ನವೆಂಬರ್ 11 2025 ಮಲೆನಾಡು ಟುಡೆ ಸುದ್ದಿ : ಬಸ್ನಿಂದ ಬಿದ್ದು ಮೃತಪಟ್ಟ ಹೇಮಾವತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಚೆಕ್ ಹಸ್ತಾಂತರ ಕರಾರಸಾ ನಿಗಮದಿಂದ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು
ಶಿವಮೊಗ್ಗ-ಭದ್ರಾವತಿ ನಡುವಿನ ಮಾರ್ಗದಲ್ಲಿ ಸಂಭವಿಸಿದ ದುರಂತವೊಂದಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಬಳಿಕ ಸಂತ್ರಸ್ತರ ಕುಟುಂಬಕ್ಕೆ ಕೆಎಸ್ಆರ್ಟಿಸಿ ಪರಿಹಾರ ಒದಿಗಿಸಿದೆ. KSRTC ಬಸ್ನಲ್ಲಿ ಸಂಭವಿಸಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಾಲ್ಲೂಕಿನ ಹಳೇ ಭಂಡಾರಹಳ್ಳಿ ಗ್ರಾಮದ ನಿವಾಸಿ ಕುಮಾರಿ ಹೇಮಾವತಿ (19) ಅವರ ಕುಟುಂಬಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪರಿಹಾರ ನೀಡಿದೆ.
ತೀರ್ಥಹಳ್ಳಿ : ಬೇರೆ ಅಂಗಡಿಯಲ್ಲಿ ಪಟಾಕಿ ಖರೀದಿಸಿದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
ಭದ್ರಾವತಿ ನಿವಾಸಿ ಹೇಮಾವತಿ ಸಾವಿನ ಪ್ರಕರಣ
2024ರ ಅಕ್ಟೋಬರ್ 22 ರಂದು ಶಿವಮೊಗ್ಗ ಭದ್ರಾವತಿ ರಸ್ತೆಯಲ್ಲಿ ಬಸ್ನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಹೇಮಾವತಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ, ನಿನ್ನೆ ದಿನ ಅಂದರೆ, ನವೆಂಬರ್ 10 ರಂದು ಕ.ರಾ.ರ.ಸಾ.ನಿಗಮದ ಅಪಘಾತ ಪರಿಹಾರ ನಿಧಿಯಿಂದ ₹10 ಲಕ್ಷ ರೂಪಾಯಿಗಳ ಮೊತ್ತದ ಪರಿಹಾರ ಚೆಕ್ನ್ನು ಮೃತ ಹೇಮಾವತಿ ಅವರ ತಂದೆ ರಮೇಶ್ ಅವರಿಗೆ ಹಸ್ತಾಂತರಿಸಲಾಗಿದೆ.
ನವೆಂಬರ್ 21 ಪೊಲೀಸ್ ಇಲಾಖೆಯಲ್ಲಿ ವಾಹನಗಳ ಹರಾಜು ನಡೆಯಲಿದೆ
ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ (Divisional Controller) ನವೀನ್ ಟಿ.ಆರ್. ಈ ಚೆಕ್ ವಿತರಿಸಿದ್ದು, ಈ ಬಗ್ಗೆ ಕೆಎಸ್ಆರ್ಟಿಸಿ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ

ಡಿಸೆಂಬರ್ ಒಳಗೆ ಶಿವಮೊಗ್ಗದಲ್ಲಿ ಗುಂಡಿ ಇರಲ್ಲ, ಇ-ಪೇಪರ್ನಲ್ಲಿ ಇನ್ನಷ್ಟು ಸುದ್ದಿಗಳು
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

