shivamogga Bengaluru Train ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ನೈರುತ್ಯ ರೈಲ್ವೆ ಇಲಾಖೆಯು ತರ್ತು ಕಾಮಗಾರಿಗಾಗಿ ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿದೆ. ಆ ಬಗೆಗಿನ ವಿವರ ಹೀಗಿದೆ. ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಅತ್ಯಾವಶ್ಯಕ ಎಂಜಿನಿಯರಿಂಗ್ ಕೆಲಸಗಳನ್ನ ರೈಲ್ವೆ ಇಲ್ಲಾಖೆ ಕೈಗೊಂಡಿದೆ. ಇದೆ ಕಾರಣಕ್ಕೆ ಬೆಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುವ ಅನೇಕ ರೈಲುಗಳ ಓಡಾಟದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ನೀಡಿದೆ.
ಇನ್ನೂ ಈ ಕಾಮಗಾರಿ ಹಿನ್ನೆಲೆಯಲ್ಲಿ ಮೂರು ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ. ದಿನಾಂಕ 17.12.2025 ಮತ್ತು 24.12.2025 ರಂದು ಒಟ್ಟು 2 ದಿನಗಳ ಕಾಲ, ಚಿಕ್ಕಮಗಳೂರು – ಯಶವಂತಪುರ (ಸಂಖ್ಯೆ 16239) ದೈನಂದಿನ ಎಕ್ಸ್‌ಪ್ರೆಸ್, ಯಶವಂತಪುರ – ಚಿಕ್ಕಮಗಳೂರು (ಸಂಖ್ಯೆ 16240) ದೈನಂದಿನ ಎಕ್ಸ್‌ಪ್ರೆಸ್ ಮತ್ತು ಕೆಎಸ್‌ಆರ್ ಬೆಂಗಳೂರು – ಮೈಸೂರು (ಸಂಖ್ಯೆ 12614) ದೈನಂದಿನ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸುವುದಿಲ್ಲ.
ಶಿವಮೊಗ್ಗ ನಾಗರಿಕರಿಗೆ ನಾಳೆ ವಿದ್ಯುತ್, ನೀರು ಪೂರೈಕೆಯಲ್ಲಿ ಸಂಕಷ್ಟ!
ಭಾಗಶಃ ರದ್ದಾದ ಟ್ರೈನ್ಗಳು/shivamogga Bengaluru Train
- ದಿನಾಂಕ 17.12.2025, 20.12.2025, 21.12.2025 ಮತ್ತು 24.12.2025 ರಂದು, ಕೆಎಸ್‌ಆರ್ ಬೆಂಗಳೂರು – ತುಮಕೂರು ಮೆಮು (ಸಂಖ್ಯೆ 66567) ರೈಲು ದೊಡ್ಡಬೆಲೆ ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಈ ಅವಧಿಯಲ್ಲಿ, ಅದು ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಓಡಾಟ ನಿಲ್ಲಿಸಲಿದೆ.
- ಅದೇ ರೀತಿ, ತುಮಕೂರು – ಕೆಎಸ್‌ಆರ್ ಬೆಂಗಳೂರು ಮೆಮು (ಸಂಖ್ಯೆ 66572) ರೈಲು ಸಹ ತುಮಕೂರಿನಿಂದ ಹೊರಡುವ ಬದಲು ದೊಡ್ಡಬೆಲೆಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.
- ತಾಳಗುಪ್ಪ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ಸಂಖ್ಯೆ 20652) ರೈಲು ಸಹ ಮೇಲಿನ ದಿನಾಂಕಗಳಂದು ಅರಸೀಕೆರೆಯಲ್ಲಿ ತನ್ನ ಓಡಾಟವನ್ನು ಅಂತ್ಯಗೊಳಿಸಲಿದ್ದು, ಅರಸೀಕೆರೆ ಮತ್ತು ಕೆಎಸ್‌ಆರ್ ಬೆಂಗಳೂರಿನ ನಡುವಿನ ಸಂಚಾರ ರದ್ದಾಗಿದೆ.
