ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23, 2025 : ಮಲ್ನಾಡ್ನಲ್ಲಿ ಮಳೆ ಆರ್ಭಟಕ್ಕೆ ಸಾಕಷ್ಟು ಹಾನಿ ಆಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ರೈಲ್ವೆ ಹಳಿಗಳ ಅಡಿಯಲ್ಲಿನ ಜಲ್ಲಿಕಲ್ಲುಗಳು ಕೊಚ್ಚಿ ಹೋಗಿತ್ತು. ಅದೃಷ್ಟಕ್ಕೆ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಅನಾಹುತವೊಂದು ತಪ್ಪಿದೆ.

ರೈಲ್ವೆ ಪ್ರಯಾಣಿಕರಲ್ಲಿ ವಿನಂತಿ ಮೈಸೂರು ಶಿವಮೊಗ್ಗ ಟ್ರೈನ್ ವಿಚಾರದಲ್ಲಿ ಮಹತ್ವದ ಪ್ರಕಟಣೆ
ನಡೆದಿದ್ದೇನು?
ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಚಿಕ್ಕಮಗಳೂರಿನ ಕಣಿವೆ ಗ್ರಾಮದ ಬಳಿ ಸಿಗುವ ರೈಲ್ವೆ ಹಳಿಯಡಿಗಿನ ಗ್ರ್ಯಾವೆಲ್ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು. ಇನ್ನೂ ಈ ವಿಚಾರಕ್ಕೆ ಗಮಕ್ಕಿರದೆ ಚಿಕ್ಕಮಗಳೂರು-ಶಿವಮೊಗ್ಗ ಪ್ಯಾಸೆಂಜರ್ ಟ್ರೈನ್ ಪ್ರಯಾಣ ಆರಂಭಿಸಿತ್ತು. ಅದೃಷ್ಟಕ್ಕೆ ಈ ಬಗ್ಗೆ ಡ್ಯೂಟಿಯಲ್ಲಿದ್ದ ರೈಲ್ವೆ ಸಿಬ್ಬಂದಿ ಜಲ್ಲಿಕಲ್ಲುಗಳು ಕೊಚ್ಚಿ ಹೋಗಿರುವುದನ್ನ ಗಮನಿಸಿ ಲೋಕೋ ಪೈಲೈಟ್ಗೆ ಮಾಹಿತಿ ನೀಡಿದ್ದರು. ಹೀಗಾಗಿ ಘಟನಾ ಸ್ಥಳಕ್ಕೂ ತುಸು ಹಿಂದೆಯೇ ಟ್ರೈನ್ ನಿಲ್ಲಿಸಲಾಗಿದೆ. ಇಷ್ಟರಲ್ಲಿ ಸ್ಥಳಕ್ಕೆ ಬಂದ ಹೆಚ್ಚುವರಿ ರೈಲ್ವೆ ಸಿಬ್ಬಂದಿ ಸ್ಥಳದಲ್ಲಿ ದುರಸ್ಥಿ ಕಾರ್ಯ ಕೈಗೊಂಡರು. ಆನಂತರ ಚಿಕ್ಕಮಗಳೂರು-ಶಿವಮೊಗ್ಗ ಟ್ರೈನ್ ಶಿವಮೊಗ್ಗಕ್ಕೆ ಪ್ರಯಾಣ ಮುಂದುವರಿಸಿತು. ದುರಸ್ಥಿ ಕಾರ್ಯಾಚರಣೆಯ ಹಿನ್ನಲೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಟ್ರೈನ್ ಕಣಿವೆ ಗ್ರಾಮದ ಬಳಿ ನಿಂತಿತ್ತು.

ಮಳೆ ಸುದ್ದಿ | ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್! ಮುಂದುವರಿಯಲಿದೆ ವರ್ಷಧಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Major Train Accident
