120 ಇನ್​ಸ್ಪೆಕ್ಟರ್​ಗಳ ವರ್ಗಾವಣೆ! ಯಾರು ಎಲ್ಲಿಗೆ ಟ್ರಾನ್ಸ್​ಫರ್​? ಶಿವಮೊಗ್ಗದಲ್ಲಿ ಏನೆಲ್ಲಾ ಬದಲಾವಣೆ! ವಿವರ ಓದಿ

ajjimane ganesh

ನವೆಂಬರ್, 06, 2025 ರ ಮಲೆನಾಡು ಟುಡೆ ಸುದ್ದಿ :  ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಿದೆ. ಡಿವೈಎಸ್​ಪಿಗಳ ವರ್ಗಾವಣೆ ಬೆನ್ನಲ್ಲೆ ಇದೀಗ ಪೊಲೀಸ್ ಇನ್ಸ್‌ಪೆಕ್ಟರ್​ಗಳನ್ನು ವರ್ಗಾವಣೆ ಮಾಡಲಾಗಿದೆ. 120 ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದ್ದು,  ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯದ ವಿವಿಧೆಡೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ. ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್‌ರವರ ಕಚೇರಿಯಿಂದ ಈ ಆದೇಶ ಹೊರಬಿದ್ದಿದೆ. 

ಕೃಷಿ ತೋಟಗಾರಿಕಾ ಮೇಳ
Police Inspector transfers
Police Inspector transfers

ಶಿವಮೊಗ್ಗ ಜಿಲ್ಲೆಯಿಂದ ವರ್ಗಾವಣೆಗೊಂಡ ಅಧಿಕಾರಿ/Police Inspector transfers

  1. ಇನ್​ಸ್ಪೆಕ್ಟರ್​ ರಾಘವೇಂದ್ರ ಕಂಡಿಕೆ ರವರು ಹಿರಿಯೂರು ಟೌನ್ ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆಯಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.
  2. ರಾಜಶೇಖರಯ್ಯ ಎಲ್. ರವರು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿರುವವರು, ಈಗ ಮಾಳೂರು ವೃತ್ತ, ಶಿವಮೊಗ್ಗ ಜಿಲ್ಲೆಗೆ ಸ್ಥಳ ನಿಯುಕ್ತಿಗೊಂಡಿದ್ದಾರೆ.
  3. ಶ್ರೀಧರ ಕೆ ರವರು  ಮಾಳೂರು ವೃತ್ತದಿಂದ ಕರ್ನಾಟಕ ಲೋಕಾಯುಕ್ತಗೆ ವರ್ಗಾವಣೆಗೊಂಡಿದ್ದಾರೆ.
  4. ನಾಗಮ್ಮ ಕೆ. ರವರು ಪೇಪರ್ ಟೌನ್ ಪೊ.ಠಾಣೆ, ಶಿವಮೊಗ್ಗ ಜಿಲ್ಲೆಯಿಂದ ಭದ್ರಾವತಿ ಟೌನ್‌ ವೃತ್ತ, ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.
  5. ಶ್ರೀಶೈಲ ಕುಮಾರ್ ಜೆ ರವರು ಭದ್ರಾವತಿ ಟೌನ್‌ ವೃತ್ತ, ಶಿವಮೊಗ್ಗ ಜಿಲ್ಲೆಯಿಂದ ಡಿ.ಎಸ್.ಬಿಗೆ ವರ್ಗಾವಣೆಗೊಂಡಿದ್ದಾರೆ.
  6. ಸತ್ಯನಾರಾಯಣ ವೈ ರವರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಿಂದ  ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ.
  7. ಜಗದೀಶ್ ಸಿ.ಹಂಚಿನಾಳ್ ರವರು ಡಿ.ಎಸ್.ಬಿಯಿಂದ ಮುರುಡೇಶ್ವರ ವೃತ್ತ, ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.
Police Inspector transfers
Police Inspector transfers

ಉಳಿದಂತೆ ಎಲ್ಲೆಲ್ಲಿ ಯಾರು ವರ್ಗಾವಣೆ/Police Inspector transfers

ನವೀನ ಹೆಚ್.ಎಸ್‌. ರವರು ಡಿ.ಸಿ.ಆ‌ರ್.ಬಿ., ಬೆಂಗಳೂರು ದಕ್ಷಿಣ ಜಿಲ್ಲೆ, ರಾಮನಗರದಿಂದ ಮದ್ದೂರು ಪೊ.ಠಾಣೆ, ಮಂಡ್ಯ ಜಿಲ್ಲೆಗೆ ಸ್ಥಳ ನಿಯುಕ್ತಿಗೊಂಡಿದ್ದಾರೆ.

