ks eshwarappa : ಕಾಂಗ್ರೆಸ್​ನಲ್ಲಿ ಮೂರು ಜನರಿಗೆ ಬುದ್ದಿ ಭ್ರಮಣೆ ಆಗಿದೆ | ಕೆ ಎಸ್​ ಈಶ್ವರಪ್ಪ

prathapa thirthahalli
Prathapa thirthahalli - content producer

ks eshwarappa : ಕಾಂಗ್ರೆಸ್​ನಲ್ಲಿ ಮೂರು ಜನರಿಗೆ ಬುದ್ದಿ ಭ್ರಮಣೆ ಆಗಿದೆ | ಕೆ ಎಸ್​ ಈಶ್ವರಪ್ಪ

ks eshwarappa : ಮಲ್ಲಿಕಾರ್ಜುನ್​ ಖರ್ಗೆ ಭಾಷಣದ ವೇಳೆ ನಮ್ಮ ಪಾಕಿಸ್ತಾನ ಎಂದು  ಹೇಳಿದ್ದಾರೆ ಎನ್ನಲಾದ ವಿಚಾರದ ಬಗ್ಗೆ ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಇಂದು ಶಿವಮೊಗ್ಗದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ ಸರ್ಕಾರದಲ್ಲಿ ಮೂರು ಜನಕ್ಕೆ ಬುದ್ದಿ ಭ್ರಮಣೆ ಆಗಿದೆ. ದೇಶದಲ್ಲಿ ಆಪರೇಷನ್​ ಸಿಂಧೂರ ನಡೆಯುತ್ತಿದ್ದಾಗ ಸಿದ್ದರಾಮಯ್ಯರವರು ಯುದ್ದ ಯಾಕೇ ಮಾಡಬೇಕು ಎಂದರು. ನಂತರ ಅವರೇ ಸಿಂಧೂರ ಹಾಕಿಕೊಂಡು ಬಂದು ಯುದ್ದದ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡಿದರು. ಸಿಎಂ ಸಿದ್ದರಾಮಯ್ಯನವರಿಗೆ ಈಗ ಬುದ್ದಿ ಬಂದಿದೆ. ಎರಡನೇಯದಾಗಿ ಪ್ರಿಯಾಂಕ್​ ಖರ್ಗೆಯವರಿಗೂ ಬುದ್ದಿಭ್ರಮಣೆ ಆದಂತಿದೆ ಯಾವಾಗ ಏನು ಮಾತನಾಡುತ್ತಾರೋ ಅವರಿಗೇ ಗೊತ್ತಿಲ್ಲ. ಇವರೊಂದಿಗೆ ಕೊತ್ತೂರು ಮಂಜುನಾಥ್,ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಸೇರಿದಂತೆ ಅನೇಕರು ಸೇರಿಕೊಂಡಿದ್ದಾರೆ. ಕೊನೆಯದಾಗಿ ಮಲ್ಲಿಕಾರ್ಜುನ್​ ಖರ್ಗೆಯವರಿಗೂ ಬುದ್ದಿ  ಬುದ್ದಿ ಭ್ರಮಣೆ  ಆಗಿದ್ದು ಮೊದಲು ಯದ್ದದ ಸಂದರ್ಭದಲ್ಲಿ ಬೆಂಬಲ ಘೋಷಿಸಿದ್ದ ಅವರು ಈಗ ಏನೇನೋ ಮಾತನಾಡುತ್ತಾರೆ. ಪ್ರಪಂಚವೇ ಮೋದಿಯವರ ಪರವಾಗಿದೆ ಈ ಸಂದರ್ಭದಲ್ಲಿ ಇವರು ಈ ಹೇಳಿಕೆ ನೀಡುತ್ತಾರೆ. ಮುಂದೆ ಇವರೆಲ್ಲರು ಸರಿ ಆಗೇ ಆಗುತ್ತಾರೆ. ಭಾರತ ದೇಶದಲ್ಲಿ ಇದ್ದುಕೊಂಡು ಪಾಕಿಸ್ತಾನದ ಪರ ಮಾತನಾಡುವವರಿಗೆ ಗುಂಡಿಟ್ಟು ಹೊಡೆಯುವ ಕಾನೂನು ತರಬೇಕು ಎಂದರು.

Share This Article