ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಸಿಗಂದೂರಿನಲ್ಲಿ ಸೇತುವೆ ಆದ ಮೇಲೆ, ಅಲ್ಲಿನ ನಾಗರಿಕರಿಗೂ ಸೇರಿದಂತೆ ಹಲವರಿಗೆ ಒಂದು ಅನುಮಾನ ಇತ್ತು. ಈ ಸೇತುವೆಯನ್ನು ದುರ್ಬಲ ಮನಸ್ಸಿನವರು ತಮ್ಮ ಜೀವನದ ಅಂತ್ಯಕ್ಕೆ ಬಳಸಿಕೊಳ್ಳುತ್ತಾರಾ? ಎನ್ನುವ ಪ್ರಶ್ನಾತ್ಮಕ ಸಂಶಯ ಕಾಡುತ್ತಲೇ ಇತ್ತು. ಇದೀಗ ಈ ಅನುಮಾನಕ್ಕೊಂದು ಪುಷ್ಟಿ ಸಿಕ್ಕಂತೆ, ಘಟನೆಯೊಂದು ಸಿಗಂದೂರು ಸೇತುವೆ ಮೇಲೆ ನಡೆದಿದೆ,

ಸಾಗರ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ದತೆ : ಮರ ಕಡಿಯುವ ಶಾಸ್ತ್ರ ಯಾವಾಗ ಗೊತ್ತಾ..?
ಕೌಟುಂಬಿಕ ಸಮಸ್ಯೆಯಿಂದ ಮನನೊಂದಿದ್ದ ಮೈಸೂರಿನ ಲೆಕ್ಕಪರಿಶೋಧಕರ ಕಚೇರಿಯ ಉದ್ಯೋಗಿ ಆಂಜನೇಯ ಎಂಬವರು, ಸಾಗರ ತಾಲೂಕಿನ ಸಿಗಂದೂರು ಸೇತುವೆಯ ಮೇಲಿಂದ ಭಾನುವಾರ ನೀರಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ ದೈವ ನಿರ್ಣಯ ಬೇರೆಯದ್ದೆ ಆಗಿತ್ತು. ಈ ವ್ಯಕ್ತಿ ಸಾಯಲು ಯತ್ನಿಸುತ್ತಿದ್ದಾನೆ ಎಂಬುದನ್ನು ಅರಿತ ಅಲ್ಲಿಯೇ ಕೆಲಸ ಮಾಡುತ್ತಿದ್ದ ಇಂಜಿನಿಯರ್ ರಂಜೇಶ್ಎಂಬವರು ಆಂಜನೇಯರನ್ನ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಕೂರಿಸಿ, ವಿಚಾರಿಸಿದ್ದಾರೆ.
ಆನಂದಪುರ : ಸಾಗರ ಬಸ್ಗೆ, ಸಿಗಂದೂರು ಹೋಗಬೇಕಿದ್ದ ಮಿನಿಬಸ್ ಡಿಕ್ಕಿ!
ನೊಂದು ಸಾವಿನ ನಿರ್ಣಯ ಮಾಡಿದ್ದ ವ್ಯಕ್ತಿಯ ಆಕ್ಷಣದ ಯೋಚನೆಯನ್ನು ಬದಲಾಯಿಸಿದ ರಂಜೇಶ್, ಆಂಜನೇಯರ ಸ್ಥಿತಿ ಕಂಡು ತಕ್ಷಣ ಆಂಬುಲೆನ್ಸ್ ವ್ಯವಸ್ಥೆ ಮಾಡಿ, ಅವರನ್ನ ಆಸ್ಪತ್ರೆಗೆ ರವಾನಿಸಿದರು. ಸ್ಥಳೀಯ ಆಸ್ಪತ್ರೆಯಿಂದ ಶಿವಮೊಗ್ಗ ಆಸ್ಪತ್ರೆಗೆ ಆಂಜನೇಯರನ್ನ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾಗರ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ದತೆ : ಮರ ಕಡಿಯುವ ಶಾಸ್ತ್ರ ಯಾವಾಗ ಗೊತ್ತಾ..?

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರೇ ಗಮನಿಸಿ: 3 ರೈಲುಗಳು ರದ್ದು, 4 ಮಾರ್ಗ ಬದಲಾವಣೆ! ಪೂರ್ತಿ ವಿವರ ಓದಿ
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಕುಟುಂಬ ಕಲಹದಿಂದ ಬೇಸತ್ತು ಸಿಗಂದೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನ: ರಕ್ಷಿಸಿದ ಎಂಜಿನಿಯರ್ Man Attempts Suicide by Jumping from Sigandur Bridge near Sagar; Saved by Engineer

