left side over take : ಲೆಫ್ಟ್​ ಸೈಡ್​ ಓವರ್​ ಟೇಕ್​ ಪ್ರಾಣಕ್ಕೆ ಕುತ್ತು |ವಿಡಿಯೋ ಹಂಚಿಕೊಂಡ ಟ್ರಾಫಿಕ್ ಪೊಲೀಸರು

left side over take : ವಾಹಾನ ಸವಾರರು ಎಡಬದಿಯಿಂದ ಓವರ್​ಟೇಕ್ ​ ಮಾಡುವುದು ಟ್ರಾಫಿಕ್​ ನಿಯಮದ ವಿರುದ್ದವಾಗಿದೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದ ಕೆಲ ಸವಾರರು ಗಡಿಬಿಡಿಯಲ್ಲಿ ಎಡಬದಿಯಿಂದ ಓವರ್​ಟೇಕ್​ ಮಾಡುತ್ತಾರೆ. ಇದು ಕೆಲವೊಮ್ಮೆ ಅವರ ಪ್ರಾಣಕ್ಕೆ ಕುತ್ತಾಗಬಹುದು. 

left side over take : ವಿಡಿಯೋದಲ್ಲಿ ಏನಿದೆ

ಈ ಹಿನ್ನಲೆ ಜಾಗೃತಿ ಮೂಡಿಸುವ ದೃಷ್ಠಿಯಿಂದ ಶಿವಮೊಗ್ಗ ಟ್ರಾಫಿಕ್​ ಪೊಲೀಸರು​ ಅಪಘಾತದ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ. ಆ ವಿಡಿಯೋದಲ್ಲಿರುವಂತೆ ಇಬ್ಬರು ಯುವಕರು ಬೈಕ್​ನಲ್ಲಿ ಸ್ಪೀಡಾಗಿ ಮುಂದೆಯಿರುವ ಲಾರಿಯನ್ನು ಲೆಫ್ಟ್​ ಸೈಡ್​ಯಿಂದ ಒವರ್​ಟೆಕ್​ ಹೊಡೆಯಲು ಹೋಗುತ್ತಾರೆ. ಆವೇಳೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕರಿಗೆ ಡಿಕ್ಕಿ ಹೊಡೆದು ಬೈಕ್​ ಸವಾರರು ಲಾರಿಯ ಚಕ್ರದಡಿ ಸಿಲುಕುತ್ತಾರೆ. ಈ ಘಟನೆ ಎಲ್ಲಿ ನಡೆದಿದ್ದು, ಘಟನೆಯಲ್ಲಿ ಸವಾರರಿಗೆ ಏನಾಯಿತು ಎಂಬ ಮಾಹಿತಿ ಇಲ್ಲ. ಆದರೆ ಟ್ರಾಫಿಕ್​ ಪೊಲೀಸರು ಇಂತಹ ವಿಡಿಯೋಗಳನ್ನು ಶೇರ್​​ ಮಾಡಿದಾಗ ಅದನ್ನು ನೋಡಿದ ಸವಾರರು ವಾಹನ ಚಲಾಯಿಸುವಾಗ ಜಾಗೃತಿಯನ್ನು ವಹಿಸುವ ಸಂಭವ ಹೆಚ್ಚಿರುತ್ತದೆ.

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು