lion safari Yashwant ಮಿಲನಕ್ಕೆಂದು ಹೋದವ, ಮಾನ್ಯಳ ಮೇಲೆಯೇ ಆಕ್ರಮಣ ಮಾಡಿದ್ದ ಯಶವಂತ!

lion safari Yashwant ಮಿಲನಕ್ಕೆಂದು ಹೋದವ, ಮಾನ್ಯಳ ಮೇಲೆಯೇ ಆಕ್ರಮಣ ಮಾಡಿದ್ದ ಯಶವಂತ! ಸಿಂಹದಾಮದ ಚಕ್ರವರ್ತಿಯಂತಿದ್ದ ಮೃಗರಾಜನ ಜೀವನಚರಿತ್ರೆ ಇಲ್ಲಿದೆ ಓದಿ!

ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ನೀರಿನ ಮೌನ..,ಆತನಿಲ್ಲದ ಕ್ಷಣ ಅರಗಿಸಿಕೊಳ್ಳಲಾಗದ ಸಿಬ್ಬಂದಿ..ಪ್ರೀತಿ ಮಮಕಾರ ಧಾರೆಎರೆದು ಹಾರೈಸಿದವರಿಗೆ ಮರ್ಮಾಘಾತ..

ರಾಜ್ಯದಲ್ಲಿ ಅತ್ಯಂತ ಹೆಚ್ಚು ಖ್ಯಾತಿ ಪಡೆದಿರುವ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಸೂಚಕದ ಛಾಯೆ ಆವರಿಸಿದೆ. ಪ್ರವಾಸಿಗರು ಮಾತ್ರವಲ್ಲ ಇಲ್ಲಿನ ಅಧಿಕಾರಿ ಸಿಬ್ಬಂದಿಗಳಿಗೆ ಪ್ರೀತಿಪಾತ್ರವಾಗಿದ್ದ ಯಶವಂತ ಎಂಬ ಗಂಡು ಸಿಂಹ ನೆನ್ನೆ ಅನಾರೋಗ್ಯದಿಂದ ಸಾವನ್ನಪ್ಪಿದೆ.

ಕಳೆದ ವರ್ಷವಷ್ಟೆ ಬನ್ನೇರುಘಟ್ಟದಿಂದ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಕರೆತರಲಾಗಿದ್ದ ಹನ್ನೊಂದು ವರ್ಷದ ಯಶವಂತನಿಂದ ವಂಶೋಧ್ದಾರ ಮಾಡಿಸಲು ಮೃಗಾಲಯ ಪ್ರಾಧಿಕಾರ ಚಿಂತನೆ ನಡೆಸಿತ್ತು. ಅದಕ್ಕೆ ಪೂರಕವಾಗಿ ಸಿಂಹಧಾಮದ ನಿರ್ದೇಶಕರಾದ ಡಿಸಿಎಫ್ ಮುಕುಂದ್ ಚಂದ್ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದರು.

ವನ್ಯಜೀವಿ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮುಕುಂದ್ ಚಂದ್, ತಮ್ಮ ಸರ್ವಿಸ್ ನ್ನು ವೈಲ್ಡ್ ಲೈಫ್ ನಲ್ಲಿಯೇ ಕಳೆದಿದ್ದಾರೆ. ಹೀಗಾಗಿ ವನ್ಯಪ್ರಾಣಿಗಳ ಜೀವನ ಶೈಲಿ ಹಾಗು ಮೃಗಾಲಯದಲ್ಲಿ ಅವುಗಳ ಜೀವನಶೈಲಿ ಲಾಲನೆ ಪಾಲನೆ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿದ್ದಾರೆ.

