Labour Minister ಪೊಲೀಸರೊಂದಿಗೆ ಪುಷ್ ಅಪ್ ಹೊಡೆದ ಸಚಿವ ಸಂತೋಷ್ ಲಾಡ್ : ವಿಡಿಯೋ ವೈರಲ್
ವಿವಿಧ ಕಾರ್ಯಕ್ರಮಗಳ ನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಹೆಲಿಪ್ಯಾಡ್ ಪೊಲೀಸ್ ಸಿಬ್ಬಂದಿಗಳ ಜೊತೆ ಪುಷ್‌ಅಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾರ್ಮಿಕ ಕಟ್ಟಡಗಳ ಉದ್ಘಾಟನೆ ಮತ್ತು ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಸಚಿವರು, ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ತಂಗಿದ್ದರು. ಸೋಮವಾರ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದಾಗ, ಹೆಲಿಪ್ಯಾಡ್ ಸಿಬ್ಬಂದಿಯೊಂದಿಗೆ ಪುಷ್‌ಅಪ್ ಮಾಡುವ ಸ್ಪರ್ಧೆಗೆ ಇಳಿದರು.
ಈ ವೇಳೆ ಒಂದೇ ಬಾರಿಗೆ 41 ಪುಷ್‌ಅಪ್‌ಗಳನ್ನ ಸಚಿವರು ಮಾಡಿದರು. ಸಚಿವರು ಪುಷ್‌ಅಪ್ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.