ಸಾರೆಕೊಪ್ಪ ಮಧು ಬಂಗಾರಪ್ಪ ಎಂಬ ಹೆಸರಿನ ನಾನು! ಬೆನ್ನು ತಟ್ಟಿದ ಸಿಎಂ, ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ ಡಿಸಿಎಂ!

Madhu Bangarappa takes oath as cabinet minister in Congress government

ಸಾರೆಕೊಪ್ಪ ಮಧು ಬಂಗಾರಪ್ಪ ಎಂಬ ಹೆಸರಿನ ನಾನು!  ಬೆನ್ನು ತಟ್ಟಿದ ಸಿಎಂ, ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ ಡಿಸಿಎಂ!

KARNATAKA NEWS/ ONLINE / Malenadu today/ May 27, 2023 SHIVAMOGGA NEWS

ಬೆಂಗಳೂರು, ಕರ್ನಾಟಕ ರಾಜ್ಯ ಸರ್ಕಾರ ದ ಸಚಿವರಾಗಿ ಮಧು ಬಂಗಾರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಆಗಮಿಸುತ್ತಲೇ , ಅಭಿಮಾನಿಗಳು ಘೋಷಣೆ ಕೂಗಿದರು. ಇನ್ನೂ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ  ಮಧು ಬಂಗಾರಪ್ಪ ಬಳಿಕ ರಾಜ್ಯ ಪಾಲರಿಂದ ಶಭಾಶಗಳನ್ನು ಸ್ವೀಕರಿಸಿದರು. 

ಭುಜ ತಟ್ಟಿದ ಸಿದ್ದರಾಮಯ್ಯ, ಆಶೀರ್ವಾದ ಮಾಡಿದ ಡಿಕೆಶಿ

ಇನ್ನೂ ಈ ವೇಳೆ ಸಿದ್ದರಾಮಯ್ಯರಿಗೆ  ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮಧು ಬಂಗಾರಪ್ಪರ ಬೆನ್ನತಟ್ಟಿ ಸಿದ್ದರಾಮಯ್ಯರವರು ಫೋಟೋಗೆ ಪೋಸು ಕೊಟ್ಟರು.

ಇತ್ತ ಡಿಸಿಎಂ ಶಿವಕುಮಾರ್​ರವರು ಮಧು ಬಂಗಾರಪ್ಪರವರ ತಲೆಯ ಮೇಲೆ ಕೈಯಿಟ್ಟು ಒಳ್ಳೇದಾಗಲಿ ಎಂದು ಶುಭ ಹಾರೈಸಿದರು. ಇವರ ಜೊತೆ ಸ್ಪೀಕರ್ ಯುಟಿ ಖಾದರ್​ ಕೂಡ ಮಧು ಬಂಗಾರಪ್ಪರವರಿಗೆ ಶುಭ ಹಾರೈಸಿದರು. 

ಸಾರೆ ಕೊಪ್ಪದ ನೆನಪು

ಹಿಂದೆ ಶಿವಮೊಗ್ಗದ ದೀಮಂತ ನಾಯಕ ಸಾರೆಕೊಪ್ಪ ಬಂಗಾರಪ್ಪರವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಜನಮನ ಗೆದ್ದಿದ್ದರು. ಇದೀಗ ಅವರ ಎರಡನೇ ಪುತ್ರ ಮಧು ಬಂಗಾರಪ್ಪ ಕಾಂಗ್ರೆಸ್​ ಸರ್ಕಾರದಲ್ಲಿ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಇದೇ ವೇಳೆ ಪ್ರಮಾಣ ಸ್ವೀಕರಿಸುವಾಗ ಮಧು ಬಂಗಾರಪ್ಪ ಸಾರೆಕೊಪ್ಪ ಮಧು ಬಂಗಾರಪ್ಪ ಎಂಬ ನಾನು ಎಂದೇ ಆರಂಭಿಸಿದ್ದು, ದಿವಂಗತ ಬಂಗಾರಪ್ಪನವರ ನೆನಪು ಮಾಡಿಕೊಟ್ಟಿತ್ತು.

ಶಿವರಾಜ್​ ಕುಮಾರ್ ಪ್ರಭಾವ?

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಮಧು ಬಂಗಾರಪ್ಪ ಮಂತ್ರಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಮೊದಲ ಹಂತದ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಹೀಗಾಗಿ ಅವರು ಅಸಮಾಧಾನ ಗೊಂಡಿದ್ದರು ಎನ್ನಲಾಗಿತ್ತು. ಈ ನಡುವೆ ನಟ ಶಿವರಾಜ್​ ಕುಮಾರ್ ದಂಪತಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್​ ಸುರ್ಜೆವಾಲರನ್ನ ಭೇಟಿಯಾಗಿದ್ದರು. ಈ ಭೇಟಿ ಸೌಜನ್ಯಯುತ ಭೇಟಿಯಾಗಿದ್ದರು ಸಹ ಮಧು ಬಂಗಾರಪ್ಪರಿಗೆ ಸಚಿವ ಸ್ಥಾನ ನೀಡುವಂತೆ ದಂಪತಿ ಮನವಿ ಮಾಡಿದ್ದರು ಎಂದು ಹೇಳಲಾಗುತ್ತಿತ್ತು. ಇದರ ಬೆನ್ನಲ್ಲೆ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಯ ಪಟ್ಟಿಯಲ್ಲಿ ಮಧು ಬಂಗಾರಪ್ಪರವರ ಹೆಸರು ದಾಖಲಾಗಇತ್ತು. 

ಕಾರ್​ ಡ್ರೈವ್ ಮಾಡಿದ ಶಿವಣ್ಣ

ಇನ್ನೂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಟ ಶಿವರಾಜ್​ಕುಮಾರ್ (Shivarajkumar)  ಮಧು ಬಂಗಾರಪ್ಪರವರನ್ನ ಕಾರಿನಲ್ಲಿ ಕೂರಿಸಿಕೊಂಡು ಡ್ರೈವ್ ಮಾಡಿಕೊಂಡು ಹೋಗಿದ್ಧಾರೆ. ಮುಂದೆ ತಮ್ಮ ಪತ್ನಿ ಗೀತಾ ಶಿವರಾಜ್​ ಕುಮಾರ್​ನ್ನ ಕೂರಿಸಿಕೊಂಡಿದ್ದ ಶಿವಣ್ಣ, ಹಿಂದೆ ಮಧು ಬಂಗಾರಪ್ಪ ಹಾಗೂ ಅವರ ಕುಟುಂಬವನ್ನ ಕೂರಿಸಿಕೊಂಡು ರಾಜಭವನಕ್ಕೆ ಕಾರ್ ಡ್ರೈವ್ ಮಾಡಿಕೊಂಡು ತೆರಳಿದರು. ಈ ವೇಳೆ ಮಾಧ್ಯಮದವರು ಮುತ್ತಿಕೊಂಡು  ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ, ಮಧು ಬಂಗಾರಪ್ಪ ಕೈ ಬೀಸಿ ಧನ್ಯವಾದ ಹೇಳಿದರು,