ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ : ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಗರ್ಭಿಣಿಯಾಗಿದ್ದ ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದ ಪತಿಗೆ ಶಿವಮೊಗ್ಗದ ನ್ಯಾಯಾಲಯವು ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ
ಶಿವಮೊಗ್ಗ ಜೈಲು ಗೇಟ್ನಲ್ಲಿಯೇ ವಾಸೀಂ ಅರೆಸ್ಟ್!, ಮಾಳೂರು ಸಮೀಪ ಬಾಣಂತಿ ಸಾವು! ಶಿವಮೊಗ್ಗದಲ್ಲಿ ಏನೆಲ್ಲಾ ಆಯ್ತು!
ಶಿವಮೊಗ್ಗದ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ತೀರ್ಪು
ಹರೀಶ್ ಎಂಬುವವನ ವಿರುದ್ಧ ಆತನ ಪತ್ನಿ ನೀಡಿದ ದೂರಿನ ವಿಚಾರಣೆ ಪೂರ್ಣಗೊಳಿಸಿದ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯವು ಅಕ್ಟೋಬರ್ 29, 2025 ರಂದು ಈ ತೀರ್ಪು ನೀಡಿದೆ.
3 ತಿಂಗಳ ಗರ್ಭಿಣಿಯನ್ನು ಹೊರಹಾಕಿದ್ದ ಪತಿಗೆ ಜೈಲು ಶಿಕ್ಷೆ!
ಹರೀಶ್ ವಿವಾಹದ ನಂತರ, ಬೇರೆ ಮಹಿಳೆಯೊಂದಿಗೆ ಕಾನೂನುಬಾಹಿರ ಸಂಬಂಧ ಹೊಂದಿದ್ದ, ಅಲ್ಲದೆ ಈ ಕಾರಣಕ್ಕೆ ಪತ್ನಿಜೊತೆಗೆ ಜಗಳವಾಡುತ್ತಿದ್ದ. ಮೇಲಾಗಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಗಲೇ ಆಕೆಯನ್ನು ಮನೆಯಿಂದ ಹರೀಶ್ ಹೊರಹಾಕಿದ್ದ. ಬಳಿಕ ಡೆಲಿವರಿ ಆದ ಮೇಲೆ ಮನೆಗೆ ಸೇರಿಸದೇನೆ, ಹರೀಶ್, ಆತನ ತಾಯಿ, ತಂದೆ ಹಾಗೂ ಮೈದುನ ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿದ್ದರು ಎಂಬುದು ಸಂತ್ರಸ್ತೆ ನೀಡಿದ್ದ ದೂರು.
ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
ಈ ಪ್ರಕರಣದ ಕುರಿತು 2018ರಲ್ಲಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿತ್ತು. ಐಪಿಸಿ 498(ಎ), 506, ಮತ್ತು 504 ಅಡಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಸಂಬಂಧ ಆಗಿನ ತನಿಖಾಧಿಕಾರಿ ಪಿಎಸ್ಐ ಶರಾವತಿ ಎಂ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೋರ್ಟ್ನಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕಿರಣ್ ಕುಮಾರ್ ವಾದ ಮಂಡಿಸಿದ್ದರು.

ಶಿವಮೊಗ್ಗಕ್ಕೆ ಅಕ್ಕಪಡೆ ನೇಮಕಾತಿ! ಸರ್ಕಾರಿ ಕೆಲಸ ನೀವೂ ಸಹ ಮಾಡಬಹುದು! ಈ ಮಾಹಿತಿ ಓದಿ
ಪ್ರಕರಣದ ವಿಚಾರಣೆ ಮುಗಿಸಿದ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದರಾಜು ಎನ್. ಕೆ. ರವರು ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ, ಐಪಿಸಿ 498(A) ಕಲಂ ಅಡಿಯಲ್ಲಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹1,000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 30 ದಿನಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ

ಆನವಟ್ಟಿ ನಿವಾಸಿ, ಆಲ್ಕೊಳ ಇಡ್ಲಿ ಗಾಡಿ, ₹1 ಲಕ್ಷ ಮತ್ತು ಪೊಲೀಸ್ ಪ್ರಕಟಣೆಯ ಕಥೆ! ಶಿವಮೊಗ್ಗಲ್ಲಿ ಹೀಗೆಲ್ಲಾ ಆಗುತ್ತೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
