SHIVAMOGGA NEWS / ONLINE / Malenadu today/ Nov 22, 2023 NEWS KANNADA
Shivamogga| Malnenadutoday.com | ಶಿವಮೊಗ್ಗ ವಿಮಾನ ನಿಲ್ದಾಣದ ಬಳಿಯಲ್ಲಿ ಇವತ್ತು ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಕಾರಣವಾಗಿದ್ದು ಏರ್ಪೋರ್ಟ್ ಕಾಂಪೌಂಡ್ ಪಕ್ಕದ ರಸ್ತೆಯನ್ನು ಬಂದ್ ಮಾಡುತ್ತಿರುವುದು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ಗೆ ಅವಕಾಶ ಕಲ್ಪಿಸುವ ಸಂಬಂಧ ಈಗಾಗಲೇ ಅಗತ್ಯವಿರುವ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ ನಿಲ್ದಾಣದಲ್ಲಿ ಆಗಬೇಕಿರುವ ಸೌಲಭ್ಯಗಳನ್ನು ಕಲ್ಪಿಸುವ ಕೆಲಸವೂ ಆರಂಭವಾಗಿದೆ.
ಇದಕ್ಕೆ ಪೂರಕವಾಗಿ ಇವತ್ತು ಏರ್ಪೋರ್ಟ್ ನ ಕಾಮಗಾರಿ ಸಿಬ್ಬಂದಿ ಓತಿಘಟ್ಟದ ಹೊಸ ಜೈಲಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಲು ಮುಂದಾಗಿದ್ದಾರೆ. ಈ ಜಾಗದಲ್ಲಿ ನೈಟ್ ಲ್ಯಾಂಡಿಗ್ಗೆ ಅವಶ್ಯಕವಾಗಿರುವ ಬೀಕಾನ್ಗಳನ್ನ ಅಳವಡಿಕೆ ಮಾಡಲಾಗುತ್ತದೆ ಎನ್ನಲಾಗಿದೆ.
READ :ಕುಂಸಿ ಬಳಿ ಟ್ರೈನ್ಗೆ ಸಿಲುಕಿ ರೈಲ್ವೆ ಸ್ಟೇಷನ್ ಮಾಸ್ಟರ್ ನಿಗೂಢ ಸಾವು!
ಆದರೆ ಈ ರಸ್ತೆ ಬಂದ್ ಮಾಡಿದರೆ ಸಿದ್ದರಹಟ್ಟಿಗೆ, ಸಿರಿಯೂರು ಗ್ರಾಮಕ್ಕೆ ಹೋಗಲು ರಸ್ತೆ ಸಂಪರ್ಕ ಕಟ್ ಆಗುವುದಲ್ಲದೇ ಸುತ್ತಿಬಳಸಿ ಬೇರೆ ರಸ್ತೆಯಲ್ಲಿ ಹೋಗಬೇಕು. ಪರ್ಯಾಯ ರಸ್ತೆಯಲ್ಲಿ ಓಡಾಡಲು ಭಯವಾಗುತ್ತದೆ ಎಂದು ಸ್ಥಳೀಯರು ರಸ್ತೆ ಬಂದ್ ಮಾಡುವುದನ್ನ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಬಳಿಕ ಸ್ಥಳಕ್ಕೆ ಬಂದ ತಹಶೀಲ್ದಾರ್ ನಾಗರಾಜ್ ಪ್ರತಿಭಟನಾ ನಿರತ ಗ್ರಾಮಸ್ಥರ ಜೊತೆ ಮಾತನಾಡಿ ಪರ್ಯಾಯ ರಸ್ತೆಗೆ ಬೀದಿದೀಪಗಳನ್ನು ಅಳವಡಿಸುವುದರ ಜೊತೆ ಅಗತ್ಯ ಸೌಲಭ್ಯಗಳನ್ನ ಒದಗಿಸುವ ಭರವಸೆ ನೀಡಿದರು. ಪರಿಣಾಮ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.