- ಈ ಅವಧಿಯಲ್ಲಿ, ಕೆಎಸ್‌ಆರ್ ಬೆಂಗಳೂರು – ಧಾರವಾಡ ಎಕ್ಸ್‌ಪ್ರೆಸ್ (ಸಂಖ್ಯೆ 12725) ರೈಲು ಕೆಎಸ್‌ಆರ್ ಬೆಂಗಳೂರಿನ ಬದಲು ಅರಸೀಕೆರೆಯಿಂದಲೇ ತನ್ನ ಸಂಚಾರವನ್ನು ಮುಂದುವರೆಸಲಿದೆ.
- ದಿನಾಂಕ 17.12.2025 ಮತ್ತು 24.12.2025 ರಂದು, ಧಾರವಾಡ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ಸಂಖ್ಯೆ 12726) ರೈಲು ಅರಸೀಕೆರೆ ಮತ್ತು ಕೆಎಸ್‌ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದೆ.
- ಇದರ ಜೊತೆಗೆ, ಕೆಎಸ್‌ಆರ್ ಬೆಂಗಳೂರು – ತುಮಕೂರು ಮೆಮು (ಸಂಖ್ಯೆ 66571) ಮತ್ತು ತುಮಕೂರು – ಕೆಎಸ್‌ಆರ್ ಬೆಂಗಳೂರು ಮೆಮು (ಸಂಖ್ಯೆ 66568) ರೈಲುಗಳು ಇದೇ ದಿನಾಂಕಗಳಂದು ದೊಡ್ಡಬೆಲೆ ನಿಲ್ದಾಣದಿಂದಲೇ ಓಡಾಟ ಆರಂಭಿಸಿ, ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದುಗೊಳ್ಳಲಿವೆ.
- ಇದೇ ದಿನಾಂಕಗಳಂದು, ಚಾಮರಾಜನಗರ – ತುಮಕೂರು ಪ್ಯಾಸೆಂಜರ್ (ಸಂಖ್ಯೆ 56281) ರೈಲು ಚಿಕ್ಕಬಾಣಾವರದಲ್ಲಿ ನಿಲ್ಲಲಿದ್ದು, ಚಿಕ್ಕಬಾಣಾವರ ಮತ್ತು ತುಮಕೂರಿನ ನಡುವಿನ ಸಂಚಾರ ರದ್ದಾಗಲಿದೆ.

ರೈಲು ಮಾರ್ಗ ಬದಲಾವಣೆ
- ದಿನಾಂಕ 16.12.2025 ಮತ್ತು 23.12.2025 ರಂದು ಹೊರಡುವ ವಾಸ್ಕೋಡ ಗಾಮ – ಯಶವಂತಪುರ ಎಕ್ಸ್‌ಪ್ರೆಸ್ (ಸಂಖ್ಯೆ 17310) ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದ್ದು, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.
- ದಿನಾಂಕ 16.12.2025 ಮತ್ತು 23.12.2025 ರಂದು ಓಡಾಟ ಆರಂಭಿಸುವ ವೇಲಂಕಣಿ – ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (ಸಂಖ್ಯೆ 17316) ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಹೋಗಲಿದ್ದು, ತುಮಕೂರು ಮತ್ತು ತಿಪಟೂರು ನಿಲುಗಡೆಗಳನ್ನು ಕಳೆದುಕೊಳ್ಳಲಿದೆ.
- ದಿನಾಂಕ 17.12.2025, 20.12.2025, 21.12.2025 ಮತ್ತು 24.12.2025 ರಂದು ಪ್ರಯಾಣ ಆರಂಭಿಸುವ ಮೈಸೂರು – ಬೆಳಗಾವಿ ಎಕ್ಸ್‌ಪ್ರೆಸ್ (ಸಂಖ್ಯೆ 17326) ರೈಲು ಮೈಸೂರು, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ಮಾರ್ಗದಲ್ಲಿ ಚಲಿಸಲಿದ್ದು, ಪಾಂಡವಪುರದಿಂದ ತಿಪಟೂರಿನವರೆಗಿನ ನಿಲುಗಡೆಗಳನ್ನು ರದ್ದುಗೊಳಿಸಲಾಗಿದ.
- ಅದೇ ದಿನಾಂಕಗಳಂದು, ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ಸಂಖ್ಯೆ 16579) (shivamogga Bengaluru Train)ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದ್ದು, ತುಮಕೂರು ಮತ್ತು ತಿಪಟೂರು ನಿಲುಗಡೆಗಳು ಇರುವುದಿಲ್ಲ.
