ಮೃತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂಪಾಯಿ

ajjimane ganesh

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ  ಸಿಬ್ಬಂದಿಯೊಬ್ಬರ ಕುಟುಂಬಕ್ಕೆ  ಕೋಟಿ ರೂಪಾಯಿ ಪರಿಹಾರ ಸಿಕ್ಕಿದೆ. ಕೆಎಸ್‌ಆರ್‌ಟಿಸಿ ಚಾಲಕರಾಗಿದ್ದ ವೀರಣ್ಣ ಸೇಬಿನಕಟ್ಟಿ  ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.  ಅವರ ಕುಟುಂಬಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಪಘಾತ ವಿಮಾ ಯೋಜನೆಯಡಿ ಒಟ್ಟು 1 ಕೋಟಿ ರೂಪಾಯಿ (1 Crore Insurance) ಪರಿಹಾರ ಮೊತ್ತವನ್ನು ಗುರುವಾರ ಚೆಕ್‌ ಮೂಲಕ ನೀಡಲಾಯಿತು. 

20 ಸೆಕೆಂಡ್​ನಲ್ಲಿ ಕದ್ದು ಬಿಟ್ಟರು! ಮೂಕ ಪ್ರಾಣಿಯ ಕಳ್ಳತನಕ್ಕೆ ಮೌನ ಸಾಕ್ಷಿಯಾದ ಸಾಗರ!

ಶಿವಮೊಗ್ಗದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ವಿಜಯ ಸಾಯಿ ಮಡುಗಲ ಅವರು ಮೃತರ ಕುಟುಂಬದ ಸದಸ್ಯರಿಗೆ ಪರಿಹಾರದ ಚೆಕ್‌ ಅನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಕ ಟಿ.ಆರ್. ನವೀನ್, ಎಸ್‌ಬಿಐ ಅಧಿಕಾರಿಗಳು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಉಪಸ್ಥಿತರಿದ್ದರು.

1 Crore Insurance
1 Crore Insurance

ತೆಪ್ಪ ದುರಂತದಲ್ಲಿ ಮೃತಪಟ್ಟ ಪೂರ್ಣೇಶ್‌ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ

ಇದೇ ವೇಳೆ, ಹೊಸನಗರ ತಾಲ್ಲೂಕಿನ ಹೊಸೂರು-ಸಂಪೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಟ್ವಾಡಿ ಗ್ರಾಮದ ಚಕ್ರಾ ಹಿನ್ನೀರು ಪ್ರದೇಶದಲ್ಲಿ ತೆಪ್ಪ ದುರಂತದಲ್ಲಿ ಮೃತಪಟ್ಟಿದ್ದ ಯುವಕ ಪೂರ್ಣೇಶ್ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರ ಮೊತ್ತದ ಚೆಕ್‌ ಅನ್ನು ಶಾಸಕ ಆರಗ ಜ್ಞಾನೇಂದ್ರ ಅವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ಭಾಗದ ಪರಿಶಿಷ್ಟ ಕುಟುಂಬಗಳಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ, ಪೂರ್ಣೇಶ್ ಮೃತಪಟ್ಟ ಜಾಗದ ಬಳಿ 25 ಲಕ್ಷ ರೂಪಾಯಿ ಅನುದಾನದಲ್ಲಿ ಕಾಲುಸೇತುವೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಸೇತುವೆ ನಿರ್ಮಾಣ ಕಾಮಗಾರಿಯು ಮುಂದಿನ ಬೇಸಿಗೆಯಲ್ಲಿ ತ್ವರಿತಗತಿಯಲ್ಲಿ ಆರಂಭವಾಗಲಿದೆ ಎಂದೂ ಅವರು ತಿಳಿಸಿದರು. ಈ ವೇಳೆ ತಹಶೀಲ್ದಾರ್ ಭರತ್ ರಾಜ್, ಶಿರಸ್ತೇದಾರ್ ಮಂಜುನಾಥ್, ಹಾಗೂ ಪ್ರಮುಖರಾದ ಕೆ.ವಿ. ಕೃಷ್ಣಮೂರ್ತಿ, ರಮಾಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

1 Crore Insurance
1 Crore Insurance

ಇಂಡಿಗೋ ವಿಮಾನ ರದ್ದು : ಶಿವಮೊಗ್ಗ ಪ್ರಯಾಣಿಕರ ಪರದಾಟ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಕೆಎಸ್‌ಆರ್‌ಟಿಸಿ ಚಾಲಕನ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ಚೆಕ್ ಹಸ್ತಾಂತರ ಹೊಸನಗರ ದುರಂತದ ಕುಟುಂಬಕ್ಕೆ ₹ 5 ಲಕ್ಷ KSRTC Drivers Family Gets 1 Crore Insurance; ₹ 5 Lakh Relief for Boat Accident Victim 
Share This Article