ಮೃಗಾಲಯದ ನಿರ್ದೇಶಕರಾಗಿ ಬಂದ ನಂತರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.  ವಿಪರ್ಯಾಸವೆಂದರೆ, ಇವರಿದ್ದ ಸಂದರ್ಭದಲ್ಲಿಯೇ ಸಫಾರಿಯಲ್ಲಿ ಹುಲಿ ಸಿಂಹಗಳು ಅನಾರೋಗ್ಯದಿಂದ ಸರಣಿ ರೂಪದಲ್ಲಿ ಸಾವನ್ನಪ್ಪಿವೆ. ಸಫಾರಿಯಲ್ಲಿ ಸಿಂಹಗಳ ಸಂಖ್ಯೆ ಕಡಿಮೆಯಿದ್ದ ಕಾರಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸಪಾರಿಗೆ ಎರಡು ಸಿಂಹ ಹಾಗು ಮರಿಗಳನ್ನು ತರುವಲ್ಲಿ ಮುಕುಂದ್ ಚಂದ್ ಯಶಸ್ವಿಯಾಗಿದ್ದರು. ಒಂದೇ ವಂಶವಾಹಿನಿಯ ಸಂತತಿ ಸಫಾರಿಯಲ್ಲಿದ್ದರೆ ಅವುಗಳ ಆರೋಗ್ಯದಿಂದಿರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬನ್ನೇರುಘಟ್ಟದಿಂದ ಹೊಸ ಸಂತತಿಯನ್ನು ಸಫಾರಿಗೆ ಬರಮಾಡಿಕೊಂಡಿದ್ದರು.

ಮಾನ್ಯಳ ಮೇಲೆ ಎರಗಿ ಗಂಟಲಿಗೆ ಬಾಯಿ ಹಾಕಿದ್ದ ಯಶವಂತ

ಹನ್ನೊಂದು ವರ್ಷದ ಯಶವಂತನನ್ನು ಮಾನ್ಯ ಎಂಬ ಹೆಣ್ಣು ಸಿಂಹಿಣಿ ಜೊತೆ ಸಫಾರಿಯ ಆವರಣದಲ್ಲಿ ಮೇಟಿಂಗ್ ಗೆ ಬಿಟ್ಟ ಸಂದರ್ಭದಲ್ಲಿ ಮಾನ್ಯಳಿಗೆ ಪ್ರೀತಿ ತೋರಬೇಕಾದ ಯಶವಂತ ಅಂದು ರೋಷಾವೇಶ ಹೊಂದಿದ್ದ. ಮಾನ್ಯಳ ಮೇಲೆ ಎರಗಿ, ಆಕೆಯ ಗಂಟಲಿಗೆ ಬಾಯಿ ಹಾಕಿದ್ದ.

ಗಂಟಲಿನಲ್ಲಿ ಗಾಯವಾದ ಹಿನ್ನಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾನ್ಯ ಸಾವನ್ನಪ್ಪಿತ್ತು. ಯಶವಂತ ಅದ್ಯಾಕೆ ಕೆರಳಿ ಕೆಂಡವಾಗಿದ್ನೋ ಗೊತ್ತಿಲ್ಲ. ಸ್ವಲ್ಪ ಕಾಲ ಕೇಜ್ ನಲ್ಲಿ ಇರಿಸಿದಾಗ ಶಾಂತವಾದ. ಇದಾದ ನಂತರ ಮತ್ತೆ ಯಶವಂತನನ್ನು ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಯಶವಂತನ ಕೇಶಧಾರೆ ಪ್ರವಾಸಿಗರ ಆಕರ್ಷಣೆಯಾಗಿತ್ತು. 30 ಎಕರೆ ವ್ಯಾಪ್ತಿಯ ಪ್ರದೇಶದಲ್ಲಿ ರಾಜಾಧಿರಾಜನಂತೆ ವಿರಮಿಸುತ್ತಿದ್ದ ಯಶವಂತ ಕೆಲ ಸಂದರ್ಭದಲ್ಲಿ ಪ್ರವಾಸಿಗರ ವೀಕ್ಷಣೆಗೆ ಸಿಗುತ್ತಿರಲಿಲ್ಲ. ಆಲದ ಮರದ ಕೆಳಗೆ ಬಿಡಾರ ಹೂಡಿ ಬಿಡುತ್ತಿದ್ದ. ಯಶವಂತನನ್ನು ನೋಡಲೇಬೇಕೆಂದು ಪಟ್ಟುಹಿಡಿವ ಪ್ರವಾಸಿಗರಿಗೆ ಹೇಗಾದರೂ ಮಾಡಿ ಅವನನ್ನು ತೋರಿಸಬೇಕೆಂದು ಸಿಬ್ಬಂದಿಗಳು ಮಣ್ಣಿನ ರಸ್ತೆಯಲ್ಲಿ ವಾಹನ ಚಲಾಯಿಸಿ ಹುಡುಕಾಡುವಂತ ಪರಿಸ್ಥಿತಿ ಅನೇಕ ಸಂದರ್ಭಗಳಲ್ಲಿ ಎದುರಾಗದ್ದಿದೆ.

