madhu bangarappa ಹೀಗೆ ಮುಂದುವರೆದರೆ ಶಿಕ್ಷಣ ಸಚಿವರಿಗೆ ಘೇರಾವ್ ಹಾಕಬೇಕಾಗುತ್ತದೆ, ಮಹೇಶ್ ಹುಲ್ಮಾರ್
ಶಿಕಾರಿಪುರ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂಸದ ಬಿವೈ ರಾಘವೇಂದ್ರ ರವರ ಬಗ್ಗೆ ಹಗುರವಾಗಿ ಮಾತನಾಡವುದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಶಿಕ್ಷಣ ಸಚಿವರಿಗೆ ಘೇರಾವ್ ಹಾಕಲಾಗುವುದು ಎಂದು ಬಿಜೆಪಿ ಮುಖಂಡ ಮಹೇಶ್ ಹುಲ್ಮಾರ್ ಹೇಳಿದರು.
ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ಅವರು ಸಂಸದ ಬಿವೈ ರಾಘವೇಂದ್ರರವರು ಸಿಗಂದೂರು ಸೇತುವೆ ರೈಲ್ವೆ ನೀರಾವರಿ ಯೋಜನೆ, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಅಭಿವೃದ್ದಿ ಕೆಲಸವನ್ನು ಮಾಡಿದ್ದಾರೆ. ಅಂತಹವರ ಬಗ್ಗೆ ಸಚಿವ ಮಧು ಬಂಗಾರಪ್ಪ ಈಚೆಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಸಂಸದರ ಬಗ್ಗೆ ಈ ರೀತಿ ಮಾತನಾಡುವುದನ್ನು ಸಚಿವರು ಮುಂದುವರೆಸಿದರೆ ಅವರಿಗೆ ಘೇರಾವ್ ಹಾಕಲಾಗುವುದು ಎಂದರು.
- Advertisement -
TAGGED:Madhu bangarappa

