shivamogga fast news : ಎಸ್ ಡಿ ವಿದ್ಯಾ ಸಾಗರ್​ಗೆ ಪಿ ಹೆಚ್ ​ಡಿ ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​

ಹಂಚಿಕೊಳ್ಳಿ
WhatsApp Facebook X Telegram
shivamogga fast news
shivamogga fast news ಎಸ್ ಡಿ ವಿದ್ಯಾ ಸಾಗರ್​ಗೆ ಪಿ ಹೆಚ್ ​ಡಿ ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​

shivamogga fast news :  ವಿದ್ಯಾಸಾಗರ್ ಎಸ್.ಡಿ ಗೆ ಪಿಹೆಚ್​ಡಿ

ಶಿವಮೊಗ್ಗ :  ಶಿವಮೊಗ್ಗದ ವಿದ್ಯಾನಗರದ ಪರಿಮಳ ಮತ್ತು ಎಸ್.ವಿ.ದಾನಪ್ಪನವರ್ ರವರ ಮಗ ವಿದ್ಯಸಾಗರ್ ಎಸ್.ಡಿ.  ಸಹಾಯಕ ಪ್ರಾಧ್ಯಾಪಕರು ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್ ಕಾಲೇಜು ಬೆಂಗಳೂರು ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ. ಕುವೆಂಪು ವಿಶ್ವವಿದ್ಯಾಲಯದ ಪ್ರೋ.ಪ್ರಭಾಕರ್.ಸಿ.ಜೆ ಮಾರ್ಗದರ್ಶನದಲ್ಲಿ ವಿಷನ್ ಬೇಸಡ್ ಲೇನ್ ಡಿಪಾರ್ಚರ್ ವಾರ್ನಿಂಗ್ ಅಪ್ರೋಚ್ ಫರ್ ಡ್ರೈವರ್ ಅಸಿಸ್ಟಾಂನ್ಸ್ ಕುರಿತು ಮಂಡಿಸಿದ ಪ್ರೌಢ ಪ್ರಬಂಧವನ್ನ ಕುವೆಂಪು ವಿಶ್ವವಿದ್ಯಾಲಯ ಮಾನ್ಯ ಮಾಡಿದೆ‌.

shivamogga fast news : ಎಲ್ಲರು ಕಡ್ಡಾಯವಾಗಿ ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

ಶಿವಮೊಗ್ಗ: ಎಲ್ಲರೂ ಸಹ ಜಾತಿ ಗಣತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಿ ಎಂದು ಭೋವಿ ಸಮಾಜದ ಜನರಿಗೆ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಮನವಿ ಮಾಡಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಮತ್ತು ನ್ಯಾಯಮೂರ್ತಿ ಹೆಚ್ .ಎನ್, ನಾಗಮೋಹನ್ ದಾಸ್ ಅವರ ನೇತೃತ್ವದ ಏಕ ಸದಸ್ಯ ಆಯೋಗದ ಮೂಲಕ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಭೋವಿ ಸಮಾಜದ ಜನರು, ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಜತೆಗೆ ಯಾವುದೇ ಗೊಂದಲಕ್ಕೆ ಸಿಲುಕದೆ ಜಾತಿ ಕಾಲಂ ನಲ್ಲಿ ಭೋವಿ ಅಥವಾ ವಡ್ಡರ ಎಂದೇ ನಮೂದಿಸಬೇಕೆಂದು  ಮನವಿ ಮಾಡಿದರು.

ರಾಜ್ಯಾದ್ಯಂತ ಸಮೀಕ್ಷೆ ಕಾರ್ಯವು ಮೇ.05 ರಿಂದಲೇ ಆರಂಭಗೊಂಡಿದೆ.  ಜಿಲ್ಲೆಯಲ್ಲೂ ಸಮೀಕ್ಷೆಗೆ ನಿಯೋಜಿತಗೊಂಡ ಸಿಬ್ಬಂದಿ ಮನೆ ಮನೆಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಜನರು ಯಾವುದೇ ನೆಪ ಹೇಳಿ ತಪ್ಪಿಸಿಕೊಳ್ಳದೆ ಅಥವಾ ತಾತ್ಸಾರ ಮಾಡದೆ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.

shivamogga fast news : ಲಾರಿ ಟರ್ಮಿನಲ್ ನಿರ್ಮಿಸಿ, ಲಾರಿ ಮಾಲೀಕರ ಆಗ್ರಹ

ಶಿವಮೊಗ್ಗ: ಲಾರಿಗಳನ್ನು  ನಿಲ್ಲಿಸಲು ಟ್ರಕ್​  ಟರ್ಮಿನಲ್​​ ವ್ಯವಸ್ಥೆ ಇಲ್ಲದಿರುವುದರಿಂದ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ, ಹಾಗಾಗಿ ಟ್ರಕ್​ ಟರ್ಮಿನಲ್​ ನಿರ್ಮಿಸಿಕೊಡಬೇಕೆಂದು ಎಂದು ಜಿಲ್ಲಾ ಲಾರಿ ಮಾಲೀಕರ ಸಂಘ ಮತ್ತು ಶಿವಮೊಗ್ಗ ಜಿಲ್ಲಾ ಲಾರಿ ಫೆಡರೇಷನ್ ಏಜೆಂಟ್ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ‌ ಮಾತನಾಡಿದ ಸಂಘದ ಅಧ್ಯಕ್ಷ ತಲ್ಕೀನ್  ಅಹಮದ್, ರಸ್ತೆ ಅಂಚಿನಲ್ಲಿ ಲಾರಿ ನಿಲ್ಲಿದುವುದರಿಂದ  ಲಾರಿಗಳಲ್ಲಿ ಕಳ್ಳತನ ಹಾಗೂ ಪೋಲಿಸರ ಕಾಟಗಳನ್ನು ಎದುರಿಸುತ್ತಿದ್ದೇವೆ. ಈ ಹಿಂದೆ ಟ್ರಕ್​ ಟರ್ಮಿನಲ್​ ನಿರ್ಮಿಸಿಕೊಡಿ ಎಂದು ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಉಪಯೋಗ ಆಗಿರಲಿಲ್ಲ. ಆದುದರಿಂದ ನಮ್ಮ ವಾಹನಗಳ ಸುರಕ್ಷತೆಗಾಗಿ ಹಾಗೂ ಪಾರ್ಕಿಂಗ್ ಗಾಗಿ ಆದಷ್ಟು ಬೇಗ ಟ್ರಕ್ ಟರ್ಮಿನಲ್ ಅನ್ನು ನಿರ್ಮಿಸಿಕೊಡಬೇಕಾಗಿ  ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

 ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಸರಕು ಸಾಗಾಣಿಕೆ ವಾಹನಗಳು ಇವೆ. ಆದುದರಿಂದ  ಆದಷ್ಟು ಬೇಗ ಟ್ರಕ್ ಟರ್ಮಿನಲ್ ಅನ್ನು ನಿರ್ಮಿಸಿಕೊಡಬೇಕಾಗಿ ಮನವಿ ಮಾಡಿದರು.

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor