traffic rules : ಶಿವಮೊಗ್ಗದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ | 8 ಸಾವಿರ ದಂಡ
traffic rules : ದೇಶದಾದ್ಯಂತ ದಿನನಿತ್ಯ ಸಾವಿರಾರು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಈ ಹಿನ್ನಲೆ ಪೊಲೀಸರು ಟ್ರಾಫಿಕ್ ನಿಯಮಗಳ ಕುರಿತು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ ಸವಾರರು ಅದಕ್ಕೆ ಕ್ಯಾರೇ ಅನ್ನೋದಿಲ್ಲ. ಕೊನೆಗೆ ದಂಡ ಬಿದ್ದಾಗ ಅಯ್ಯೋ ಈ ತಪ್ಪು ಮಾಡಬಾರದಿತ್ತು ಎಂದು ಪಶ್ಚಾತಾಪ ಪಡುತ್ತಾರೆ. ಇದರ ನಡುವೆ ಕೆಲವರು ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಾರೆ. ಆದರೆ ಈಗಂತೂ ಟ್ರಾಫಿಕ್ ನಿಯಮದಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಏಕೆಂದರೆ ಎಲ್ಲಾಕಡೆ ಸಿಗ್ನಲ್ಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿರುತ್ತಾರೆ. ಹಾಗೆಯೇ ದಂಡದ ರಶೀದಿಯನ್ನು ಮನೆಗೆ ಕಳುಹಿಸುತ್ತಾರೆ.

ಅದೇ ರೀತಿ ಶಿವಮೊಗ್ಗದಲ್ಲಿ ನಿಮಯ ಉಲ್ಲಂಘಿಸಿದ ಸವಾರನೋರ್ವನ ಮೇಲೆ ಟ್ರಾಫಿಕ್ ಪೊಲಿಸರು ಸಾವಿರಾರು ರೂಪಾಯಿಯ ಉದ್ದದ ರಶೀದಿಯನ್ನು ಹರೆದಿದ್ದಾರೆ. ಬೈಕ್ ಸವಾರರೊಬ್ಬರ ತಮ್ಮ ಬೈಕ್ನಲ್ಲಿ ಹಲವು ಬಾರಿ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾರೆ. ಇದನ್ನು ಸಿಸಿ ಟಿವಿಯಲ್ಲಿ ಗಮನಿಸಿದ ಪಶ್ಚಿಮ ಸಂಚಾರ ಪೊಲೀಸರು ಬೈಕ್ ಮಾಲೀಕರಿಂದ 8,000 ರೂಪಾಯಿ ದಂಡವನ್ನು ಕಟ್ಟಿಸಿಕೊಂಡಿರುತ್ತಾರೆ.