ಲೋಕಾಯುಕ್ತ ದಾಳಿ, ತಾಂಬೆ ಹಾಗೂ ರೂಪ್ಲಾ ನಾಯ್ಕ್​ ಮನೆಯಲ್ಲಿ ಏನೆಲ್ಲಾ ಸಿಕ್ತು

ಶಿವಮೊಗ್ಗ: ಇಂದು ಬೆಳ್ಳಂಬೆಳಿಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರೂಪ್ಲಾ ನಾಯ್ಕ್ ಹಾಗೂ ಅವರ ಆಪ್ತ ಸಹಾಯಕ ತಾಂಬೆ ಎಂಬುವವರ ಮನೆ ಮತ್ತು ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Lokayukta Raid Update Gold and Silver Seized
Lokayukta Raid Update Gold and Silver Seized

ಇವತ್ತಿನಿಂದ 3 ದಿನ ಕರೆಂಟ್ ಇರಲ್ಲ! ಶಿವಮೊಗ್ಗ, ಭದ್ರಾವತಿ, ಆನವಟ್ಟಿಯಲ್ಲಿ ಪವರ್ ಕಟ್ ಎಲ್ಲೆಲ್ಲಿ!

ಈ ದಾಳಿಯ ವೇಳೆ ರೂಪ್ಲಾ ನಾಯ್ಕ್ ಅವರ ಬೆಂಗಳೂರಿನ ನಿವಾಸದಲ್ಲಿ ಭಾರಿ ಪ್ರಮಾಣದ ಬೆಳ್ಳಿ, ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 650 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ಹಾಗೂ 35 ಸಾವಿರ ರೂಪಾಯಿ ನಗದನ್ನು ಲೋಕಾಯುಕ್ತ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಶಿವಮೊಗ್ಗದಲ್ಲಿರುವ ಆಪ್ತ ಸಹಾಯಕ ತಾಂಬೆ ಅವರ ಮನೆಯಲ್ಲಿಯೂ ತಪಾಸಣೆ ನಡೆಸಲಾಗಿದ್ದು, ಅಲ್ಲಿ 3.5 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ಮುಂದುವರಿಸಿದ್ದು, ಈ  ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ ಹೊರಬರಬೇಕಿದೆ.

Lokayukta Raid Update Gold and Silver Seized