ಮಾರ್ಗ ಮಧ್ಯೆ ನಿಯಂತ್ರಣ
- ಇದರ ಜೊತೆಗೆ, ಕೆಲವು ರೈಲುಗಳನ್ನು ಮಾರ್ಗಮಧ್ಯೆ ನಿಯಂತ್ರಿಸಿ ನಿಲ್ಲಿಸಲಾಗುವುದು. ದಿನಾಂಕ 17.12.2025 ಮತ್ತು 24.12.2025 ರಂದು ಮೂಲ ನಿಲ್ದಾಣದಿಂದ ಹೊರಡುವ ಯಶವಂತಪುರ – ಚಂಡೀಗಢ ಎಕ್ಸ್‌ಪ್ರೆಸ್ (ಸಂಖ್ಯೆ 22685), ಯಶವಂತಪುರ – ವಾಸ್ಕೋಡ ಗಾಮ ಎಕ್ಸ್‌ಪ್ರೆಸ್ (ಸಂಖ್ಯೆ 17309)
- ಕೆಎಸ್‌ಆರ್ ಬೆಂಗಳೂರು – ತಾಳಗುಪ್ಪ ಎಕ್ಸ್‌ಪ್ರೆಸ್ (ಸಂಖ್ಯೆ 20651) ರೈಲುಗಳನ್ನು ಮಾರ್ಗಮಧ್ಯೆ 15 ನಿಮಿಷಗಳ ಕಾಲ ಹಿಡಿದಿಡಲಾಗುತ್ತದೆ.
- ದಿನಾಂಕ 19.12.2025 ಮತ್ತು 20.12.2025 ರಂದು ಹೊರಡುವ ವಾಸ್ಕೋಡ ಗಾಮ – ಯಶವಂತಪುರ ಎಕ್ಸ್‌ಪ್ರೆಸ್ (ಸಂಖ್ಯೆ 17310) ರೈಲನ್ನು ಪ್ರಯಾಣದ ಸಮಯದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.

ವೇಳಾಪಟ್ಟಿ ಬದಲಾವಣೆ
- ದಿನಾಂಕ 15.12.2025 ಮತ್ತು 22.12.2025 ರಂದು ಓಡಾಟ ಆರಂಭಿಸುವ ಉದಯಪುರ ಸಿಟಿ – ಮೈಸೂರು ವೀಕ್ಲಿ ಹಮ್‌ಸಫರ್ ಎಕ್ಸ್‌ಪ್ರೆಸ್ (ಸಂಖ್ಯೆ 19667) ರೈಲು ಉದಯಪುರ ಸಿಟಿಯಿಂದ 180 ನಿಮಿಷ ತಡವಾಗಿ ಹೊರಡುವುದು
- ಶ್ರೀ ಗಂಗಾನಗರ – ತಿರುಚ್ಚಿರಾಪಳ್ಳಿ ಹಮ್‌ಸಫರ್ ವೀಕ್ಲಿ ಎಕ್ಸ್‌ಪ್ರೆಸ್ (ಸಂಖ್ಯೆ 22497) ರೈಲು ಶ್ರೀ ಗಂಗಾನಗರದಿಂದ 120 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿವೆ.
- ರೈಲು ಸಂಖ್ಯೆ 22497 ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಗಾಗಲಿದೆ.
- ದಿನಾಂಕ 17.12.2025 ಮತ್ತು 24.12.2025 ರಂದು ಹೊರಡುವ ಯಶವಂತಪುರ – ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ಸಂಖ್ಯೆ 12649)ತುಮಕೂರು – ಚಾಮರಾಜನಗರ ದೈನಂದಿನ ಪ್ಯಾಸೆಂಜರ್ (ಸಂಖ್ಯೆ 56282) ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ – ತಿರುವನಂತಪುರಂ ಉತ್ತರ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ಸಂಖ್ಯೆ 12777) ರೈಲುಗಳು ತಮ್ಮ ಮೂಲ ನಿಲ್ದಾಣಗಳಿಂದ 120 ನಿಮಿಷಗಳು ವಿಳಂಬವಾಗಿ ಹೊರಡಲಿವೆ ಎಂದು ರೈಲ್ವೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!






