ಟಿಕೆಟ್ ಕೊಡಿ ಅಜ್ಜಿ ಎಂದಿದ್ದಕ್ಕೆ ಕಪಾಳಕ್ಕೆ ಹೊಡೆದರಾ ಲೇಡಿ ಕಂಡಕ್ಟರ್! ವೈರಲ್ ಸ್ಟೋರಿ

Malenadu Today

KARNATAKA  |  Jan 11, 2024  |  ‘ಅಜ್ಜಿ ಟಿಕೆಟ್ ಕೊಡಿ’ ಅಂತ ಕೇಳಿದ್ದಕ್ಕೆ ಲೇಡಿ ಕಂಡಕ್ಟ‌ರ್ ಕಪಾಳ ಮೋಕ್ಷ!

ಕೆಲವೊಮ್ಮೆ ತೀರಾ ಅಪರೂಪದಂತಹ ಪ್ರಕರಣಗಳು ವೈರಲ್ ಆಗಿ ಸುದ್ದಿಯಾಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಡ್ಯ   ಜಿಲ್ಲೆ  ಕೆ.ಎಂ.ದೊಡ್ಡಿಯಿಂದ ಮಂಡ್ಯಕ್ಕೆ ಚಲಿಸುತ್ತಿದ್ದ ಸಾರಿಗೆ ಬಸ್‌ ನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. 

ವಿದ್ಯಾರ್ಥಿನಿಯೊಬ್ಬರು ಲೇಡಿ ಕಂಡಕ್ಟರ್​ಗೆ ಅಜ್ಜಿ ಟಿಕೆಟ್ ಕೊಡಿ ಎಂದಿದ್ದಕ್ಕೆ ಆಕೆಯ ಕೆನ್ನೆಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.  

ಘಟನೆ ಖಂಡಿಸಿ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.  ಭಾರತೀನಗರದಿಂದ ಮಂಡ್ಯಕ್ಕೆ ಚಲಿಸುತ್ತಿದ್ದ ವೇಳೆ ಈ ಘಟನೆಯು ನಡೆದಿದೆ ಎಂದು ಹೇಳಲಾಗಿದೆ. 

ವಿದ್ಯಾರ್ಥಿನಿಯೊಬ್ಬರು ಕಂಡಕ್ಟರ್ ರವರನ್ನ  ‘ಟಿಕೆಟ್ ಕೊಡಿ ಅಜ್ಜಿ’ ಎಂದು ಕೇಳಿದ್ದರಂತೆ. ಇದಕ್ಕೆ ಕೋಪಗೊಂಡ ಕಂಡಕ್ಟರ್​  ವಿದ್ಯಾರ್ಥಿನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಡಿ.ಕೆ.ಲತಾ ಆರೋಪಿಸಿದ್ದಾರೆ.

ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಎದುರು ಮಹಿಳಾ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ವಿದ್ಯಾರ್ಥಿನಿಯ ಎಡಕಿವಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.  

Share This Article