ಆಗಸ್ಟ್ 30, 2025, ಶಿವಮೊಗ್ಗ, ಮಲೆನಾಡುಟುಡೆ ನ್ಯೂಸ್ , ಗಣಪತಿ ಹಬ್ಬದ ಸಡಗರದ ನಡುವೆ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ಸೈಲೆಂಟ್ ಆಗಿ ಅಧಿಕಾರಿಯೊಬ್ಬರನ್ನ ಖೆಡ್ಡಾಕ್ಕೆ ಬೀಳಿಸಿದ್ದಾರೆ. ಆಶ್ರಯ ಮನೆಯ ಖಾತೆ ನೋಂದಣಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾಧಿಕಾರಿ ಎ.ಪಿ.ಶಶಿಧರ್ ಲೋಕಾಯುಕ್ತ ಟ್ರ್ಯಾಪ್ಗೆ ಒಳಗಾಗಿದ್ದಾರೆ.
ಬೊಮ್ಮನಕಟ್ಟೆಯ ನಿವಾಸಿ ಮೊಹಮ್ಮದ್ ಆಸೀಫ್ ಉಲ್ಲಾ ಅವರು ಆಶ್ರಯ ಬಡಾವಣೆಯಲ್ಲಿ ಅಮ್ಜದ್ ಅಲಿ ಅವರಿಂದ ಮನೆ ಖರೀದಿಸಿದ್ದರು. ಈ ಮನೆಯನ್ನ ತಮ್ಮ ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳುವ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಖಾತೆ ಮಾಡಿಕೊಡಲು ಶಶಿಧರ್ ₹10,000 ಡಿಮ್ಯಾಂಡ್ ಇಟ್ಟಿದ್ದರಂತೆ. ಈ ಹಿನ್ನೆಲೆಯಲ್ಲಿ ಆಸೀಫ್ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿದ ಲೋಕಾಯುಕ್ತ ಅಧಿಕಾರಿಗಳು ರೇಡ್ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ.ರುದ್ರೇಶ್, ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
Lokayukta Traps Shivamogga Official
Lokayukta trap, Shivamogga bribe case, city corporation official arrest, Lokayukta raid, property transfer bribe, land account transfer, ಲೋಕಾಯುಕ್ತ ದಾಳಿ, ಶಿವಮೊಗ್ಗ ಸುದ್ದಿ, ಪಾಲಿಕೆ ಅಧಿಕಾರಿ ಬಂಧನ,