Lokayukta Traps Mudinakoppa Panchayat Secretary for Bribe in Shivamogga ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮುದ್ದಿನಕೊಪ್ಪ ಪಂಚಾಯಿತಿ ಕಾರ್ಯದರ್ಶಿ
Lokayukta Traps Mudinakoppa ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಜುಲೈ 17, 2025: ಇ-ಸ್ವತ್ತು ಮಾಡಿಕೊಡಲು ₹3,000 ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದ ಶಿವಮೊಗ್ಗ ತಾಲ್ಲೂಕು, ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಕುಮಾರ್ ನಾಯ್ಕ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಸಂಬಂದ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ (Lokayukta) ಅಧಿಕಾರಿಗಳು, ಟ್ರ್ಯಾಪ್ ಮಾಡಿ ಅಧಿಕಾರಿಯನ್ನು ಬಲೆಗೆ ಬೀಳಿಸಿದ್ದಾರೆ. ಪ್ರಕರಣದ ಕುರಿತಾಗಿ ಲೋಕಾಯುಕ್ತದಿಂದ ಪ್ರಕಟಣೆಯನ್ನು ನೀಡಲಾಗಿದ್ದು, ಅದರ ವಿವರ ಹೀಗಿದೆ.
ರಾಮಪುರ ಗ್ರಾಮದ ವಿನೋದ್ ಬಿ. ಎಂಬುವವರು ಅಧಿಕಾರಿಯು ಲಂಚ ಕೇಳುತ್ತಿರುವ ಬಗ್ಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ತಮ್ಮ ದೂರಿನಲ್ಲಿ, ಅವರ ತಾಯಿ ಹೆಸರಿನಲ್ಲಿರುವ 30×50 ಅಡಿ ಅಳತೆಯ ಸೈಟಿನಲ್ಲಿ ನಿರ್ಮಿಸಿರುವ 23×38 ಅಡಿ ಮನೆಯ ಇ-ಸ್ವತ್ತು (e-Swathu) ಮಾಡಿಸಲು ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಕಾರ್ಯದರ್ಶಿ ಕುಮಾರ್ ನಾಯ್ಕ್ ಅವರನ್ನು ಹಲವು ಬಾರಿ ಸಂಪರ್ಕಿಸಿದಾಗ, ಅವರು ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.



Lokayukta Traps Mudinakoppa Panchayat Secretary for Bribe in Shivamogga
ಕೊನೆಯಲ್ಲಿ ಕುಮಾರ್ ನಾಯ್ಕ್ ಈ ವಿಚಾರದಲ್ಲಿ ₹3,000 ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದು, ಹಣ ಕೇಳಿದ್ದರ ವಾಯ್ಸ್ ರೆಕಾರ್ಡ್ (Voice Record) ನ್ನು ಲೋಕಾಯುಕ್ತ ಅಧಿಕಾರಿಗಳಿಗೆ ನೀಡಿ ದೂರು ದಾಖಲಿಸಿದ್ದರು. ಇವರ ದೂರನ್ನು ಆಧರಿಸಿ ಭ್ರಷ್ಟಾಚಾರ (Corruption) ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ಕಲಂ 7(3) ಕೇಸ್ ದಾಖಲಿಸಿದ್ದ ಅಧಿಕಾರಿಗಳು ಇವತ್ತು ಆರೋಪಿತ ಅಧಿಕಾರಿಯನ್ನು ಟ್ರ್ಯಾಪ್ ಮಾಡಿದೆ.
ಇವತ್ತು ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೊಠಡಿಯಲ್ಲಿ ಕುಮಾರ್ ನಾಯ್ಕ್ ₹3,000 ಲಂಚದ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ (Trap) ಮಾಡಿ ರೆಡ್ ಹ್ಯಾಂಡ್ ಆಗಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪಿಐ ಗುರುರಾಜ್ ಎನ್. ಮೈಲಾರ ಈ ಪ್ರಕರಣ ತನಿಖೆ ನಡೆಸ್ತಿದ್ದು, ದಾಳಿಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್
ರುದ್ರೇಶ್ ಕೆ.ಪಿ., ಹಾಗೂ ಪೊಲೀಸ್ ಸಿಬ್ಬಂದಿಗಳಾದ ಯೋಗೇಶ್ ಸಿ.ಹೆಚ್.ಸಿ., ಟೀಕಪ್ಪ ಸಿ.ಹೆಚ್.ಸಿ., ಸುರೇಂದ್ರ ಸಿ.ಹೆಚ್.ಸಿ., ಮಂಜುನಾಥ್ ಸಿ.ಹೆಚ್.ಸಿ., ಬಿ.ಟಿ. ಚನ್ನೇಶ್ ಸಿ.ಪಿ.ಸಿ., ದೇವರಾಜ್ ಸಿ.ಪಿ.ಸಿ., ಪ್ರಕಾಶ್ ಬಾರಿದಮರ ಸಿ.ಪಿ.ಸಿ., ಅರುಣ್ ಕುಮಾರ್ ಯು.ಬಿ ಸಿ.ಪಿ.ಬಿ, ಮತಿ ಅಂಜಲಿ ಮ.ಪಿ.ಸಿ., ಮತಿ ಚಂದ್ರಿಬಾಯಿ ಮ.ಪಿ.ಸಿ., ಗೋಪಿ ಎ.ಪಿ.ಸಿ., ಪ್ರದೀಪ್ ಎ.ಹೆಚ್.ಸಿ., ಜಯಂತ್ ಎ.ಪಿ.ಸಿ. ಪಾಲ್ಗೊಂಡಿದ್ದರು.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://malenadutoday.com/category/shivamogga/
Lokayukta Traps Mudinakoppa Panchayat Secretary for Bribe in Shivamogga
ಲೋಕಾಯುಕ್ತ, ಶಿವಮೊಗ್ಗ, ಮುದ್ದಿನಕೊಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕುಮಾರ್ ನಾಯ್ಕ್, ಲಂಚ, ಭ್ರಷ್ಟಾಚಾರ, ಇ-ಸ್ವತ್ತು, ಟ್ರ್ಯಾಪ್, ಬಂಧನ, ಕರ್ನಾಟಕ, ವಿನೋದ್ ಬಿ, Lokayukta, Shivamogga, Mudinakoppa, Gram Panchayat Secretary, Kumaranaik, Bribe, Corruption, e-Swathu, Trap, Arrest, Karnataka, Vinod B., #Lokayukta #Shivamogga #Corruption #BribeArrest #eSwathu #Karnataka #Mudinakoppa #PanchayatSecretar