madenur manu : ಮಡೆನೂರು ಮನು ನಾಯಕ ನಟನಾಗಿ ಅಭಿನಯಿಸಿರುವ ಕುಲದಲ್ಲಿ ಕಿಳ್ಯಾವುದೋ ಚಿತ್ರ ಮೇ23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದರ ನಡುವೆ ಮಡೆನೂರು ಮನು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
madenur manu : ಏನಿದು ಪ್ರಕರಣ
ಮಡೆನೂರು ಮನು ಕಾಮಿಡಿ ಕಿಲಾಡಿಗಳು ಸೀಜನ್ 02 ನ ವಿನ್ನರ್ ಆಗಿದ್ದರು. ನಂತರ ವಿವಿಧ ಕಾಮಿಡಿ ಶೋ ಗಲ್ಲಿ ನಟಿಸಿದ್ದ್ದು, ಇದೀಗ ಸಿನಿಮಾದಲ್ಲೂ ಸಹ ನಾಯಕನಾಗಿ ಅಭಿನಯಿಸಿದ್ದರು. ಆದರೆ ಆ ಸಿನಿಮಾ ಬಿಡುಗಡೆಗೂ ಮುನ್ನವೇ ಅವರೊಂದಿಗೆ ಕಾಮಿಡಿ ಶೋಗಳಲ್ಲಿ ನಟಿಸಿದ್ದ ಸಹ ಕಲಾವಿದೆಯೊಬ್ಬರು ಅತ್ಯಾಚಾರದ ಕೇಸ್ ದಾಖಲಿಸಿದ್ದಾರೆ. ಈ ಹಿನ್ನಲೆ ಮನು ಇದೀಗ ತಲೆಮರೆಸಿಕೊಂಡಿದ್ದು, ಸದ್ಯ ಆರೋಪಿಗಾಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಒಮ್ಮೆ ಶಿಕಾರಿಪುರಕ್ಕೆ ಹೋದಾಗ ಹೋಟೆಲ್ ರೂಂಗೆ ಕರೆಸಿಕೊಂಡಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ. ಈ ವೇಳೆ ನಟಿ ಗರ್ಭಿಣಿಯಾಗಿದ್ದಾರೆ. ಬಳಿಕ ಮನು ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾರೆ ಎಂದು ಸಂತ್ರಸ್ತೆ ಎಫ್ಐಆರ್ನಲ್ಲಿ ಆರೋಪಿಸಿದ್ದಾರೆ.
