Malenadu today story / SHIVAMOGGA ರಾಗಿ ಆಯ್ತು ಈಗ ನವಣೆ ಲೆಕ್ಕ ! ಒಂದು ಕೆ.ಜಿ. ನವಣೆಯಲ್ಲಿ ಎಷ್ಟು ಕಾಳಿದೆ ಅಂತಾ ಎಣಿಸಿ, ದಾಖಲೆ ಬರೆದ ಶಿವಮೊಗ್ಗ ಯುವಕ
ಲಾಕ್ಡೌನ್ ಟೈಂನಲ್ಲಿ ಕೆಲಸವಿಲ್ಲದೆ ಮನೇಲಿ ಕುಳಿತು ಏನು ಮಾಡೋದು ಅಂತಾ ಯೋಚಿಸ್ತಿದ್ದವರ ನಡುವೆ ರಾಗಿ ಎಣಿಸಿ ರೆಕಾರ್ಡ್ ಬರೆದು, ಸಾಧನೆ ಮಾಡಿದ್ದ ಸುದ್ದಿ ಈ ಮೊದಲು ಕೇಳಿದ್ದೀರಿ. ಇದೀಗ ನವಣೆ ಕಾಳು ಎಣಿಸಿದ್ದ ಸುದ್ದಿ
ಒಂದು ಕೆ.ಜಿ ನವಣೆ ಕಾಳಿನಲ್ಲಿಎಷ್ಟು ಕಾಳಿದೆ ಅಂತಾ ಎಣಿಸಿ , ಶಿವಮೊಗ್ಗದ ಗಾಂಧಿ ಬಜಾರ್ ನ ಅಶೋಕ್ ರಸ್ತೆ ನಿವಾಸಿ ಅಭಿಷೇಕ್ , ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದ್ದಾರೆ.
ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಓದುತ್ತಿರುವ ಅಭಿಷೇಕ್ ಒಂದು ಕೆ.ಜಿ ನವಣೆಯಲ್ಲಿ, 4,04,882 ಕಾಳುಗಳನ್ನು ಏಣಿಸಿ, 500 ಕ್ಕೆ ಒಂದರಂತೆ ಪ್ಯಾಕ್ ಮಾಡಿದ್ದಾರೆ. 4,04,882 ಕಾಳು ಎಣಿಸಲು 87 ಗಂಟೆ 35 ನಿಮಿಷ ತೆಗೆದುಕೊಂಡಿದ್ದಾರೆ.
ಐ.ಡಬ್ಲ್ಯೂಆರ್ ಫೌಂಡೇಷನ್ ನವರು, ವಿಡಿಯೋ ಕಾಲ್ ಮಾಡಿ ದಾಖಲೆಯ ಬಗ್ಗೆ ತಿಳಿದುಕೊಂಡು ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಾರೆ.
