liquor shop bandh : ರಾಜ್ಯಾದ್ಯಂತ ಈ ದಿನ ಮದ್ಯದಂಗಡಿ ಬಂದ್​ | ಯಾವಾಗ, ಕಾರಣವೇನು

prathapa thirthahalli
Prathapa thirthahalli - content producer

liquor shop bandh : ಪರವಾನಗಿ ಶುಲ್ಕ ಹಾಗೂ ಅಬಕಾರಿ ಸುಂಕ ಹೆಚ್ಚಳದಿಂದ ಬೇಸತ್ತಿರುವ ಮಧ್ಯದಂಗಡಿ ಮಾಲೀಕರು  ಮೇ 21 ರಂದು ರಾಜ್ಯದಾಧ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಬ್ರೂವರಿ ಮತ್ತು ಡಿಸ್ಟಿಲ್ಲರೀಸ್ ಅಸೋಸಿಯೇಷನ್ ಈ  ಪ್ರತಿಭಟನೆಗೆ ಕರೆ ನೀಡಿವೆ.

liquor shop bandh : ಮುಷ್ಕರಕ್ಕೆ ಕಾರಣವೇನು

ಒಂದೆಡೆ ಮದ್ಯ ಮಾರಾಟಗಾರರು ಸರ್ಕಾರ ಏರಿಸುತ್ತಿರುವ ಮದ್ಯದ ಬೆಲೆಯಿಂದ ಕಂಗಾಲಾಗಿದ್ದರೆ. ಇತ್ತ ಲೈಸನ್ಸ್​ ಶುಲ್ಕವನ್ನು ಸಹ ಏರಿಕೆ ಮಾಡುವ ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ಬ್ರಿವರಿಸ್ ವಾರ್ಷಿಕ ಲೈಸೆನ್ಸ್ ದರವನ್ನು 27 ಲಕ್ಷ ರೂಪಾಯಿಂದ 54 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಡಿಸ್ಟಲ್ಲರಿಸ್ ಹಾಗೂ ವೇರ್‌ಹೌಸ್ ವಾರ್ಷಿಕ ಶುಲ್ಕವನ್ನು 45 ಲಕ್ಷ ರೂಪಾಯಿಯಿಂದ 90 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಹಿನ್ನಲೆ ಈಗಾಗಲೇ ಮದ್ಯದ ಬೆಲೆ ಏರಿಕೆಯಿಂದ ವ್ಯಾಪಾರದಲ್ಲಿ ಕುಸಿತ ಕಂಡಿರುವ ಮದ್ಯದ ಮಾಲೀಕರಿಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಎನ್ನಲಾಗಿದೆ.  ಈಗಾಗಲೇ ಸಂಕಷ್ಟದಲ್ಲಿರುವ ಮಾಲೀಕರಿಗೆ ಈ ಲೈಸನ್ಸ್​ ಶುಲ್ಕ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹೊಸ ಶುಲ್ಕ ನೀತಿ ಜುಲೈ 1 ರಿಂದ ಜಾರಿಗೆ ಬರುತ್ತಿದೆ. ಈ ಎಲ್ಲಾ ಬೆಲೆ ಏರಿಕೆ ವಿರುದ್ದ ಕರ್ನಾಟಕದ ಮದ್ಯ ಮಾರಾಟಗಾರರು, ಮದ್ಯ ಶಾಪ್ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ.

Share This Article