವ್​ ಮೃತದೇಹ ನಾಳೆ ಶಿವಮೊಗ್ಗಕ್ಕೆ

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಸಕರು  ಇಂದು ಸಂಜೆ (ಏಪ್ರಿಲ್​ 23) ಸಂಜೆ 6 ಗಂಟೆಗೆ ಪಾರ್ಥೀವ ಶರೀರ ಶ್ರೀನಗರದಿಂದ ವಿಮಾನದ ಮೂಲಕ ಬೆಂಗಳೂರು ತಲುಪುತ್ತದೆ. ನಂತರ ವಾಹನದಲ್ಲಿ ರಸ್ತೆ ಮೂಲಕ ಇಂದು ತಡರಾತ್ರಿ 2:30 ರ ಸುಮಾರಿಗೆ ಶಿವಮೊಗ್ಗ ತಲುಪಲಿದೆ ಎಂದರು.

ಇನ್ನೂ ಮೃತ ಮಂಜುನಾಥ್ ರಾವ್​ ರವರ ಅಂತ್ಯ ಕ್ರಿಯೆಗೆ ಸಂಭಂದಿಸಿದಂತೆ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಹಿಂದೂ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿದಾನ ನಡೆಯಲಿದೆ ಎಂದರು.

ಶಿವಮೊಗ್ಗದ ವಿಜಯನಗರದಲ್ಲಿರುವ ಸ್ವಗೃಹಕ್ಕೆ ಮಂಜುನಾಥ್​ರವರ ಪಾರ್ಥಿವ ಶರೀರವನ್ನು ಬರ ಮಾಡಿಕೊಂಡ ಮೇಲೆ ಮೃತರಿಗೆ ಶ್ರದ್ದಾಂಜಲಿ ಅರ್ಪಿಸಲಾಗುವುದು, ಆನಂತರ ಸರ್ಕಾರಿ ಗೌರವ ಸಲ್ಲಿಸಲಾಗುವುದು. ಬಳಿಕ ರೋಟರಿ ಚಿತಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಪ್ರಕ್ರಿಯೆಗಳನ್ನು ಗುಂಡಾ ಜೋಯಿಸರು ನೆರವೇರಿಸಲಿರುವರು.

ದುರ್ಘಟನೆಗಳಿಂದ ಮರಣ ಹೊಂದಿದ ಸಂದರ್ಭದಲ್ಲಿ  ನಾರಾಯಣ ಬಲಿ ನೆರವೇರಿಸುವ  ಸಂಪ್ರದಾಯವಿದ್ದು, ಮೃತ ಮಂಜುನಾಥ್​ರವರ ಅಂತ್ಯಕ್ರಿಯೆಗೂ ಮುನ್ನ ನಾರಾಯಣ ಬಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

 

Leave a Comment