ನಗರದೊಳಗೆ ಬಂದ ಕೆಎಸ್​ಆರ್​ಟಿಸಿ ಬಸ್ಸನ್ನು ತಡೆದ ಪೊಲೀಸರು : ಕಾರಣವೇನು 

prathapa thirthahalli
Prathapa thirthahalli - content producer

KSRTC Staff & Police Argue ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದ್ದರೂ, ಪರ್ಯಾಯ ಮಾರ್ಗವನ್ನು ಬಿಟ್ಟು ಕೆಎಸ್‌ಆರ್‌ಟಿಸಿ (KSRTC) ಬಸ್ಸೊಂದು ನಗರದ ಒಳಗೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಡುವೆ ಕೆಲಕಾಲ ವಾಗ್ವಾದ ನಡೆದ ಘಟನೆ ಇಂದು ನಡೆದಿದೆ.

ಶಿವಮೊಗ್ಗ: ಕೇವಲ 9 ದಿನಗಳಲ್ಲಿ ಮಹಿಳಾ ಇಂಜಿನಿಯರ್‌ಗೆ 11 ಲಕ್ಷ ವಂಚನೆ! 

KSRTC Staff & Police Argue 
KSRTC Staff & Police Argue

ನಗರದ ಪ್ರಮುಖ ರಸ್ತೆಗಳಲ್ಲಿ ಭಾರಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದರು. ಆದರೂ, ಇಂದು ಪರ್ಯಾಯ ಮಾರ್ಗ ಬಿಟ್ಟು ನಗರದ ಒಳಗೆ ಪ್ರವೇಶಿಸಿದ ಬಸ್ಸಿನ ಬಗ್ಗೆ ಸಂಚಾರಿ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಶಿವಮೊಗ್ಗದ ಗೋಪಿ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನು ತಡೆದ ಸಂಚಾರಿ ಪೊಲೀಸರು, ನಿಯಮ ಉಲ್ಲಂಘಿಸಿದರೆ ಟ್ರಾಫಿಕ್ ಕಂಟ್ರೋಲ್ ಮಾಡುವುದು ಹೇಗೆ?” ಎಂದು ಪ್ರಶ್ನಿಸಿದರು.

ಪೊಲೀಸರ ಆಕ್ಷೇಪಕ್ಕೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ವಾಗ್ವಾದ ನಡೆಯಿತು. ಸಿಬ್ಬಂದಿ ಮತ್ತು ಪ್ರಯಾಣಿಕರು, ಪ್ರಯಾಣಿಕರಿಗೆ ಸಮಸ್ಯೆ ಮಾಡದಂತೆ ಪೊಲೀಸರೊಂದಿಗೆ ವಾದಿಸಿದರು.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಕೂಡಲೇ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳನ್ನು ಕರೆಸಿದರು. ನಾಳೆಯಿಂದ ಸರಿಯಾದ ಮಾರ್ಗದಲ್ಲಿಯೇ ಬಸ್ ಸಂಚರಿಸಲು ಸೂಚಿಸುವಂತೆ ಅಧಿಕಾರಿಗಳಿಗೆ ಪೊಲೀಸರು ಮನವಿ ಮಾಡಿದರು. 

KSRTC Staff & Police Argue 

KSRTC Staff & Police Argue 

Share This Article