- Advertisement -

ಶಿವಾನಂದ ನಾಗಪ್ಪ ಅಂಬಿಗೇರ ರವರು ಕುಂದಗೋಳ ಪೊ.ಠಾಣೆ, ಧಾರವಾಡ ಜಿಲ್ಲೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ.

ಮಹಾದೇವ ಎನ್ ಶಿರಹಟ್ಟಿ ರವರು ಮುಧೋಳ ವೃತ್ತ, ಬಾಗಲಕೋಟೆ ಜಿಲ್ಲೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ.

ರಾಜಶೇಖ‌ರ್ ವಿಟ್ಟೋಬ ಹಳಗೋದಿ ರವರು ಕರ್ನಾಟಕ ಲೋಕಾಯುಕ್ತದಿಂದ ಚೌಕ ಪೊ.ಠಾಣೆ, ಕಲಬುರಗಿ ನಗರಕ್ಕೆ ಸ್ಥಳ ನಿಯುಕ್ತಿಗೊಂಡಿದ್ದಾರೆ.

ಮುರಳಿ ಟಿ. ರವರು ವಿ.ವಿ.ಐ.ಪಿ. ಭದ್ರತೆ, ಬೆಂಗಳೂರು ನಗರದಿಂದ ರಾಮನಗರ ಗ್ರಾಮಾಂತರ ಪೊ.ಠಾಣೆ, ಬೆಂಗಳೂರು ದಕ್ಷಿಣ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.

ಶಿವಪ್ರಸಾದ್ ರಾವ್ ಕೆ.ಬಿ ರವರು ಮಂಡ್ಯ ಗ್ರಾಮಾಂತರ ಪೊ.ಠಾಣೆ, ಮಂಡ್ಯ ಜಿಲ್ಲೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ.

ಶಿವಶರಣ ಎಂ.ಅವಜಿ ರವರನ್ನು ಸಂಕೇಶ್ವರ ಪೊ.ಠಾಣೆ, ಬೆಳಗಾವಿ ಜಿಲ್ಲೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಸಂಕೇಶ್ವರ ಪೊ.ಠಾಣೆ, ಬೆಳಗಾವಿ ಜಿಲ್ಲೆ ಇಲ್ಲಿಯೇ ಮುಂದುವರೆಸಲಾಗಿದೆ.

ಸಿದ್ದಪ್ಪ ಎಸ್.ಶಿಮಾನಿ ರವರನ್ನು ಶಹಾಪುರ ಪೊ.ಠಾಣೆ, ಬೆಳಗಾವಿ ನಗರದಿಂದ ಕರ್ನಾಟಕ ಲೋಕಾಯುಕ್ತ (ಎಸ್.ಐ.ಟಿ) ಇಲ್ಲಿಗೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಶಹಾಪುರ ಪೊ.ಠಾಣೆ, ಬೆಳಗಾವಿ ನಗರ ಇಲ್ಲಿಯೇ ಮುಂದುವರೆಸಲಾಗಿದೆ.

ಮುನಿರೆಡ್ಡಿ ವಿ ರವರನ್ನು ಬಾಗೇಪಲ್ಲಿ ಪೊ.ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆಗೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾಗಿದೆ.

ಕೃಷ್ಣ ಟಿ.ಟಿ ರವರನ್ನು ಮಂಡ್ಯ ಪಶ್ಚಿಮ ಪೊ.ಠಾಣೆ, ಮಂಡ್ಯ ಜಿಲ್ಲೆಗೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾಗಿದೆ.

ರವೀಂದ್ರ ಎನ್ ರವರನ್ನು ಕಿಕ್ಕೇರಿ ಪೊ.ಠಾಣೆ, ಮಂಡ್ಯ ಜಿಲ್ಲೆಗೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಸಿ.ಐ.ಡಿ. ಇಲ್ಲಿಯೇ ಮುಂದುವರೆಸಲಾಗಿದೆ.

ನಿತ್ಯಾನಂದ ಪಂಡಿತ್ ರವರನ್ನು ಕೊಣಾಜೆ ಪೊ.ಠಾಣೆ, ಮಂಗಳೂರು ನಗರಕ್ಕೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Check the full list of Karnataka Police Inspector transfers and postings issued on November 5, 2025, by the DG & IGP office. This includes key transfers to Lokayukta, Shivamogga, Mandya, Kalaburagi, and the list of cancelled transfer orders

 

ಕೃಷಿ ತೋಟಗಾರಿಕಾ ಮೇಳ
Share This Article