ಕಳೆದ ಒಂದು ವಾರದಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿ ಸಿಕ್ಕಿದ್ದ ಯಶವಂತ

ಅದೇನೋ ಕಾಕತಾಳಿಯವೋ ಗೊತ್ತಿಲ್ಲ. ಸಫಾರಿಯ ಆವರಣದಲ್ಲಿ ದೂರದಲ್ಲೆಲ್ಲೋ ಕೂತು ಹಾಯಾಗಿದ್ದ ಯಶವಂತ ಇತ್ತಿಚ್ಚಿನ ದಿನಗಳಲ್ಲಿ ಪ್ರವಾಸಿಗರಿಗೆ ರಸ್ತೆಯಲ್ಲಿ ಎಲ್ಲಂದರಲ್ಲಿ ವೀಕ್ಷಣೆಗೆ ಸಿಗುತ್ತಿದ್ದ. ಯಶವಂತನ ದೇಹಕಾಯ ಕಂಡು ಪ್ರವಾಸಿಗರು ಫೀದಾ ಆಗಿದ್ರು. ತಾವು ಕೊಟ್ಟ ಹಣವು ಸಾರ್ಥಕವಾಯಿತು ಎಂಬಂತ ಭಾವ ವ್ಯಕ್ತಪಡಿಸುತ್ತಿದ್ರು. ಬಹಳ ಹೊತ್ತು ನಿಂತು ಹೊರಡುತ್ತಿದ್ದ ಯಶವಂತನ ಭಾವಚಿತ್ರ ಸೋಷಿಯಲ್ ಮಿಡಿಯಾಗಳಲ್ಲಿ ತುಂಬಾನೇ ವೈರಲ್ ಆಗಿದೆ.

ದಿಢೀರನೇ ಅನಾರೋಗ್ಯಕ್ಕಿಡಾದ ಯಶವಂತ

ಸಧೃಡಕಾಯನಾಗಿದ್ದ ಯಶವಂತ ಇದ್ದಕ್ಕಿದ್ದ ಹಾಗೆ ಕಳೆದೆರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದೆ.ವೈದ್ಯರು ಚಿಕಿತ್ಸೆ ನೀಡಿದರೂ ಸ್ಪಂಧಿಸದ ಯಶವಂತ 08-07-22 ರಂದು ಕೊನೆಯುಸಿರೆಳೆದಿದ್ದಾನೆ. ಸಿಂಹಗಳನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿಗಳು ಯಶವಂತನ ಸಾವಿಗೆ ಕಂಬನಿ ಮಿಡಿದಿದ್ದಾರೆ. ಸಫಾರಿಯಲ್ಲಿ ನೀರವ ಮೌನ ಆವರಿಸಿದೆ. ಯಶವಂತನ ಸಾವಿನಿಂದ ಸಫಾರಿಯಲ್ಲಿ ಸಿಂಹಗಳ ಸಂಖ್ಯೆ ನಾಲ್ಕಕ್ಕೆ ಕುಸಿದಿದೆ

ಮೃತ ಯಶವಂತ ಹೇಗಿದ್ದ ಆತನ ಲೈಫ್​ ಸ್ಟೈಲ್​ ಹೇಗಿತ್ತು. ಇಲ್ಲಿದೆ ನೋಡಿ ವಿಡಿಯೋ

Leave a Comment