madhu bangarappa: ಮಾಜಿ ಸಚಿವ ಬೇಗಾನೆ ರಾಮಯ್ಯ ನಿಧನ | ಸಚಿವ ಮಧು ಬಂಗಾರಪ್ಪ ಸಂತಾಪ

prathapa thirthahalli
Prathapa thirthahalli - content producer

madhu bangarappa :  ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ  ಬೇಗಾನೆ ರಾಮಯ್ಯ (90) ನಿಧನರಾಗಿದ್ದಾರೆ. ವಿಷಯ ತಿಳಿದು ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ಹೊಸಹಳ್ಳಿಯ ಸೀತಾ ಫಾರಂಗೆ ಭೇಟಿ ನೀಡಿ ಮೃತ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 

Madhu Bangarappa visits Ramayya's house
Madhu Bangarappa visits Ramayya’s house

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬೇಗಾನೆ ರಾಮಯ್ಯನವರ ನಿಧನವು ಮಲೆನಾಡಿನ ರಾಜಕೀಯ ರಂಗಕ್ಕೆ ತುಂಬಲಾರದ ನಷ್ಟ. ಅವರ ಸರಳತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ಸದಾ ಸ್ಮರಣೀಯ  ಬೋರ್ವೆಲ್ ರಾಮಯ್ಯ ಎಂದೇ ಖ್ಯಾತಿ ಪಡೆದಿದ್ದ ಅವರು ಮಲೆನಾಡಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸಿದವರು. ಅವರ ಸೇವೆ ಸದಾ ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

- Advertisement -
Madhu Bangarappa offers condolences to family
Madhu Bangarappa offers condolences to family

Madhu bangarappa : ಬೋರ್ವೆಲ್​ ರಾಮಯ್ಯ ಎಂದು ಪ್ರಖ್ಯಾತಿ ಪಡೆದಿದ್ದ ಬೇಗಾನೆ ರಾಮಯ್ಯ

ಬೇಗಾನೆ ರಾಮಯ್ಯನವರು ಶೃಂಗೇರಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ  ಆರ್. ಗುಂಡೂರಾವ್ ರವರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆ ವೇಳೆಯಲ್ಲಿ ಮಲೆನಾಡಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಕೊಳವೆಬಾವಿಗಳನ್ನು ಕೊರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಈ ಕಾರ್ಯದಿಂದಾಗಿ ಅವರನ್ನು ಬೋರ್‌ವೆಲ್ ರಾಮಯ್ಯ ಎಂದು ಕರೆಯಲಾಗುತ್ತಿತ್ತು.

 

Share This Article
Leave a Comment

Leave a Reply

Your email address will not be published. Required fields are marked *